India: ಖಲಿಸ್ತಾನಿ ಭಯೋತ್ಸಾದಕರ ನಂಟಿದ್ದ 50ಕ್ಕೂ ಹೆಚ್ಚು ಸ್ಥಳಗಳಲ್ಲಿ NIA ದಾಳಿ
ಬೆಂಗಳೂರು, ಸೆಪ್ಟಂಬರ್ 27: ಭಾರತದಲ್ಲಿ ಖಲಿಸ್ತಾನಿ-ದರೋಡೆಕೋರರ ನಡೆಸುತ್ತಿರುವ ಚಟುವಟಿಕೆಗಳ ವಿರುದ್ಧದ ಕಾರ್ಯಾಚರಣೆಯ ಭಾಗವಾಗ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ದೇಶದ ವಿವಿಧ ರಾಜ್ಯಗಳಲ್ಲಿ ಬುಧವಾರ ಏಕಕಾಲಕ್ಕೆ ದಾಳಿ ನಡೆಸಿದೆ. ಒಟ್ಟಾರೆ ಸುಮಾರು 50 ಸ್ಥಳಗಳಲ್ಲಿ ಅಧಿಕಾರಿಗಳು ದಾಳಿ ನಡೆಸುವ ಮೂಲಕ ದೇಶವಿರೋಧಿಗಳಿಗೆ ಶಾಕ್ ನೀಡಿದ್ದಾರೆ.
ಎನ್‌ಐಎ ಅಧಿಕಾರಿಗಳು ರಾಜಸ್ಥಾನ, ಪಂಜಾಬ್, ಹರಿಯಾಣ ಮತ್ತು ದೆಹಲಿ-ಎನ್‌ಸಿಆರ್ ಮತ್ತು ಉತ್ತರ ಪ್ರದೇಶದ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದರು. ಪಂಜಾಬ್ ರಾಜ್ಯದ 30 ಸ್ಥಳಗಳು, ರಾಜಸ್ಥಾನದಲ್ಲಿ 13, ಹರಿಯಾಣದ 4 ಸ್ಥಳಗಳು ಹಾಗೂ ದೆಹಲಿ ಮತ್ತು ಯುಪಿಯಲ್ಲಿ ತಲಾ ಒಂದು ಸ್ಥಳಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹನುಮಾನ್‌ಗಢ, ಜುಂಜುನು, ಗಂಗಾನಗರ ಮತ್ತು ಜೋಧ್‌ಪುರದಲ್ಲಿ ನಿನ್ನೆ ತಡರಾತ್ರಿಯಿಂದ ದಾಳಿ ನಡೆಯುತ್ತಿದೆ.

ಪಂಜಾಬ್ ರಾಜ್ಯದ ಕೆಟಿಎಫ್ (ಖಲಿಸ್ತಾನ್ ಟೈಗರ್ ಫೋರ್ಸ್) ಭಯೋತ್ಪಾದಕ ಅರ್ಶ್ ದಲ್ಲಾ ಜಾಲಕ್ಕೆ ಸಂಬಂಧಿಸಿದ ಹಲವಾರು ಸ್ಥಳಗಳಲ್ಲಿ ಎನ್‌ಐಎ ದಾಳಿ ನಡೆಸಿದೆ. ಎನ್‌ಐಎ ಶೋಧ ನಡೆಸುತ್ತಿರುವ ಇತರ ಸ್ಥಳಗಳಲ್ಲಿ ಹ್ಯಾರಿ ಮೌರ್, ಗುರುಪ್ರೀತ್ ಸಿಂಗ್ ಗುರಿ ಮತ್ತು ಗುರ್ಮೈಲ್ ಸಿಂಗ್ ಅಧಿಕಾರಿ ತಂಡದ ಸದಸ್ಯರು ಶೋಧ ಕಾರ್ಯ ನಡೆಸಿದರು.
ಹವಾಲಾ ಮೂಲಕ ಭಾರತದಲ್ಲಿ ಕಾನೂನು ಬಾಹಿರ ಚಟುವಟಿಕೆ
ವಿದೇಶದಲ್ಲಿ ನೆಲೆಸಿರುವ ಖಲಿಸ್ತಾನಿ ಭಯೋತ್ಪಾದಕರು ಹವಾಲಾ ಮೂಲಕ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳಿಗಾಗಿ ಭಾರತದಲ್ಲಿನ ಕಾರ್ಮಿಕರಿಗೆ ಹಣ ನೀಡುತ್ತಿದ್ದಾರೆ ಏಜೆನ್ಸಿ ಮೂಲಗಳು ತಿಳಿಸಿವೆ. ಭಾರತದಲ್ಲಿ ಖಲಿಸ್ತಾನಿ ಕಾರ್ಯಕರ್ತರು ಹಾಗೂ ಐಎಸ್‌ಐ ಮಧ್ಯದ ನಂಟಿನ ಬಗ್ಗೆಯೂ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ.

ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಕುರಿತಂತೆ ಭಾರತ ಹಾಗೂ ಕೆನಡಾ ದೇಶದಗಳ ಮಧ್ಯೆ ರಾಜತಾಂತ್ರಿಕ ಜಗಳದ ನಡುವೆ ಖಲಿಸ್ತಾನಿ ಭಯೋತ್ಪಾದಕರ ವಿರುದ್ಧ ಭಾರತ ದಿಟ್ಟ ಕ್ರಮ ಕೈಗೊಂಡಿದೆ. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡ್ಯೂ ಅವರು ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಅಧಿಕಾರಿಗಳ ಕೈವಾಡದ ಬಗ್ಗೆ ಆರೋಪಿಸಿತ್ತು.
ಹತ್ಯೆ ಪ್ರಕರಣದಲ್ಲಿ ಭಾರತದ ಮೇಲೆ ಆರೋಪ
ಈ ಉಭಯ ದೇಶಗಳ ನಡುವೆ ದೊಡ್ಡ ರಾಜತಾಂತ್ರಿಕ ಕಲಹ ಸೃಷ್ಟಿಯಾಗಿದೆ. ಈ ವರ್ಷ ಜೂನ್‌ನಲ್ಲಿ ಕೆನಡಾ ಮೂಲದ ಖಲಿಸ್ತಾನಿ ಭಯೋತ್ಪಾದಕ ನಿಜ್ಜರ್‌ನನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ಹತ್ಯೆ ಪ್ರಕರಣದಲ್ಲಿ ಭಾರತದ ಕೈವಾಡಕ್ಕೆ ನಂಬಲರ್ಹ ಪುರಾವೆ ಇಲ್ಲದಾಗಿದೆ.
ಕೆನಡಾದ ಸಂಸದ ಜಗಮೀತ್ ಸಿಂಗ್, ಕೆನಡಾದ ನ್ಯೂ ಡೆಮಾಕ್ರಟಿಕ್ ಪಾರ್ಟಿ (NDP) ನಾಯಕ, ದೇಶದ ಆಡಳಿತ ಪಕ್ಷದ ಮಿತ್ರಪಕ್ಷ, ನಿಜ್ಜರ್ ಹತ್ಯೆಯಲ್ಲಿ ವಿದೇಶಿ ಸರ್ಕಾರದ ಕೈವಾಡದ 'ಸ್ಪಷ್ಟ' ಸೂಚನೆ ಇದೆ ಎಂದು ಆರೋಪಿಸಿದ್ದಾರೆ.
ಕೆನಡಾ ದೇಶ ಪ್ರಧಾನಿ ಜಸ್ಟಿನ್ ಟ್ರುಡೋ ನೀಡುವ ಮಾಹಿತಿ ಪ್ರಕಾರ, ಅವರ ದೇಶ ಪ್ರಜೆ ಒಬ್ಬರು ಕೊಲ್ಲಲ್ಪಟ್ಟಿದ್ದಾರೆ. ಈ ಬಗ್ಗೆ ವಿದೇಶಿ ಸರ್ಕಾರದ ಗುಪ್ತಚರ ಮಾಹಿತಿ ಇದೆ ಸಂಸದ ಜಗ್ಮೀತ್ ಸಿಂಗ್ ಮಂಗಳವಾರ ತಿಳಿಸಿದ್ದರು.












Click it and Unblock the Notifications