ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂದಿನ 100ರಿಂದ 125 ದಿನಗಳು ಅತಿ ನಿರ್ಣಾಯಕ; ಕೇಂದ್ರ

|
Google Oneindia Kannada News

ನವದೆಹಲಿ, ಜುಲೈ 16: ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಮುಂದಿನ 100 ರಿಂದ 125 ದಿನಗಳು ನಿರ್ಣಾಯಕವಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಕೊರೊನಾ ಪರಿಸ್ಥಿತಿ ವಿಶ್ಲೇಷಣೆಯ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದೆ.

ಕೆಲವು ದಿನಗಳಿಂದ ಕೊರೊನಾ ಪ್ರಕರಣಗಳ ಕುಸಿತ ನಿಧಾನಗತಿಯಾಗುತ್ತಿದೆ. ಕೊರೊನಾ ಎರಡನೇ ಅಲೆ ಕೊನೆಯಾಗಿದೆ ಎಂದು ಜನರು ಭಾವಿಸಿದಂತಿದೆ. ಆದರೆ ಇದು ಎಚ್ಚರಿಕೆಯ ಸಂಕೇತವಾಗಿದೆ. ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಮುಂದಿನ ನೂರರಿಂದ ನೂರಾ ಇಪ್ಪತ್ತೈದು ದಿನಗಳು ನಿರ್ಣಾಯಕವಾಗಿವೆ ಎಂದು ನೀತಿ ಆಯೋಗ ಸದಸ್ಯ ಡಾ. ವಿ.ಕೆ. ಪೌಲ್ ಎಚ್ಚರಿಸಿದ್ದಾರೆ. ಮುಂದೆ ಓದಿ...

ಭಾರತದಲ್ಲಿ ಕೊರೊನಾ 2ನೇ ಅಲೆ ತೀವ್ರತೆಗೆ ಡೆಲ್ಟಾ ರೂಪಾಂತರವೇ ಕಾರಣ: ಐಸಿಎಂಆರ್ಭಾರತದಲ್ಲಿ ಕೊರೊನಾ 2ನೇ ಅಲೆ ತೀವ್ರತೆಗೆ ಡೆಲ್ಟಾ ರೂಪಾಂತರವೇ ಕಾರಣ: ಐಸಿಎಂಆರ್

 ಎರಡು ಡೋಸ್ ಲಸಿಕೆ ಮರಣ ಸಾಧ್ಯತೆ ತಗ್ಗಿಸಲಿದೆ

ಎರಡು ಡೋಸ್ ಲಸಿಕೆ ಮರಣ ಸಾಧ್ಯತೆ ತಗ್ಗಿಸಲಿದೆ

ಸೋಂಕಿಗೆ ಒಡ್ಡಿಕೊಳ್ಳುವ ವರ್ಗಕ್ಕೆ ಸೇರಿದ ಪೊಲೀಸ್ ಸಿಬ್ಬಂದಿ ಮೇಲೆ ಐಸಿಎಂಆರ್ ಸಂಸ್ಥೆ ಕೊರೊನಾ ಲಸಿಕೆ ಪರಿಣಾಮದ ಕುರಿತು ವಿಶ್ಲೇಷಣಾ ಅಧ್ಯಯನ ನಡೆಸಿದೆ. ಈ ಅಧ್ಯಯನದಲ್ಲಿ, ಎರಡು ಡೋಸ್‌ನ ಲಸಿಕೆಗಳು ಕೊರೊನಾ ಸೋಂಕಿನಿಂದ ಸಂಭವಿಸಬಹುದಾದ ಮರಣ ಪ್ರಮಾಣವನ್ನು ತಗ್ಗಿಸುವಲ್ಲಿ 95% ಪರಿಣಾಮಕಾರಿ ಎಂಬುದು ತಿಳಿದುಬಂದಿದೆ. ಒಂದು ಡೋಸ್‌ನ ಲಸಿಕೆ ಮರಣ ಪ್ರಮಾಣ ತಗ್ಗಿಸುವಲ್ಲಿ 82% ಪರಿಣಾಮಕಾರಿ ಎನ್ನಲಾಗಿದೆ. ಎರಡನೇ ಅಲೆಯಲ್ಲಿ ಕೊರೊನಾ ಸೋಂಕಿನಿಂದ ಸಂಭವಿಸಬಹುದಾದ ಮರಣ ಪ್ರಮಾಣವನ್ನು ಎರಡು ಡೋಸ್ ಲಸಿಕೆ ತಗ್ಗಿಸಿರುವುದು ತಿಳಿದುಬಂದಿದೆ ಎಂದು ಹೇಳಿದ್ದಾರೆ.

 ಜುಲೈ ವೇಳೆಗೆ 50 ಕೋಟಿ ಡೋಸ್ ಲಸಿಕೆ ಗುರಿ

ಜುಲೈ ವೇಳೆಗೆ 50 ಕೋಟಿ ಡೋಸ್ ಲಸಿಕೆ ಗುರಿ

ಜುಲೈ ವೇಳೆಗೆ 50 ಕೋಟಿ ಡೋಸ್‌ಗಳ ಲಸಿಕೆ ನೀಡುವ ಗುರಿಯನ್ನು ಕೇಂದ್ರ ಹೊಂದಿದೆ. ಈ ಗುರಿ ಸಾಧನೆಯ ದಾರಿಯಲ್ಲಿ ನಾವಿದ್ದೇವೆ. ಸರ್ಕಾರವು 66 ಕೋಟಿ ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್ ಡೋಸ್‌ಗಳಿಗೆ ಬೇಡಿಕೆ ಇಟ್ಟಿದೆ. ಇದರೊಂದಿಗೆ 22 ಕೋಟಿ ಡೋಸ್‌ಗಳನ್ನು ಖಾಸಗಿ ಕೇಂದ್ರಗಳಿಗೆ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.

ಐಐಎಸ್ಸಿಯ ಕೊರೊನಾ ಲಸಿಕೆ ಎಲ್ಲಾ ರೂಪಾಂತರಿ ವಿರುದ್ಧ ಪರಿಣಾಮಕಾರಿಐಐಎಸ್ಸಿಯ ಕೊರೊನಾ ಲಸಿಕೆ ಎಲ್ಲಾ ರೂಪಾಂತರಿ ವಿರುದ್ಧ ಪರಿಣಾಮಕಾರಿ

 ಪ್ರಧಾನಿ ಮೋದಿ ಎಚ್ಚರಿಕೆ

ಪ್ರಧಾನಿ ಮೋದಿ ಎಚ್ಚರಿಕೆ

ಭಾರತದಲ್ಲಿ ಕೊರೊನಾ ಮೂರನೇ ಅಲೆ ಸಂಭವಿಸದಂತೆ ನೋಡಿಕೊಳ್ಳಬೇಕಾದ ಗುರಿಯನ್ನು ಪ್ರಧಾನಿ ಮೋದಿಯವರು ಹೊಂದಿದ್ದು, ಎಲ್ಲರೂ ಇದರತ್ತ ಕಾರ್ಯ ನಿರ್ವಹಿಸಬೇಕಿದೆ ಎಂದು ಅವರು ಹೇಳಿದ್ದಾರೆ. ಆದರೆ ಈಚೆಗೆ ಜನರ ಫೇಸ್ ಮಾಸ್ಕ್ ಬಳಕೆ ತಗ್ಗಿದೆ. ನಮ್ಮ ದಿನನಿತ್ಯದ ಜೀವನದಲ್ಲಿ ಮಾಸ್ಕ್‌ ಬಳಕೆಯನ್ನು ಕಡ್ಡಾಯವಾಗಿಸಿಕೊಳ್ಳಬೇಕಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್‌ವಾಲ್‌ ತಿಳಿಸಿದ್ದಾರೆ.

 ಕೊರೊನಾ ಎರಡನೇ ಅಲೆಗೆ ಡೆಲ್ಟಾ ರೂಪಾಂತರ ಕಾರಣ

ಕೊರೊನಾ ಎರಡನೇ ಅಲೆಗೆ ಡೆಲ್ಟಾ ರೂಪಾಂತರ ಕಾರಣ

ಭಾರತದಲ್ಲಿ ಕೊರೊನಾ 2ನೇ ಅಲೆ ತೀವ್ರತೆಗೆ ಡೆಲ್ಟಾ ರೂಪಾಂತರವೇ ಪ್ರಮುಖ ಕಾರಣ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ತಿಳಿಸಿದೆ. ಅಧ್ಯಯನದ ವರದಿ ಪ್ರಕಾರ, ಬಿ.1.617 ರೂಪಾಂತರ ಮತ್ತು ಅದರ ವಂಶಾವಳಿ B.1.617.2 ಮುಖ್ಯವಾಗಿ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಉಲ್ಬಣಕ್ಕೆ ಕಾರಣವಾಗಿದೆ. 2021ರ ಜನವರಿ ಮತ್ತು ಫೆಬ್ರವರಿ ಮಹಾರಾಷ್ಟ್ರದಲ್ಲಿ ಸಂಗ್ರಹಿಸಲಾದ ಕೋವಿಡ್ ಪ್ರಕರಣಗಳ ಕ್ಲಿನಿಕಲ್ ಮಾದರಿಗಳಲ್ಲಿ ಶೇ. 60ರಷ್ಟು ಡೆಲ್ಟಾ (ಬಿ.1.617.2) ಮತ್ತು ಕಪ್ಪಾ (ಬಿ.1.617.1) ಪತ್ತೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಡೆಲ್ಟಾ ರೂಪಾಂತರ ಕಾಳಜಿವಹಿಸಬೇಕಾದ ರೂಪಾಂತರವಾಗಿದೆ.

English summary
Next 100 to 125 days are critical in the fight against COVID-19 in India warns Govt,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X