ಎಡರಂಗದ ಕೈಗೆ ಕೇರಳ, ಮುಖ್ಯಮಂತ್ರಿ ಗಾದಿ ಯಾರಿಗೆ?

ತಿರುವನಂತಪುರ, ಮೇ, 19: ಕೇರಳದಲ್ಲಿ ಎಡಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಸನ್ನದ್ಧವಾಗಿದೆ. ಸಿಪಿಐಎಂ ನೇತೃತ್ವದ ಲೆಫ್ಟ್ ಡೆಮಾಕ್ರೆಟಿಕ್ ಫ್ರಂಟ್(ಎಲ್ ಡಿಎಫ್) ಸರಳ ಬಹುಮತ ಪಡೆದುಕೊಂಡಿದ್ದು ಅಧಿಕಾರ ಹಿಡಿಯಲು ವೇದಿಕೆ ಸಿದ್ಧವಾಗಿದೆ.[ವಿಜಯೋತ್ಸಾಹದ ಚಿತ್ರಗಳು]

ಇದರೊಂದಿಗೆ ಯಾರು ಮುಖ್ಯಮಂತ್ರಿಯಾಗಬೇಕು ಎಂಬ ಸಂಗತಿಯು ಕುತೂಹಲ ಮೂಡಿಸಿದೆ. 92 ವರ್ಷದ ವಿ ಎಸ್ ಅಚ್ಯುತಾನಂದನ್ ಮತ್ತು ಪಿಣರಾಯಿ ವಿಜಯನ್ ನಡುವೆ ಗಾದಿಗೆ ಸ್ಪರ್ಧೆ ಏರ್ಪಟ್ಟಿದೆ. ಆದರೆ ಯಾರು ಮುಖ್ಯಮಂತ್ರಿ ಎಂಬುದು ಮೇ 20 ಕ್ಕೆ ಅಂತಿಮವಾಗಲಿದೆ.['ಕಾಂಗ್ರೆಸ್ ಸೋಲಿಗೆ ರಾಹುಲ್ ಗಾಂಧಿ ಕಾರಣರಲ್ಲ']

kerala

ಚುನಾವಣೆ ಆರಂಭದಲ್ಲಿ ವಿಜಯನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪ್ರತಿಬಿಂಬಿಸಲಾಗಿತ್ತು. ಆದರೆ ಚುನಾವಣೆ ಹತ್ತಿರ ಬಂದಾಗ ಕೊನೆ ಘಳಿಗೆಯಲ್ಲಿ 'ನಾನು ರೇಸ್ ನಲ್ಲಿ ಇದ್ದೇನೆ' ಎಂದು ಹೇಳುವ ಮೂಲಕ ಅಚ್ಯುತಾನಂದನ್ ಕುತೂಹಲ ಹುಟ್ಟುಹಾಕಿದ್ದರು.[ಅಸ್ಸಾಂನಲ್ಲಿ ಕೇಸರಿ ಬಾವುಟ, ಮೈತ್ರಿಯತ್ತ ಬಿಜೆಪಿ]

ಅಧಿಕಾರ ಹಂಚಿಕೆ?
ಅಧಿಕಾರ ಹಂಚಿಕೆ ಸಾಧ್ಯತೆಯೂ ಎದುರಾಗಿದೆ. ಮೊದಲ ಎರಡು ವರ್ಷ ಅಚ್ಯುತಾನಂದನ್ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದರೆ ಮುಂದಿನ ಮೂರು ವರ್ಷ ಕಾಲ ವಿಜಯನ್ ಅಧಿಕಾರ ನಡೆಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.[ಅಮ್ಮ ರಿಟರ್ನ್ಸ್, ತಮಿಳುನಾಡಿನಲ್ಲಿ ಎಐಎಡಿಎಂಕೆ ದಾಖಲೆ]

ಸಿಪಿಐಎಂ ಗೆ ಇದೊಂದು ಸವಾಲಾಗೇ ಪರಿಣಮಿಸಿದ್ದರೂ ಇಬ್ಬರು ನಾಯಕರು ಪಕ್ಷಕ್ಕೆ ಅನೇಕ ವರ್ಷದಿಂದ ದುಡಿದ ಹಿನ್ನೆಲೆಯಲ್ಲಿ ಅಧಿಕಾರ ಹಂಚಿಕೆ ಆಧಾರದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಹೇಳಲಾಗಿದೆ.[ಕೇರಳದಲ್ಲಿ ಮೂರು ಸ್ಥಾನ ಗೆದ್ದ ಜೆಡಿಎಸ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+