ಎನ್‌ಐಎ ಅಧಿಕಾರಿ ತನ್ಜಿಲ್ ಪತ್ನಿ ಫರ್ಜಾನಾ ಸ್ಥಿತಿ ಗಂಭೀರ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಏಪ್ರಿಲ್ 06 : ಎನ್‌ಐಎ ಅಧಿಕಾರಿ ಮೊಹಮ್ಮದ್ ತನ್ಜಿಲ್ ಅಹ್ಮದ್ ಅವರ ಪತ್ನಿ ನೋಯ್ಡಾದ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಭಾನುವಾರ ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ತನ್ಜಿಲ್ ಅಹ್ಮದ್ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆದಿತ್ತು. ಅಹ್ಮದ್ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಫರ್ಜಾನಾ ಗಾಯಗೊಂಡಿದ್ದರು.

ಭಾನುವಾರ ಮುಂಜಾನೆ ಎನ್‌ಐಎ ಅಧಿಕಾರಿ ತನ್ಜಿಲ್ ಅಹ್ಮದ್ ಅವರು ಕುಟುಂಬದವರೊಂದಿಗೆ ವಿವಾಹ ಆರತಕ್ಷತೆ ಮುಗಿಸಿಕೊಂಡು ಬರುವಾಗ, ಅವರ ಆಲ್ಟೋ ಕಾರಿನ ಮೇಲೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಅಹ್ಮದ್, ಫರ್ಜಾನಾ ಮತ್ತು ಇಬ್ಬರು ಮಕ್ಕಳು ಕಾರಿನಲ್ಲಿದ್ದರು. [ತನ್ಜಿಲ್ ಅಹ್ಮದ್ ಹತ್ಯೆ ವ್ಯವಸ್ಥಿತ ಸಂಚು]

tenzil ahmed

20ಕ್ಕೂ ಹೆಚ್ಚು ಗುಂಡುಗಳು ಹೊಕ್ಕಿದ್ದ ತನ್ಜಿಲ್ ಅಹ್ಮದ್ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಅವರ ಪತ್ನಿ ಫರ್ಜಾನಾ ಅವರನ್ನು ನೋಯ್ಡಾದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. [ಪಠಾಣ್ ಕೋಟ್ ದಾಳಿ : ಉಗ್ರರ ಚಿತ್ರಗಳು ಬಿಡುಗಡೆ]

ಅಹ್ಮದ್ ಹತ್ಯೆ ವ್ಯವಸ್ಥಿತವಾದ ಸಂಚು ಎಂದು ಪೊಲೀಸರು ಹೇಳಿದ್ದರು. ಈ ಹತ್ಯೆಯಲ್ಲಿ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕೈವಾಡವಿದೆಯೇ? ಎಂಬ ಬಗ್ಗೆ ನಿಖರವಾದ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದರು. [ಪಠಾಣ್ ಕೋಟ್ ಉಗ್ರರ ದಾಳಿ ಟೈಮ್ ಲೈನ್]

ಯಾರು ತನ್ಜಿಲ್ ಅಹ್ಮದ್? : ತನ್ಜಿಲ್ ಅಹ್ಮದ್ ಅವರು ಬಿಎಸ್‌ಎಫ್‌ನಲ್ಲಿ ಅಸಿಸ್ಟೆಂಟ್ ಕಮಾಂಡರ್ ಆಗಿದ್ದರು. 2009ರ ಫೆಬ್ರವರಿಯಲ್ಲಿ ಅವರನ್ನು ಎನ್‌ಐಎಗೆ ವರ್ಗಾವಣೆ ಮಾಡಲಾಗಿತ್ತು. ಮೊದಲು ಎನ್‌ಐಎ ಗುಪ್ತಚರ ವಿಭಾಗದಲ್ಲಿದ್ದ ಅವರು ನಂತರ ತನಿಖಾಧಿಕಾರಿಯಾಗಿದ್ದರು. ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ ಸೇರಿದಂತೆ ಹಲವು ಪ್ರಕರಣಗಳ ತನಿಖೆಯನ್ನು ಅವರು ನಡೆಸುತ್ತಿದ್ದರು. [ಪಿಟಿಐ ಚಿತ್ರಗಳು]

ಕಾರಿನ ಮೇಲೆ ಗುಂಡಿನ ದಾಳಿ ಚಿತ್ರಗಳು

-
-
-
-

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Farzana the wife of National Investigation Agency (NIA) officer Tanzil Ahmed who was murdered earlier this week, is recovering from bullet injuries at a hospital in Noida. Tanzil Ahmed died after unknown assailants pumped 21 bullets into him while he was returning from a wedding in Bijnor, Uttar Pradesh on April 3, 2016.
Please Wait while comments are loading...