• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಂದುವರಿದ ಕೈ ಪ್ರತಿಭಟನೆ, ಇನ್ನು ಸಿಕ್ಕಿಲ್ಲ ಮಳೆ ಹಾನಿ ಲೆಕ್ಕ

|

ನವದೆಹಲಿ, ಆ. 05: ಸಂಸತ್ ಸದಸ್ಯರ ಅಮಾನತು ಕ್ರಮವನ್ನು ವಿರೋಧಿಸಿ ನಡೆಯುತ್ತಿರುವ ಕಾಂಗ್ರೆಸ್ ಅಧಿನಾಯಕರ ಪ್ರತಿಭಟನೆ ಬುಧವಾರವೂ ಮುಂದುವರಿದಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ಮುಖಂಡರು ಗಾಂಧಿ ಪ್ರತಿಮೆ ಎದುರು ಧರಣಿ ಕುಳಿತಿದ್ದಾರೆ.[ಮಧ್ಯಪ್ರದೇಶದ ಅವಳಿ ರೈಲು ದುರಂತದ ಚಿತ್ರಗಳು]

ಈಶಾನ್ಯ ಭಾರತದಲ್ಲಿ ಮಳೆ ಆರ್ಭಟ ಕಡಿಮೆಯಾಗಿದ್ದು ಹಾನಿ ಲೆಕ್ಕ ಹಾಕಲಾಗುತ್ತಿದೆ. ಪಶ್ಚಿಮ ಬಂಗಾಳ ಮತ್ತು ಮಣಿಪುರ ರಾಜ್ಯದಲ್ಲಿ ಕೊಮೆನ್ ಚಂಡಮಾರುತ ಅಪಾರ ಮಳೆ ಸುರಿಸಿದ್ದು ಜನಜೀವನ ಇನ್ನು ಸರಳ ಸ್ಥಿತಿಗೆ ಬಂದಿಲ್ಲ. ಇಡೀ ದೇಶಾದ್ಯಂತ ಬುಧವಾರ ಸಂಭವಿಸಿದ ವಿವಿಧ ಘಟನಾವಳಿಗಳ ಮೇಲೆ ಒಂದು ಚಿತ್ರಣ ಇಲ್ಲಿದೆ(ಪಿಟಿಐ ಚಿತ್ರಗಳು)

ಮುಂದುವರಿದ ಕಾಂಗ್ರೆಸ್ ಪ್ರತಿಭಟನೆ

ಮುಂದುವರಿದ ಕಾಂಗ್ರೆಸ್ ಪ್ರತಿಭಟನೆ

ಸಂಸತ್ ಸದಸ್ಯರ ಅಮಾನತು ಕ್ರಮವನ್ನು ವಿರೋಧಿಸಿ ಕಾಂಗ್ರೆಸ್ ಅಧಿನಾಯಕರು ಬುಧವಾರವೂ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಂಸತ್ ಭವನದ ಎದುರು ಕಪ್ಪು ಪಟ್ಟಿ ಧರಿಸಿ ಧರಣಿ ನಡೆಸಿದರು.

ನರೇಂದ್ರ ಮೋದಿ ರಾವಣ!

ನರೇಂದ್ರ ಮೋದಿ ರಾವಣ!

ದೇಶಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ. ನವದೆಹಲಿಯಲ್ಲಿ ನರೇಂದ್ರ ಮೋದಿ ಅವರನ್ನು ರಾವಣನ ರೀತಿ ಚಿತ್ರಿಸಿ ಆಕ್ರೋಶ ಹೊರಹಾಕಿದರು.

 ಗಾಂಧಿ ಪ್ರತಿಮೆ ಎದುರು ಧರಣಿ

ಗಾಂಧಿ ಪ್ರತಿಮೆ ಎದುರು ಧರಣಿ

ಕೇಂದ್ರ ಸರ್ಕಾರ ಪ್ರಜಾಪ್ರಭುತ್ವವನ್ನು ಕೊಲೆ ಮಾಡಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕರು ನವದೆಹಲಿಯ ಮಹಾತ್ಮ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.

ಪ್ರಿಯಾಂಕ ಪ್ರಖರ

ಪ್ರಿಯಾಂಕ ಪ್ರಖರ

ಕಾಲಿಫ್​ನ ಬೆವರ್ಲಿ ಹಿಲ್ಸ್​ನಲ್ಲಿ ಆಯೋಜಿಸಿದ ಕಿರುತೆರೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ. ಕ್ಯಾಂಟಿಕೋ ಎಂಬ ಟಿವಿ ಸೀರಿಯಲ್ ನಲ್ಲಿ ಪ್ರಿಯಾಂಕ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ.

ಎಲ್ಲವೂ ಕೊಚ್ಚಿ ಹೋಯ್ತು

ಎಲ್ಲವೂ ಕೊಚ್ಚಿ ಹೋಯ್ತು

ಪಶ್ಮಿಮ ಬಂಗಾಳದಲ್ಲಿ ಮಳೆ ರೌದ್ರ ನರ್ತನ ಮಾಡಿದ್ದು ಕೊಚ್ಚಿ ಹೋದ ಸೇತುವೆಯನ್ನು ನೋಡುತ್ತಿರುವ ಬಾಲಕಿ. ಬೆಳೆ ಮಳೆಯಲ್ಲಿ ಕೊಚ್ಚಿಹೋಗಿದ್ದು ಸೇನೆ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ.

ವಸತಿ ಹುಡುಕುತ್ತ

ವಸತಿ ಹುಡುಕುತ್ತ

ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡ ಮುರ್ಷಿದಾಬಾದ್ ನ ನಾಗರಿಕರು ಸುರಕ್ಷಿತ ಸ್ಥಳ ಅರಸುತ್ತ ಹೊರಟಿದ್ದಾರೆ. ಮಣಿಪುರದಲ್ಲಿ ಭೂ ಕುಸಿತ ಸಂಭವಿಸಿತ್ತಿದ್ದು ಅನೇಕ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.

ರಾಜೀನಾಮೆ ನೀಡಲ್ಲ

ರಾಜೀನಾಮೆ ನೀಡಲ್ಲ

ಲಲಿತ್ ಮೋದಿ ವೀಸಾ ಹಗರಣಕ್ಕೆ ಸಂಬಂಧಿಸಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷಗಳು ಆಗ್ರಹ ಮಾಡುತ್ತಲೇ ಇವೆ. ಪ್ರಧಾನಿ ಮೋದಿ ಬಳಿ ಸುಷ್ಮಾ ತಾವು ರಾಜೀನಾಮೆ ನೀಡಲ್ಲ ಎಂಬುದನ್ನು ಮತ್ತೆ ಮತ್ತೆ ಹೇಳಿದಂತೆ ಬುಧವಾರ ಕಂಡು ಬಂತು.

ನಾವು ಬಂದೇವ ಪ್ರ್ಯಾಕ್ಟೀಸ್ ಮಾಡೋದಕ್ಕ

ನಾವು ಬಂದೇವ ಪ್ರ್ಯಾಕ್ಟೀಸ್ ಮಾಡೋದಕ್ಕ

ಕೊಲಂಬೋದ ಒಳಾಂಗಣ ಕ್ರೀಡಾಂಗಣಕ್ಕೆ ಅಭ್ಯಾಸ ಮಾಡಲು ಆಗಮಿಸಿದ ಭಾರತ ಕ್ರಿಕೆಟ್ ತಂಡ. ಶ್ರೀಲಂಕಾ ವಿರುದ್ಧ ಭಾರತ ಮೂರು ಪಂದ್ಯಗಳ ಸರಣಿ ಆಡಲು ತೆರಳಿದ್ದು ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.

ಮಗುವಿನ ಕೈಯಲ್ಲೂ ಸ್ಫೋಟಕ!

ಮಗುವಿನ ಕೈಯಲ್ಲೂ ಸ್ಫೋಟಕ!

ಜಮ್ಮು ಕಾಶ್ಮೀರದಲ್ಲಿ ದಿನೇ ದನೇ ಪಾಕ್ ಬೆಂಬಲಿತ ಉಗ್ರರ ಉಪಟಳ ಹೆಚ್ಚಾಗುತ್ತಿದೆ. ಜಮ್ಮು ಕಾಶ್ಮೀರದ ಹೊಲ ಗದ್ದೆಗಳಲ್ಲಿ ಕಂಡು ಬಂದ ಸ್ಫೋಟಕ ಸಾಮಗ್ರಿ.

ಹುಲಿ ಮರಿಗೆ ಹಾಲು

ಹುಲಿ ಮರಿಗೆ ಹಾಲು

ನವಜಾತ ಹುಲಿ ಮರಿಗಳಿಗೆ ಹಾಲು ನೀಡುತ್ತಿರುವ ಸೂರತ್ ನ ಮೃಗಾಲಯದ ಸಿಬ್ಬಂದಿ. ಹುಲಿ ಉಳಿಸಿ ಅಭಿಯಾನಕ್ಕೆ ಇತ್ತೀಚೆಗೆ ಮಕ್ಕಳನ್ನು ಬಳಸಿಕೊಳ್ಳಲಾಗಿದ್ದು ಜಾಗೃತಿ ಮೂಡಿಸಲಾಗುತ್ತಿದೆ.

ಸೆರೆ ಸಿಕ್ಕ ಕಸಬ್-2

ಸೆರೆ ಸಿಕ್ಕ ಕಸಬ್-2

ಜಮ್ಮು-ಕಾಶ್ಮೀರದ ಹೆದ್ದಾರಿಯಲ್ಲಿ ಬುಧವಾರ ಬಿಎಸ್‌ಎಫ್ ಪಡೆಯ ಶಿಬಿರದ ಮೇಲೆ ಗುಂಡಿನ ದಾಳಿ ನಡೆಸಿದ ಉಗ್ರರ ಪೈಕಿ ಒಬ್ಬನನ್ನು ಸೆರೆಹಿಡಿಯಲಾಗಿದೆ. ಪಾಕಿಸ್ತಾನ ಮೂಲದ ಉಸ್ಮಾನ್ ಖಾನ್ ಅಲಿಯಾಸ್ ಕಾಸಿಂ ಖಾನ್‌ನನ್ನು ಭದ್ರತಾ ಪಡೆಗಳು ಜೀವಂತವಾಗಿ ಸೆರೆಹಿಡಿದಿವೆ.

ದೇಶವನ್ನೆ ನಡುಗಿಸಿದ ರೈಲು ದುರಂತ

ದೇಶವನ್ನೆ ನಡುಗಿಸಿದ ರೈಲು ದುರಂತ

ಮಧ್ಯಪ್ರದೇಶದ ಹರ್ದಾ ಜಿಲ್ಲೆಯ ಕುಡುವಾ ಗ್ರಾಮದ ಬಳಿ ಬುಧವಾರ ಸಂಭವಿಸಿದ ಅವಳಿ ರೈಲು ದುರಂತದಲ್ಲಿ 29 ಜನರು ಸಾವನ್ನಪ್ಪಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ, ಸೇನೆ ಜಂಟಿ ಕಾರ್ಯಾಚರಣೆ ನಡೆಸಿ 300ಕ್ಕೂ ಅಧಿಕ ಪ್ರಯಾಣಿಕರನ್ನು ರಕ್ಷಣೆ ಮಾಡಿವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು sonia gandhi ಸುದ್ದಿಗಳುView All

English summary
News In Pics: Congress President Sonia Gandhi and other leaders near Gandhi statue during a protest against suspension of 25 party members, at parliament in New Delhi on Wednesday. Sonia Gandhi said this morning that she is not aware of any proposal from the government to end the stand-off over the suspension of 25 lawmakers from her party. The Congress' protests, she said, would continue.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more