ನೀರವ್ ಮೋದಿಯ 6 ಫ್ಲ್ಯಾಟ್ ಗಳ ಬೆಲೆ ಜಸ್ಟ್ 900ಕೋಟಿ ರೂ.!

ನವದೆಹಲಿ, ಫೆಬ್ರವರಿ 21: ಜ್ಯುವೆಲ್ಲರಿ ಉದ್ಯಮಿ ನೀರವ್ ಮೋದಿಗೆ ಸೇರಿದ 29 ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದೆ. ಇದರಲ್ಲಿ ಕೇವಲ 6 ಫ್ಲ್ಯಾಟ್ ಗಳ ಬೆಲೆಯೇ 900 ಕೋಟಿ ರೂಪಾಯಿ ದಾಟುತ್ತದೆ ಎಂದು ಐಟಿ ಅಂದಾಜಿಸಿದೆ.

ಮುಂಬೈನ ವರ್ಲಿಯಲ್ಲಿರುವ ಸಮುದ್ರ ಮಹಲ್ ನಲ್ಲಿ ಸಮುದ್ರಾಭಿಮುಖವಾಗಿರುವ 6 ಫ್ಲ್ಯಾಟ್ ಗಳು ನೀರವ್ ಮೋದಿ ಮತ್ತು ಅವರ ಪತ್ನಿ ಅಮಿ ಮೋದಿ ಹೆಸರಿನಲ್ಲಿದೆ. ಈ ಪ್ರತೀ ಫ್ಲ್ಯಾಟ್ ಗಳ ಬೆಲೆ ತಲಾ 150 ಕೋಟಿ ರೂಪಾಯಿ ಎಂದು ಐಟಿ ಅಧಿಕಾರಿಗಳು ಅಂದಾಜಿಸಿದ್ದಾರೆ.

ದಂಪತಿ ಇನ್ನೂ 4 ಗ್ರಾಸ್ವೆನರ್ ಹೌಸ್ ಗಳನ್ನು ಹೊಂದಿದ್ದಾರೆ. ಇದಲ್ಲದೆ ಹಲವು ದುಬಾರಿ ಆಸ್ತಿಗಳನ್ನು ನೀರವ್ ಮೋದಿ ದಂಪತಿ ಹೊಂದಿದ್ದಾರೆ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.

Nirav Modi's 6 Samudra flats worth Rs 900 crore

ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿ ಕಮರ್ಷಿಯಲ್ ಆಸ್ತಿ, ಒಪೆರಾ ಹೌಸ್ ನ ಪ್ರಸಾದ್ ಚೇಂಬರ್ಸ್ ನಲ್ಲಿ ಫ್ಲ್ಯಾಟ್, ಮುಂಬೈ ಬಂದರಿನ ಕಲಾ ಘೋಡಾ ದಲ್ಲಿ ಐಟಿಟಿಎಸ್ ಹೌಸ್, ಕಮಲಾ ಮಿಲ್ಸ್, ಲೊವೆರ್ ಪ್ಯಾರೆಲ್, ಟ್ರೇಡ್ ಪಾಯಿಂಟ್ ನಲ್ಲಿ ಒಂದೊಂದು ಮಹಡಿಗಳನ್ನು ಮೋದಿ ದಂಪತಿ ಹೊಂದಿದ್ದಾರೆ.

ಅಂಧೇರಿಯ ಎಂಐಡಿಸಿಯಲ್ಲಿ ಆರ್ಮಿ ನೇವಿ ಪ್ರೆಸ್ ಕಟ್ಟಡ, ದೆಹಲಿಯ ಡಿಫೆನ್ಸ್ ಕಾಲನಿಯಲ್ಲಿ ಮನೆಗಳು ನೀರವ್ ಮೋದಿಗೆ ಸೇರಿದ ಫೈವ್ ಸ್ಟಾರ್ ಕಂಪನಿ ಬಳಿಯಲ್ಲಿವೆ. ಈ ಆಸ್ತಿಗಳನ್ನು ಐಟಿ ಇಲಾಖೆ ವಶಕ್ಕೆ ಪಡೆದಿದ್ದು ಇವುಗಳ ಮೌಲ್ಯ ಸಾವಿರಾರು ಕೋಟಿ ರೂಪಾಯಿ ದಾಟುತ್ತದೆ ಎಂದು ತಿಳಿದು ಬಂದಿದೆ.

ನೀರವ್ ಮೋದಿ ಕಂಪನಿಗಳಿಗೆ ನೂರಾರು ಕೋಟಿ ರೂಪಾಯಿ ಹಣ ಪಾವತಿಯಾಗಿರುವುದೂ ತನಿಖೆ ವೇಳೆ ಬಹಿರಂಗಗೊಂಡಿದೆ. ನೀರವ್ ಮೋದಿಯವರ ಕಂಪನಿಯೊಂದಕ್ಕೆ ಸೈಪ್ರಸ್ ನಿಂದ 284 ಕೋಟಿ ರೂಪಾಯಿ ಹಣ ವರ್ಗಾವಣೆಯಾಗಿದ್ದರೆ, ಸಿಂಗಾಪುರ ಮೂಲದ ಮತ್ತೊಂದು ಕಂಪನಿ 271 ಕೋಟಿ ರೂಪಾಯಿ ಹಣ ಪಾವತಿಸಿದ್ದು ತನಿಖೆಯಿಂದ ಗೊತ್ತಾಗಿದೆ.

ಮಂಗಳವಾರ ನೀರವ್ ಸಂಬಂಧಿ ಮೆಹುಲ್ ಚೋಕ್ಸಿ ಮತ್ತು ಇತರರಿಗೆ ಸಂಬಂಧಿಸಿದ ಆಸ್ತಿಗಳನ್ನೂ ಐಟಿ ಇಲಾಖೆ ಜಪ್ತಿ ಮಾಡಿದೆ. ಹೀಗೆ ನೀರವ್ ಮೋದಿಗೆ ಸೇರಿದ ಆಸ್ತಿಗಳನ್ನು ಕೆದಕಿದಷ್ಟೂ ನೂರಾರು ಕೋಟಿಯ ಕಥೆಗಳು ಹೊರ ಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+