ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ 48 ಗಂಟೆಯಲ್ಲಿ ಅಸ್ಸಾಂ, ಮೇಘಾಲಯದಲ್ಲಿ ಭಾರಿ ಮಳೆಯ ಮುನ್ಸೂಚನೆ

|
Google Oneindia Kannada News

ಅಸ್ಸಾಂ, ಜೂನ್ 27: ಕಳೆದ ಒಂದು ದಿನದಿಂದ ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದೆ. ಮುಂದಿನ 48 ಗಂಟೆಗಳಲ್ಲಿ ಅಸ್ಸಾಂ, ಮೇಘಾಲಯದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್‌ ವೆದರ್ ವರದಿ ಮಾಡಿದೆ.

ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಮಳೆ ಆರಂಭವಾಗಿದೆ. ಅಸ್ಸಾಂನಲ್ಲಿ ಪ್ರವಾಹ ಭೀತಿ ಎದುರಾಗಿದೆ. ಕಳೆದ ಒಂದು ದಿನದಿಂದ ಈ ಭಾಗಗಳಲ್ಲಿ ಸ್ವಲ್ಪ ಮಳೆಯಾಗಿದೆ.

ರಾಜ್ಯದಲ್ಲಿ ಮುಂಗಾರು ಮುಂದುವರಿಕೆ, ಬೆಂಗಳೂರಲ್ಲಿ 2 ದಿನ ತುಂತುರು ಮಳೆರಾಜ್ಯದಲ್ಲಿ ಮುಂಗಾರು ಮುಂದುವರಿಕೆ, ಬೆಂಗಳೂರಲ್ಲಿ 2 ದಿನ ತುಂತುರು ಮಳೆ

ಬಿಹಾರದಿಂದ ನಾಗಾಲ್ಯಾಂಡ್ ಪ್ರದೇಶದಲ್ಲಿ ಹವಾಮಾನದಲ್ಲಿ ಭಾರೀ ಬದಲಾವಣೆಯಾಗುತ್ತಿದೆ. ಬಂಗಾಳಕೊಲ್ಲಿಯಲ್ಲಿ ಗಾಳಿಯ ಒತ್ತಡ ಏರ್ಪಟ್ಟಿದ್ದು ಅದು ಹೆಚ್ಚಿನ ತೇವಾಂಶವನ್ನು ಉಂಟು ಮಾಡುತ್ತಿದೆ. ಅಸ್ಸಾಂನಲ್ಲಿ ಚಂಡಮಾರುತ ಗಾಳಿಯೂ ಕೂಡ ಬೀಸುತ್ತಿದೆ.

Next 48 hours heavy rain fall in Assam and Meghalaya

ಬ್ರಹ್ಮಪುತ್ರ, ಬಾರಕ್ ನದಿ ಪಾತ್ರದಲ್ಲಿರುವ ಎರಡು ಲಕ್ಷ ಮಂದಿಗೆ ತೊಂದರೆಯಾಗಲಿದೆ. ಹೆಚ್ಚು ಮಳೆಯಾಗುತ್ತಿರುವ ಕಾರಣ ಕೃಷಿಯೂ ನೆಲಕಚ್ಚಿದೆ. ಇನ್ನೆರೆಡು ದಿನಗಳಲ್ಲಿ ಮುಂಗಾರು ಇಡೀ ದೇಶವನ್ನು ಆವರಿಸಿಕೊಳ್ಳಲಿದೆ. ಕರ್ನಾಟಕದಲ್ಲೂ ಅಲ್ಲಲ್ಲಿ ಮಳೆಯಾಗುತ್ತಿದೆ. ಇನ್ನು ಮಹಾರಾಷ್ಟ್ರದಲ್ಲಿ ಮಳೆಯಾಗಿರುವುದರಿಂದ ಬೆಳಗಾವಿ ಸುತ್ತಮುತ್ತಲ ನದಿಗಳಿಗೆ ನೀರು ಹರಿದು ಬರುತ್ತಿದೆ.

ಇನ್ನು ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಕೂಡ ಗುರುವಾರ ಮಳೆ ಮುಂದುವರೆಯಲಿದೆ. ಸ್ಕೈಮೆಟ್ ವೆದರ್ ಪ್ರಕಾರ ಅಲಿಭಾಗ್, ಕೊಲ್ಹಾಪುರ, ಮುಂಬೈ, ಬಾಗಪುರ, ಪುಣೆ, ರಾಯ್‌ಗಢ, ಸಾಂಗ್ಲಿ, ಸಿಂಧುದುರ್ಗ, ಸತಾರಾದಲ್ಲಿ ಮಳೆಯಾಗಲಿದೆ.

ಹರಿಯಾಣ, ಪಂಡ್ರಿ, ಝಾಜರ್ ಕೂಡ ಮುಂದಿನ ಎರಡು ಗಂಟೆಗಳೊಳಗಾಗಿ ಮಳೆಯಾಗಲಿದೆ. ಬುಧವಾರದಿಂದ ಗುಜರಾತ್, ಸೌರಾಷ್ಟ್ರ ಭಾಗಗಳಲ್ಲಿ ಕೂಡ ಮಳೆಯಾಗಿದೆ.

ರಾಜಸ್ಥಾನದ ಕೆಲವೆಡೆ ಮಾತ್ರ ಮಳೆಯಾಗಿದ್ದು, ಉಳಿದೆಡೆ ಒಣಹವೆ ಮುಂದುವರೆದಿದೆ. ಬಿಕಾನೇರ್‌ನಲ್ಲಿ ಗರಿಷ್ಠ ಉಷ್ಣಾಂಶ 43.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

English summary
Next 48 hours heavy rain fall in Assam and Meghalaya, Heavy rains have triggered a flood-like situation in parts of lower Assam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X