ಕಾನೂನಿನ ಮನೆಯಲ್ಲಿ ಕತ್ತಲಿಲ್ಲ, ಬೆಳಕಿದೆ: ನಿರ್ಭಯಾ ತಾಯಿ
ನವದೆಹಲಿ, ಮೇ 5: ಇಡೀ ವಿಶ್ವದಲ್ಲಿ ಭಾರತದ ಗೌರವಕ್ಕೆ ಮಸಿ ಬಳಿದಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣ ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಮರಣ ದಂಡನೆ ವಿಧಿಸಿ ತೀರ್ಪು ನೀಡಿದ್ದನ್ನು ನಿರ್ಭಯಾ ತಾಯಿ ಆಶಾ ಸ್ವಾಗತಿಸಿದ್ದಾರೆ.
ತೀರ್ಪು ಹೊರಬಿದ್ದ ನಂತರ, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ''ಸುಪ್ರೀಂ ಕೋರ್ಟ್ ತೀರ್ಪು ಖುಷಿ ತಂದಿದೆ'' ಎಂದರು.[ಅತ್ಯಾಚಾರಿಗಳಿಗೆ ಗಲ್ಲು: ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು]

ಕಾನೂನು ಆಲಯದಲ್ಲಿ ಕತ್ತಲಿಲ್ಲ, ಬೆಳಕಿಗೆ ಎಂಬುದು ಇದರಿಂದ ಸಾಬೀತಾಗಿದೆ. ನ್ಯಾಯ ಸಿಗುವುದು ವಿಳಂಬವಾಗಿರಬಹುದು, ಆದರೆ, ಈ ಪ್ರಕರಣದಲ್ಲಿ ಸೂಕ್ತವಾದ ನ್ಯಾಯ ಸಿಕ್ಕಿದೆ ಎಂದು ಅವರು ಹೇಳಿದರು.[ಜ್ಯೋತಿ ಅತ್ಯಾಚಾರಿಗಳನ್ನು ನೇಣಿಗೆ ಹಾಕಿ: ಟ್ವಿಟ್ಟಿಗರ ಆಜ್ಞೆ]












Click it and Unblock the Notifications