ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಗಾಗಿ ವಿಪಕ್ಷಗಳಿಂದ ಮಹತ್ವದ ಸಭೆ

By Sachhidananda Acharya
|
Google Oneindia Kannada News

ನವದೆಹಲಿ, ಜೂನ್ 14: ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ನವದೆಹಲಿಯಲ್ಲಿ ವಿಪಕ್ಷಗಳಿಂದ ಮಹತ್ವದ ಸಭೆ ನಡೆಯುತ್ತಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಭೆಯ ನೇತೃತ್ವ ವಹಿಸಿದ್ದು ಟಿಎಂಸಿ, ಆರ್ ಜೆಡಿ ಹಾಗೂ ಎಡಪಕ್ಷಗಳು ಸಭೆಯಲ್ಲಿ ಪಾಲ್ಗೊಂಡಿವೆ.

ಈ ಸಭೆಯ ನಂತರ ಬಿಜೆಪಿ ನಾಯಕರಾದ ರಾಜನಾಥ್ ಸಿಂಗ್ ಹಾಗೂ ವೆಂಕಯ್ಯ ನಾಯ್ಡು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಸೀತರಾಮ್ ಯಚೂರಿಯವರನ್ನು ಇದೇ ವಿಚಾರಕ್ಕೆ ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ.

ಸಭೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಗುಲಾಬ್ ನಬಿ ಅಜಾದ್, "ಇವತ್ತು ಯಾವುದೇ ಹೆಸರುಗಳ ಬಗ್ಗೆ ಚರ್ಚೆ ನಡೆಸಿಲ್ಲ. ಅಭ್ಯರ್ಥಿ ಆಯ್ಕೆಗೆ ಈಗಷ್ಟೆ ಪ್ರಕ್ರಿಯೆ ಆರಂಭವಾಗಿದೆ. ಇನ್ನೂ ಉಪ ಸಮಿತಿಗಳ ಸಭೆ ನಡೆಯಲಿದೆ. ಅಲ್ಲಿ ವಿವರವಾಗಿ ಚರ್ಚೆ ನಡೆಸಲಿದ್ದೇವೆ," ಎಂದು ಹೇಳಿದ್ದಾರೆ.

ಇನ್ನು ರಾಜನಾಥ್ ಸಿಂಗ್ ಮತ್ತು ವೆಂಕಯ್ಯ ನಾಯ್ಡು ಈಗಾಗಲೇ ಎನ್.ಸಿ.ಪಿ ಪ್ರಫುಲ್ ಪಟೇಲ್ ಹಾಗೂ ಬಿಎಸ್ಪಿಯ ಸತೀಶ್ ಮಿಶ್ರಾ ಜತೆ ಸಮಾಲೋಚನೆ ನಡೆಸಿದ್ದಾರೆ.

ಜುಲೈ 17ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು ಜುಲೈ 20ರಂದು ಮತಎಣಿಕೆ ನಡೆಯಲಿದೆ.

English summary
The crucial meeting of opposition parties is currently underway to decide on the candidate for the July 17 Presidential elections. Headed by Congress President Sonia Gandhi, the meeting ahs leaders of TMC, RJD, Left parties in attendance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X