• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗರೀಬ್ ಕಲ್ಯಾಣ್ ರೋಜ್‌ಗಾರ್ ಯೋಜನೆ; ಮುಖ್ಯಾಂಶಗಳು

|

ನವದೆಹಲಿ, ಜೂನ್ 18 : ಲಾಕ್ ಡೌನ್ ಸಮಯದಲ್ಲಿ ತವರು ರಾಜ್ಯಕ್ಕೆ ವಾಪಸ್ ಆದ ವಲಸೆ ಕಾರ್ಮಿಕರಿಗೆ ಉದ್ಯೋಗ ನೀಡಲು ಕೇಂದ್ರ ಸರ್ಕಾರ 'ಗರೀಬ್ ಕಲ್ಯಾಣ್ ರೋಜ್‌ಗಾರ್ ಯೋಜನೆ' ಜಾರಿಗೆ ತರಲಿದೆ. ಪ್ರಧಾನಿ ನರೇಂದ್ರ ಮೋದಿ ಜೂನ್ 20ರಂದು ಈ ಯೋಜನೆಗೆ ಚಾಲನೆ ನೀಡಲಿದ್ದಾರೆ.

   Corona takes more than 2000 lives in a single day in India | Oneindia Kannada

   ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಯೋಜನೆ ಕುರಿತು ವಿವರ ನೀಡಿದರು. 'ಗರೀಬ್ ಕಲ್ಯಾಣ್ ರೋಜ್‌ಗಾರ್ ಯೋಜನೆ' ಯಡಿ ವಲಸೆ ಕಾರ್ಮಿಕರಿಗೆ ವರ್ಷದ 125 ದಿನಗಳ ಕಾಲ ಉದ್ಯೋಗವನ್ನು ನೀಡಲಾಗುತ್ತದೆ ಎಂದರು.

   ವಲಸೆ ಕಾರ್ಮಿಕರಿಗೆ ಮೋದಿ ಕೊಡಲಿದ್ದಾರೆ ಗಿಫ್ಟ್

   ಶನಿವಾರ ಬೆಳಗ್ಗೆ 11ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಬಿಹಾರದಲ್ಲಿ 'ಗರೀಬ್ ಕಲ್ಯಾಣ್ ರೋಜ್‌ಗಾರ್ ಯೋಜನೆ'ಗೆ ಚಾಲನೆ ನೀಡಲಿದ್ದಾರೆ. ಕೇಂದ್ರ ಸರ್ಕಾರ ಈ ಯೋಜನೆಗಾಗಿ 50 ಸಾವಿರ ಕೋಟಿ ರೂ.ಗಳನ್ನು ಮೀಸಲಾಗಿಟ್ಟಿದೆ. ವಲಸೆ ಕಾರ್ಮಿಕರಿಗೆ ಉದ್ಯೋಗ ನೀಡುವುದು ಯೋಜನೆಯ ಮುಖ್ಯ ಗುರಿಯಾಗಿದೆ.

   ಈ ಮೂರು ರಾಜ್ಯಗಳಿಗೆ ವಲಸೆ ಕಾರ್ಮಿಕರು ವಾಪಸ್ ಆಗಿದ್ದು ಹೆಚ್ಚು!

   ಲಾಕ್ ಡೌನ್ ಅವಧಿಯಲ್ಲಿ ವಲಸೆ ಕಾರ್ಮಿಕರು ಹೆಚ್ಚಾಗಿ ವಾಪಸ್ ಹೋದ ದೇಶದ 6 ರಾಜ್ಯಗಳಲ್ಲಿ 'ಗರೀಬ್ ಕಲ್ಯಾಣ್ ರೋಜ್‌ಗಾರ್ ಯೋಜನೆ' ಜಾರಿಗೆ ಬರಲಿದೆ. ಸ್ಥಳೀಯವಾಗಿ ನಡೆಯುವ ಕಾಮಗಾರಿಗಳಲ್ಲಿ ವಲಸೆ ಕಾರ್ಮಿಕರಿಗೆ ಆದ್ಯತೆ ನೀಡಲಾಗುತ್ತದೆ.

   ವಲಸೆ ಕಾರ್ಮಿಕರ ಖಾತೆಗೆ 10 ಸಾವಿರ ರೂ. ಹಾಕಿ: ದೀದಿ ಕೇಂದ್ರಕ್ಕೆ ಆಗ್ರಹ

   ಗರೀಬ್ ಕಲ್ಯಾಣ್ ರೋಜ್‌ಗಾರ್ ಯೋಜನೆ

   ಗರೀಬ್ ಕಲ್ಯಾಣ್ ರೋಜ್‌ಗಾರ್ ಯೋಜನೆ

   ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, "ಗರೀಬ್ ಕಲ್ಯಾಣ್ ರೋಜ್‌ಗಾರ್ ಯೋಜನೆ 6 ರಾಜ್ಯಗಳ 116 ಜಿಲ್ಲೆಗಳಲ್ಲಿ ಜಾರಿಗೆ ಬರಲಿದೆ. ಯಾವ ರಾಜ್ಯಗಳಿಗೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಪಸ್ ಹೋಗಿದ್ದಾರೆ ಎಂದು ಸರ್ಕಾರ ಮಾಹಿತಿ ಸಂಗ್ರಹ ಮಾಡಿದೆ" ಎಂದು ಹೇಳಿದರು.

   ಶ್ರಮಿಕ ವರ್ಗಕ್ಕೆ ಅನುಕೂಲ

   ಶ್ರಮಿಕ ವರ್ಗಕ್ಕೆ ಅನುಕೂಲ

   "ಪ್ರಧಾನಿ ನರೇಂದ್ರ ಮೋದಿ ಗರೀಬ್ ಕಲ್ಯಾಣ್ ರೋಜ್‌ಗಾರ್ ಯೋಜನೆಗೆ ಜೂನ್ 20ರಂದು ಚಾಲನೆ ನೀಡಲಿದ್ದಾರೆ. ಇದರಿಂದಾಗಿ ಶ್ರಮಿಕ ವರ್ಗಕ್ಕೆ ಸಹಾಯಕವಾಗಲಿದೆ. ವರ್ಷದ 125 ದಿನ ಕೆಲಸದ ಖಾತ್ರಿಯನ್ನು ಯೋಜನೆ ನೀಡಲಿದೆ. ತಾವಿರುವ ಪ್ರದೇಶದಲ್ಲಿಯೇ ಕಾರ್ಮಿಕರಿಗೆ ಕೆಲಸ ಸಿಗಲಿದೆ" ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

   ಕರ್ನಾಟಕದಲ್ಲಿ ಜಾರಿಗೆ ಬರಲ್ಲ

   ಕರ್ನಾಟಕದಲ್ಲಿ ಜಾರಿಗೆ ಬರಲ್ಲ

   'ಗರೀಬ್ ಕಲ್ಯಾಣ ರೋಜ್‌ಗಾರ್ ಯೋಜನೆ' ಕರ್ನಾಟಕದಲ್ಲಿ ಜಾರಿಗೆ ಬರುತ್ತಿಲ್ಲ. ಈ ಯೋಜನೆ ಬಿಹಾರ, ಒಡಿಶಾ, ರಾಜಸ್ಥಾನ, ಜಾರ್ಖಂಡ್, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ 116 ಜಿಲ್ಲೆಗಳಲ್ಲಿ ಜಾರಿಗೆ ಬರಲಿದೆ. ಈ ಯೋಜನೆಯಡಿ ಮಾಡಿಸುವ 25 ಕೆಲಸಗಳನ್ನು ಸರ್ಕಾರ ಪಟ್ಟಿ ಮಾಡಿದೆ.

   25 ಸಾವಿರ ಕಾರ್ಮಿಕರಿಗೆ ಅನುಕೂಲ

   25 ಸಾವಿರ ಕಾರ್ಮಿಕರಿಗೆ ಅನುಕೂಲ

   'ಗರೀಬ್ ಕಲ್ಯಾಣ್ ರೋಜ್‌ಗಾರ್ ಯೋಜನೆ'ಯಡಿ 116 ಜಿಲ್ಲೆಗಳ 25,000 ವಲಸೆ ಕಾರ್ಮಿಕರಿಗೆ ಅನುಕೂಲವಾಗಲಿದೆ. ಬಿಹಾರದ 32, ಉತ್ತರ ಪ್ರದೇಶದ 31, ಮಧ್ಯಪ್ರದೇಶದ 24, ರಾಜಸ್ಥಾನದ 22, ಒಡಿಶಾದ 4, ಜಾರ್ಖಂಡ್‌ನ 3 ಜಿಲ್ಲೆಗಳಲ್ಲಿ ಯೋಜನೆ ಜಾರಿಗೆ ಬರಲಿದೆ.

   ಯಾವ-ಯಾವ ಕೆಲಸಗಳು

   'ಗರೀಬ್ ಕಲ್ಯಾಣ್ ರೋಜ್‌ಗಾರ್ ಯೋಜನೆ'ಯಡಿ ಮಾಡಿಸಬಹುದಾದ ಕೆಲಸಗಳ ಪಟ್ಟಿ ಇಲ್ಲಿದೆ.

   English summary
   Finance minister of India Nirmala Sitharaman addressed the media on Garib Kalyan Rojgar Abhiyaan. It will launch by Narendra Modi on 20th June, 2020.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X