ದೇಶದಾದ್ಯಂತ ಕಾರ್ಮಿಕರ ಆಕ್ರೋಶ ಹೇಗಿತ್ತು?

Written By:
Subscribe to Oneindia Kannada

ನವದೆಹಲಿ, ಸೆಪ್ಟೆಂಬರ್, 02: ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್ ಗೆ ದೇಶದಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಕೊಲ್ಕತ್ತಾ ಮತ್ತು ಭುವನೇಶ್ವರ ಮತ್ತು ಕೇರಳದಲ್ಲಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಕೋಲ್ಕತಾದ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಬೆಂಗಳೂರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಬಸ್ ಸಂಚಾರ ಸಂಪೂರ್ಣ ಬಂದ್ ಆಗಿದ್ದು ಸಂಜೆ ಆರಂಭವಾಯಿತು. ಬಂದ್ ಬೆಂಗಳೂರಿನ ಜನಜೀವನದ ಮೇಲೆ ಯಾವ ಪರಿಣಾಮ ಉಂಟುಮಾಡಲಿಲ್ಲ.[ಗಂಡ-ಹೆಂಡ್ತಿ ಗಲಾಟೆ ತೋರಿಸೋ ನಿಮ್ಗೆ ಇದಕ್ಕೆಲ್ಲ ಪುರಸೊತ್ತು ಎಲ್ಲಿ?]

ಸಂಚಾರ ನಡೆಸುತ್ತಿದ್ದ ಆಟೋಗಳನ್ನು ತಡೆದು ಪ್ರತಿಭಟನಾಕಾರರು ಭುವನೇಶ್ವರದಲ್ಲಿ ಆಕ್ರೋಶ ಹೊರಹಾಕಿದರು. ಅಮೃತ್ ಸರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಕಾರ್ಮಿಕರು ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿ ದಹಿಸಿದರು. ಇಡೀ ದೇಶದಾದ್ಯಂತ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಬಂದ್ ಹೇಗಿತ್ತು? ಚಿತ್ರಗಳಲ್ಲಿ ನೋಡಿಕೊಂಡು ಬನ್ನಿ(ಪಿಟಿಐ ಚಿತ್ರಗಳು)

ಆಟೋ ಬಂದ್ ಮಾಡಿ

ಆಟೋ ಬಂದ್ ಮಾಡಿ

ಬಂದ್ ಗೆ ಕರೆ ನೀಡಿದ್ದರೂ ಆಟೋ ಚಾಲನೆಗೆ ಮುಂದಾದ ಚಾಲಕನಿಗೆ ಅಡ್ಡಿಪಡಿಸಿದ ಪ್ರತಿಭಟನಾಕಾರರು. ಭುವನೇಶ್ವರದ ಚಿತ್ರ.

ಕಚೇರಿ ಖಾಲಿ

ಕಚೇರಿ ಖಾಲಿ

ಕಾರ್ಮಿಕರು ಬಂದ್ ಗೆ ಕರೆ ನೀಡಿದ್ದ ಕಾರಣ ಖಾಲಿ ಹೊಡೆದ ವಾರಣಾಸಿಯ ಎಲ್ ಐಸಿ ಕಚೇರಿ.

ಆಕ್ರೋಶದ ಪರಿ

ಆಕ್ರೋಶದ ಪರಿ

ಬಂದ್ ಗೆ ಕರೆನೀಡಿದ್ದರೂ ಆಟೋ ಚಾಲನೆಗೆ ಮುಂದಾಗ ಆಕ್ರೋಶಗೊಂಡ ಕಾರ್ಮಿಕರು ಆಟೋ ವನ್ನು ನೆಲಕ್ಕೆ ಅಪ್ಪಳಿಸಲು ಮುಂದಾದರು. ಭುವನೇಶ್ವರದ ಚಿತ್ರ.

ಕೋಲ್ಕತಾ

ಕೋಲ್ಕತಾ

ಕಾರ್ಮಿಕ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಬಣಗುಡುತ್ತಿದ್ದ ಕೋಲ್ಕತಾದ ರಸ್ತೆಗಳು.

ರೈಲು ತಡೆ

ರೈಲು ತಡೆ

ಪಾಟ್ನಾದಲ್ಲಿ ರೈಲು ತಡೆದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಕಾರ್ಮಿಕರು.

ಪ್ರತಿಕೃತಿ ದಹನ

ಪ್ರತಿಕೃತಿ ದಹನ

ಅಮೃತ್ ಸರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಕಾರ್ಮಿಕರು ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿ ದಹಿಸಿದರು.

 ಬಂದ್ ನಲ್ಲೂ ಆಟ

ಬಂದ್ ನಲ್ಲೂ ಆಟ

ಬಂದ್ ಹಿನ್ನೆಲೆಯಲ್ಲಿ ರಸ್ತೆಯಲ್ಲೇ ಕುಳಿತು ಕಾರ್ಡ್ಸ್ ಆಡಿದ ಕಾರ್ಮಿಕರು. ಭುವನೇಶ್ವರದ ಚಿತ್ರ.

 ನಿಂತಲ್ಲೆ ನಿಂತ ಬಸ್ ಗಳು

ನಿಂತಲ್ಲೆ ನಿಂತ ಬಸ್ ಗಳು

ಕೋಲ್ಕತಾದಲ್ಲಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಹೌರಾತ್ ನಿಲ್ದಾಣದ ಚಿತ್ರ.

ಕಾರ್ಮಿಕರು ಬರಲಿಲ್ಲ

ಕಾರ್ಮಿಕರು ಬರಲಿಲ್ಲ

ದೇಶವ್ಯಾಪಿ ಬಂದ್ ಹಿನ್ನೆಲೆಯಲ್ಲಿ ಗಣಿಗಾರಕೆ ಕೆಲಸಗಳು ಸ್ಥಗಿತವಾಗಿದ್ದವು, ಜಾರ್ಖಂಡ್ ನ ದನ್ಬಾದ್ ಗಣಿಯೊಂದರ ಶುಕ್ರವಾರದ ಚಿತ್ರ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
News In Pics: The one-day nationwide strike called by ten central trade unions on September 2 evoked a mixed response all over India. The trade union workers were joined by the employees of banks, public sector, telecom and factories seeking higher wages and protesting against Union Government.
Please Wait while comments are loading...