Uttarakhand Rain: ಉತ್ತರಾಖಂಡದಲ್ಲಿ ಅಬ್ಬರಿಸಿದ ಮಳೆ: 24 ಗಂಟೆಗಳಲ್ಲಿ 9 ಮಂದಿ ಸಾವು

ಉತ್ತರಾಖಂಡದಾದ್ಯಂತ ಕಳೆದ 24 ಗಂಟೆಗಳಲ್ಲಿ ಪ್ರತ್ಯೇಕ ಮಳೆ ಸಂಬಂಧಿತ ಘಟನೆಗಳಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ ಮತ್ತು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ. ಘಟನೆಯಲ್ಲಿ ಒಬ್ಬ ವ್ಯಕ್ತಿ ಕಾಣೆಯಾಗಿದ್ದು, 6 ಜನ ಗಾಯಗೊಂಡಿದ್ದಾರೆ.

ಕೇದಾರನಾಥ ಯಾತ್ರೆಯ ಮೂಲ ಶಿಬಿರವಾದ ಗೌರಿಕುಂಡ್‌ನಲ್ಲಿ ಬುಧವಾರ ಮುಂಜಾನೆ ಎಡೆಬಿಡದೆ ಸುರಿಯುತ್ತಿರುವ ಮಳೆಯ ನಡುವೆ ಅವರು ಮಲಗಿದ್ದ ಗುಡಿಸಲು ಭೂಕುಸಿತದಿಂದ ಇಬ್ಬರು ಸಹೋದರರು ಸಾವನ್ನಪ್ಪಿದರು ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ಐದು ದಿನಗಳಲ್ಲಿ ಗೌರಿಕುಂಡ್‌ನಲ್ಲಿ ಸಂಭವಿಸಿದ ಎರಡನೇ ಭೂಕುಸಿತ ಇದಾಗಿದೆ.

Nine Fatalities in Uttarakhand Rain Incidents, Chief Minister Urges Vigilance

ಗೌರಿಕುಂಡ್ ಗ್ರಾಮದ ಹೆಲಿಪ್ಯಾಡ್ ಬಳಿಯ ಕುಟೀರವು ಬೆಟ್ಟದ ಮೇಲಿನಿಂದ ಕುಸಿದಿದೆ, ಒಂದು ಕುಟುಂಬದ ನಾಲ್ವರು ಅವಶೇಷಗಳಲ್ಲಿ ಹೂತುಹೋಗಿದ್ದಾರೆ ಎಂದು ರುದ್ರಪ್ರಯಾಗ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ನಂದನ್ ಸಿಂಗ್ ರಾಜ್ವರ್ ತಿಳಿಸಿದ್ದಾರೆ.

ಇಬ್ಬರು ಮಕ್ಕಳು ಸಾವು

ಜಾನಕಿ ಎಂಬ ಮಹಿಳೆ ಅವಶೇಷಗಳಡಿಯಿಂದ ಯಾವುದೇ ಗಾಯಗಳಿಲ್ಲದೆ ಹೊರಬಂದರು ಮತ್ತು ಅವರ ಮೂವರು ಮಕ್ಕಳು ಅದರ ಅಡಿಯಲ್ಲಿ ಹೂತುಹೋಗಿದ್ದರು. ಮಾಹಿತಿ ಪಡೆದ ರಕ್ಷಣಾ ತಂಡಗಳು ಸ್ಥಳಕ್ಕಾಗಮಿಸಿ ಮಕ್ಕಳನ್ನು ಹೊರತೆಗೆದು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಘಟನೆಯಲ್ಲಿ ಎಂಟು ವರ್ಷದ ಸ್ವೀಟಿ ಬದುಕುಳಿದಿದ್ದು, ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಕೆಯ ಕಿರಿಯ ಸಹೋದರಿ ಪಿಂಕಿ ಮತ್ತು ಇನ್ನೊಂದು ಪುಟ್ಟ ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ. ಗುಡಿಸಲಿನಲ್ಲಿ ವಾಸಿಸುತ್ತಿದ್ದ ಕುಟುಂಬ ನೇಪಾಳದಿಂದ ಬಂದಿತ್ತು. ಮಕ್ಕಳ ತಂದೆ ಸತ್ಯರಾಜ್ ಕೂಲಿ ಕೆಲಸ ಮಾಡುತ್ತಿದ್ದು, ನೇಪಾಳದ ತಮ್ಮ ಗ್ರಾಮಕ್ಕೆ ತೆರಳಿದ್ದರು ಎಂದು ಮಾಹಿತಿ ಬಂದಿದೆ.

ಉತ್ತರಾಖಂಡ್‌ನ ಪೌರಿ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಐವರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಮ್‌ಖಾಲ್‌ನಲ್ಲಿ ಕಾರು ಆಳವಾದ ಕಂದಕಕ್ಕೆ ಬಿದ್ದು ತಂದೆ-ಮಗ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಅಧಿಕಾರಿ ಪ್ರವೀಣ್ ರಾಠಿ ಬುಧವಾರ ದೂರವಾಣಿ ಮೂಲಕ ಪಿಟಿಐಗೆ ತಿಳಿಸಿದರು.

ಎಚ್ಚರಿಕೆ ವಹಿಸಲು ಸಿಎಂ ಸೂಚನೆ

ಪೌರಿ ಕಲ್ಜಿಖಾಲ್ ಬ್ಲಾಕ್‌ನ ಮುಂಡನೇಶ್ವರ ಬಳಿ ಇದೇ ರೀತಿಯ ಅಪಘಾತದಲ್ಲಿ, ಕಾರು 80 ಮೀಟರ್ ಆಳದ ಕಮರಿಗೆ ಬುಧವಾರ ಮಧ್ಯಾಹ್ನ 2 ಗಂಟೆಗೆ ಬಿದ್ದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ ಎಂದು ಪೌರಿ ವಿಪತ್ತು ನಿಯಂತ್ರಣ ಕೊಠಡಿ ತಿಳಿಸಿದೆ. ರಿಷಿಕೇಶ-ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನದ ಮೇಲೆ ಬಂಡೆ ಬಿದ್ದು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಸಾವನ್ನಪ್ಪಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ.

ರಾಜ್ಯದಲ್ಲಿ ಸುರಿಯುತ್ತಿರುವ ವಿಪರೀತ ಮಳೆಯ ಬಗ್ಗೆ ಮುಖ್ಯಮಂತ್ರಿ ಮಾಹಿತಿ ಪಡೆದುಕೊಂಡಿದ್ದು, ಜಿಲ್ಲಾಧಿಕಾರಿಗಳಿಗೂ ಎಚ್ಚರದಿಂದ ಇರಲು ಸೂಚನೆ ನೀಡಿದ್ದಾರೆ. ಅನಾಹುತ ಸಂಭವಿಸಿದಾಗ ಕ್ಷಿಪ್ರ ಕ್ರಮ ಕೈಗೊಳ್ಳಲು ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯ ಸಾಧಿಸುವಂತೆ ತಿಳಿಸಿದರು.

ರುದ್ರಪ್ರಯಾಗ, ಪೌರಿ, ನೈನಿತಾಲ್ ಮತ್ತು ಉಧಮ್ ಸಿಂಗ್ ನಗರದ ಜಿಲ್ಲಾಧಿಕಾರಿಗಳ ದೂರವಾಣಿಯಲ್ಲಿ ಮಾತನಾಡಿದ್ದಾರೆ ಮತ್ತು ನೈಸರ್ಗಿಕ ವಿಕೋಪಕ್ಕೆ ಒಳಗಾಗುವ ಪ್ರದೇಶಗಳಲ್ಲಿ ಉದ್ಭವಿಸಬಹುದಾದ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಆಡಳಿತಾತ್ಮಕ ವ್ಯವಸ್ಥೆಗಳನ್ನು ಮುಂಚಿತವಾಗಿ ಸಿದ್ಧಪಡಿಸುವಂತೆ ಅವರಿಗೆ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+