ಚಿತ್ರಗಳಲ್ಲಿ: ಅಣ್ಣಾ ಹೋರಾಟ, ಬಜೆಟ್ ಅಧಿವೇಶನ
ನವದೆಹಲಿ,
ಫೆ. 24: ಲೋಕಸಭಾ ಅಧಿವೇಶನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವಾಗ್ದಾಳಿ. ಇಡೀ ದಿನದ ಕಲಾಪ ಬಲಿತೆಗೆದುಕೊಂಡ ಭೂ ಸ್ವಾಧೀನ ಕಾಯ್ದೆ ಮಸೂದೆ ಕುರಿತ ಚರ್ಚೆ. ಬಿಜೆಪಿ ಸಂಸದೀಯ ಮಂಡಳಿ ಸಭೆಗೆ ಹಾಜರಾದ ಪ್ರಮುಖ ನಾಯಕರು. id="toptextpromo"> id='are-slot-1' class='oiad oi-axt oiadv'>ದೆಹಲಿಯ
ಜಂತರ್ ಮಂತರ್ ನಲ್ಲಿ ಭೂ ಸ್ವಾಧೀನ ಕಾಯ್ದೆ ಮಸೂದೆ ವಿರೋಧಿಸಿ ಹೋರಾಟಕ್ಕೆ ಕುಳಿತ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ. ಅಣ್ಣಾ ಹೋರಾಟಕ್ಕೆ ಸಾಥ್ ನೀಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್,, ಇನ್ನು ಮುಂತಾದ ಘಟನೆಗಳ ಸುದ್ದಿ ಚಿತ್ರಗಳಲ್ಲಿ...(ಪಿಟಿಐ ಚಿತ್ರಗಳು) id='are-slot-2' class='oiad oi-axt oiadv'>
ಕೇಜ್ರಿವಾಲ್ ಸಾಥ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್ ನಲ್ಲಿ ಹಮ್ಮಿಕೊಂಡಿರುವ ಭೂ ಸ್ವಾಧೀನ ಕಾಯ್ದೆ ವಿರುದ್ಧ ಹೋರಾಟದ ಪ್ರತಿಭಟನೆಗೆ ಸಾಥ್ ನೀಡಿದರು.

ಹೊಸ ಸರ್ಕಾರ
ಜಮ್ಮು ಕಾಶ್ಮೀರದಲ್ಲಿ ಬಿಜೆಪಿ-ಪಿಡಿಪಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು ಸಭೆಯೊಂದರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಪಿಡಿಪಿ ಅಧ್ಕಕ್ಷೆ ಮೆಹಬೂಬಾ ಮುಫ್ತಿ ಅವರನ್ನು ಶಾಲು ನೀಡಿ ಬರಮಾಡಿಕೊಂಡರು.

ದ್ವಿಶತಕ ಸಂಭ್ರಮ
ವಿಶ್ವಕಪ್ ನಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ದ್ವಿಶತಕ ದಾಖಲಿಸಿದ ವೆಸ್ಟ್ ಇಂಡೀಸ್ ತಂಡದ ಕ್ರೀಸ್ ಗೇಲ್ ಸಂಭ್ರಮಿಸಿದ ಪರಿ.

ಅಸೆಂಬ್ಲಿ ಅಧಿವೇಶನ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ದೆಹಲಿ ಅಸೆಂಬ್ಲಿ ಅಧಿವೇಶನದಲ್ಲಿ ಭಾಗವಹಿಸಿದ್ದರು.

ಕಾರ್ಯಕಾರಿಣಿ ಸಭೆ
ನವದೆಹಲಿಯಲ್ಲಿ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಮತ್ತು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಮಾತುಕತೆ.

ಮಹಿಳಾ ಶಕ್ತಿ
ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್, ಸ್ಮೃತಿ ಇರಾನಿ.

ಹಂದಿಜ್ವರ ಭೀತಿ
ಹಂದಿಜ್ವರ ಭೀತಿಗೆ ಒಳಗಾಗಿರುವ ಜಮ್ಮು ಕಾಶ್ಮೀರ ಜನ ಮುಖಕ್ಕೆ ಮಾಸ್ಕ್ ಧರಿಸಿ ಓಡಾಡಿದ್ದು ಕಂಡುಬಂತು.

ಗಂಭೀರ ಚಿಂತನೆ
ಸಂಸತ್ ಅಧಿವೇಶನದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ರಾಜನಾಥ್ ಸಿಂಗ್.

ಖರ್ಗೆ ಮಾತು
ಸಂಸತ್ ಅಧಿವೇಶನದಲ್ಲಿ ಭೂ ಸ್ವಾಧೀನ ಹಕ್ಕು ಮಸೂದೆ ಕುರಿತು ಅಭಿಪ್ರಾಯ ಮಂಡನೆ ಮಾಡಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ.












Click it and Unblock the Notifications