ಎಲ್ ಕೆ ಅಡ್ವಾಣಿಗೆ ಕುರ್ಚಿ ಬಿಟ್ಟುಕೊಟ್ಟ ನರೇಂದ್ರ ಮೋದಿ
ನವದೆಹಲಿ, ಡಿಸೆಂಬರ್, 22: ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರಿಗೆ ತಮ್ಮ ಕುರ್ಚಿ ಬಿಟ್ಟುಕೊಟ್ಟರೆ! ಗಾಬರಿಯಾಗುವಂಥದ್ದು ಏನೂ ಇಲ್ಲ. ಬಿಜೆಪಿ ಸಂಸದೀಯ ಮಂಡಳಿ ಸಭೆಗೆ ಆಗಮಿಸಿದ ಅಡ್ವಾಣಿ ಅವರನ್ನು ಮೋದಿ ಬರಮಾಡಿಕೊಂಡಾಗ ಇಂಥದ್ದೊಂದು ಫೋಟೋ ಸಿಕ್ಕಿಬಿತ್ತು.
ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಘಟಾನುಘಟಿ ನಾಯಕರ ಉಪಸ್ಥಿತಿ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರನ್ನು ಆಹ್ವಾನಿಸಿದ ಬಗೆ, ಕೋಲ್ಕತ್ತಾದಲ್ಲಿ ಏರ್ ಬಸ್ ಡಿಕ್ಕಿ ಅವಘಡ, ಒಂದೇ ವೇದಿಕೆಯಲ್ಲಿ ಶಾರುಖ್ ಮತ್ತು ಸಲ್ಮಾನ್.. ಈ ಬಗೆಯ ಫೋಟೋಗಳು ನಿಮ್ಮ ಮುಂದೆ..[ಮೋದಿ ಕೈ ಕುಲುಕಲು ರಾಹುಲ್ ನಿರಾಕರಿಸಿದರೆ!?]
ಮುಂಬೈ ನಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ಸಾಕ್ಷಿಯಾದ ಬಿಗ್ ಬಿ ಅಮಿತಾಬ್ ಬಚ್ಚನ್, ಐಶ್ವರ್ಯ ರೈ ಮತ್ತು ಅನಿಲ್ ಕಪೂರ್, ಈ ಚಿತ್ರಗಳು ನಿಮಗೆ ಇಷ್ಟವಾಗದೇ ಇರಲಾರವು. ಚಳಿಗಾಲದ ಸಂಸತ್ ಅಧಿವೇಶನದ ಮುಂದುವರಿದ ಭಾಗ ಎಲ್ಲವನ್ನು ಒಂದು ಸುತ್ತು ಹಾಕಿಕೊಂಡು ಬರೋಣ,,, (ಪಿಟಿಐ ಚಿತ್ರಗಳು)

ಪ್ರಧಾನಿ ಕುರ್ಚಿ ಬಿಟ್ಟುಕೊಟ್ಟರೆ!
ನವದೆಹಲಿಯಲ್ಲಿ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಕಂಡು ಬಂದ ದೃಶ್ಯ. ಪ್ರಧಾನಿ ಮೋದಿ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರಿಗೆ ತಮ್ಮ ಕುರ್ಚಿ ಬಿಟ್ಟುಕೊಟ್ಟರೆ ಎಂದು ಒಂದು ಕ್ಷಣ ಭಾಸವಾದರೂ ಆಶ್ಚರ್ಯವಿಲ್ಲ.

ಗಣ್ಯರ ಉಪಸ್ಥಿತಿ
ಬಿಜೆಪಿ ಸಂಸದೀಯ ಮಂಡಳಿ ಸಣಭೆಯಲ್ಲಿ೯ ಹಾಜರಿದ್ದ ಪ್ರಧಾಣಿ ನರೇಂದ್ರ ಮೋದಿ, ಹಿರಿಯ ನಾಯಕ ಎಲ್ ಕೆ ಅಡ್ವಾಣಿ, ಕೇಂದ್ರ ಸಚಿವರಾದ ವೆಂಕಯ್ಯ ನಾಯ್ಡು ಮತ್ತು ಅರುಣ್ ಜೇಟ್ಲಿ.

ಮುಂದಿನ ನಡೆ ಏನು?
ಬಿಜೆಪಿ ಸಂಸದೀಯ ಮಂಡಳಿ ಸಭೆ ಮುಗಿಸಿ ಹೊರಬಂದ ಪ್ರಧಾನಿ ನರೇಂದ್ರ ಮೋದಿ ಕಂಡಿದ್ದು ಹೀಗೆ. ಇನ್ನೊಂದೆಡೆ ಸಂಸತ್ ನಲ್ಲಿ ಕೇಂದ್ರ ಹಣಕಾಸು ಸಚಿಚ ಅರುಣ್ ಜೇಟ್ಲಿ ರಾಜೀನಾಮೆಗೆ ಒತ್ತಾಯಿಸಿ ವಿಪಕ್ಷಗಳು ನಿರಂತರ ಘೋಷಣೆ ಕೂಗುತ್ತಿವೆ.

ಜ್ಯೂಸ್ ಕುಡಿಯಿರಿ
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಉಪವಾಸ ನಿರತ ಸ್ವಾತಂತ್ರ್ಯ ಹೋರಾಟಗಾರರ ಬಳಿ ತೆರಳಿದ ಅಸ್ಸಾಂ ಮುಖ್ಯಮಂತ್ರಿ ತರುಣ್ ಗೋಗೊಯ್ ಜ್ಯೂಸ್ ನೀಡಿ ಉಪವಾಸ ಸತ್ಯಾಗ್ರಹ ಕೊನೆಗೊಳಿಸುವಂತೆ ಮನವಿ ಮಾಡಿಕೊಂಡರು.

ಜಾಕ್ವೆಲಿನ್ ಜತೆ ಅನಿಲ್
ಬಾಲಿವುಡ್ ನಟಿ ಮತ್ತು ಅನಿಲ್ ಕಪೂರ್ ಮುಂಬೈನ ಪ್ರಶಸ್ತಿ ವಿತರಣಾ ಕಾರ್ಯಕ್ರಮವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು ಹೀಗೆ.

ಖಾನ್ ಖಾನ್ ದಾನ್
ಇತ್ತೀಚೆಗೆ ಬಿಡುಗಡೆಯಾದ ದಿಲ್ವಾಲೆ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ಶಾರುಖ್ ಕಾಜೋಲ್ ಜೋಡಿ ಮುಂಬೈನ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿದ್ದರು. ಸಲ್ಮಾನ್ ಖಾನ್ ಮತ್ತು ವರುಣ್ ಧವನ್ ಸಹ ಕಾಣಿಸಿಕೊಂಡು ಕಾರ್ಯಕ್ರಮದ ರಂಗು ಹೆಚ್ಚಿಸಿದರು.

ಯೇ ದೊಸ್ತಿ ಹಮ್ ನಹೀ ಚೋಡೆಂಗೆ
ಮುಂಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಪರಸ್ಪರ ಉಭಯಕಿಶಲೋಪರಿ ವಿಚಾರಿಸಿಕೊಂಡಿದ್ದು ಹೀಗೆ.

ಏರ್ ಬಸ್ ಅವಘಡ
ಕೋಲ್ಕತ್ತಾದ ವಿಮಾನ ನಿಲ್ದಾಣದಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಅಪಘಾತ. ಜೆಟ್ ಏರ್ ವೆಸ್ ನ ಬಸ್ ಒಂದು ಏರ್ ಇಂಡಿಯಾದ ವಿಮಾನಕ್ಕೆ ಡಿಕ್ಕಿಯಾಗಿ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿ ಮಾಡಿತ್ತು.

ಮಾವ-ಸೊಸೆ
ಮುಂಬೈನಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭವೊಂದರಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತು ಸೊಸೆ ಐಶ್ವರ್ಯಾ ರೈ ಒಟ್ಟಿಗೆ ಕಾಣಿಸಿಕೊಂಡರು.












Click it and Unblock the Notifications