ಹೊಸ ವರ್ಷದ ಆಚರಣೆ: ಹೋಟೆಲ್, ಪಬ್, ಕ್ಲಬ್‌ಗಳಿಗೆ ಹೈದರಾಬಾದ್ ಪೊಲೀಸರ ಮಾರ್ಗಸೂಚಿ
ಹೈದರಾಬಾದ್, ಡಿ. 19: ಪಾನಮತ್ತರಾದ ಗ್ರಾಹಕರಿಗೆ ಕ್ಯಾಬ್‌ಗಳನ್ನು ಒದಗಿಸುವುದು, ಸಿಸಿಟಿವಿಗಳನ್ನು ಅಳವಡಿಸುವುದು, ಜಾಸ್ತಿ ಶಬ್ಧ ಮಾಲಿನ್ಯ ಮಾಡದಿರುವುದು ಸೇರಿದಂತೆ ಹೈದರಾಬಾದ್ ಪೊಲೀಸರು ಹೊಸವರ್ಷ ಆಚರಣೆಗೆ ಹಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ.
ಹೈದರಾಬಾದ್‌ನಲ್ಲಿರುವ ಪಬ್‌ಗಳು ಮತ್ತು ಹೋಟೆಲ್‌ಗಳು ಹೊಸ ವರ್ಷದ ಮುನ್ನಾದಿನದ ಪಾರ್ಟಿಗಳನ್ನು ಆಯೋಜಿಸಲು ಸಜ್ಜಾಗುತ್ತಿವೆ. ಇದರ ಬೆನ್ನಲ್ಲೆ ಹೈದರಾಬಾದ್ ಪೊಲೀಸರು ಡಿಸೆಂಬರ್ 31, 2022 ಮತ್ತು ಜನವರಿ 1, 2023 ರ ಮಧ್ಯರಾತ್ರಿಯಂದು ಕಾರ್ಯಕ್ರಮ ಆಯೋಜಿಸುವ ಎಲ್ಲಾ ಸಂಸ್ಥೆಗಳು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ.
ತ್ರೀ ಸ್ಟಾರ್ ಮತ್ತು ಅದಕ್ಕಿಂತ ಹೆಚ್ಚಿನ ಹೋಟೆಲ್‌ಗಳು, ಕ್ಲಬ್‌ಗಳು ಮತ್ತು ಪಬ್‌ಗಳ ಮ್ಯಾನೇಜ್‌ಮೆಂಟ್‌ಗಳಿಗೆ ಸಾಕಷ್ಟು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಮತ್ತು 45 ಡೆಸಿಬಲ್‌ಗಿಂತ ಕಡಿಮೆ ಧ್ವನಿಯಲ್ಲಿ ಹಾಡುಗಳನ್ನು ಹಾಕಲು ಪೊಲೀಸರು ತಿಳಿಸಿದ್ದಾರೆ. ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್ ಮಾರ್ಗಸೂಚಿಗಳನ್ನು ಹೊರಡಿದ್ದಾರೆ.

ಸಾಕಷ್ಟು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ
ಅನುಮತಿಸಲಾದ ಸಮಯಕ್ಕಿಂತ ಹೆಚ್ಚು ಮದ್ಯವನ್ನು ಪೂರೈಸಬಾರದು. ಯಾವುದೇ ಕಾರ್ಯಕ್ರಮದಲ್ಲಿ ಅಶ್ಲೀಲತೆ ಮತ್ತು ನಗ್ನತೆಗೆ ಅವಕಾಶ ನೀಡದಂತೆ ಸೂಚನೆ ನೀಡಲಾಗಿದೆ.
ಈವೆಂಟ್‌ಗಳು ಮತ್ತು ಪಾರ್ಟಿಗಳನ್ನು ಆಯೋಜಿಸುವ ಸಂಸ್ಥೆಗಳು ಎಲ್ಲಾ ಪ್ರವೇಶ, ನಿರ್ಗಮನ ಸ್ಥಳಗಳಲ್ಲಿ ಮತ್ತು ಪಾರ್ಕಿಂಗ್ ಸ್ಥಳಗಳಲ್ಲಿ ಕಾರ್ಯನಿರ್ವಹಿಸುವ ಸಿಸಿಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಿರಬೇಖು, ಇವು ಕಾರ್ಯನಿರ್ವಹಿಸುತ್ತಿರಬೇಕು.
ಉಡುಪುಗಳು, ನೃತ್ಯಗಳು, ಸನ್ನೆಗಳು ಮತ್ತು ಪದಗಳಲ್ಲಿ ಅಶ್ಲೀಲತೆ ಇರಬಾರದು. ಯಾವುದೇ ಕಾರ್ಯಕ್ರಮದಲ್ಲಿ "ಅಶ್ಲೀಲತೆ ಮತ್ತು ನಗ್ನತೆಯನ್ನು" ಅನುಮತಿಸಬಾರದು ಎಂದು ಪೊಲೀಸರು ಹೇಳಿದ್ದಾರೆ.

ಕುಡಿದವರಿಗೆ ಕ್ಯಾಬ್ ಒದಗಿಸುವುದು ಪಬ್, ಬಾರ್ ಜವಾಬ್ದಾರಿ
ಅಬಕಾರಿ ಇಲಾಖೆಯಿಂದ ಅನುಮತಿ ನೀಡಿರುವ ಸಮಯ ಹೊರತುಪಡಿಸಿ ಮದ್ಯ ಪೂರೈಕೆ ಮಾಡುವಂತಿಲ್ಲ. ಇನ್ನು, ಪಾನಮತ್ತರಾಗಿ ಸ್ಥಳದಿಂದ ಹೊರಡುವ ಗ್ರಾಹಕರಿಗೆ ಚಾಲಕರು ಅಥವಾ ಕ್ಯಾಬ್‌ಗಳನ್ನು ಒದಗಿಸುವ ವ್ಯವಸ್ಥೆ ಮಾಡುವ ಜವಾಬ್ದಾರಿಯನ್ನು ಪಬ್‌ಗಳು, ಬಾರ್‌ಗಳ ಆಡಳಿತ ಮಂಡಳಿ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
'ಒಂದು ದಿನಕ್ಕೆ ಗೊತ್ತುಪಡಿಸಿದ ಚಾಲಕ' ಪರಿಕಲ್ಪನೆಯನ್ನು ಗ್ರಾಹಕರಿಗೆ ವಿವರಿಸಲು ಪಬ್, ಬಾರ್, ಹೋಟೆಲ್‌ಗಳಿಗೆ ತಿಳಿಸಲಾಗಿದೆ. ಕಾರ್ಯಕ್ರಮದಲ್ಲಿ ಧ್ವನಿ ಮಟ್ಟವನ್ನು 45 ಡೆಸಿಬಲ್ ಅಥವಾ ಅದಕ್ಕಿಂತ ಕಡಿಮೆ ಮಟ್ಟದಲ್ಲಿ ನಿರ್ವಹಿಸಬೇಕು. ಯಾವುದೇ ಬಂದೂಕುಗಳನ್ನು ಅನುಮತಿಸಬಾರದು.

ಮೋಟಾರು ವಾಹನ ಕಾಯ್ದೆ ಬಗ್ಗೆ ವಿವರಣೆ ನೀಡಿ
ಡ್ರಗ್ಸ್ ಅಥವಾ ಮಾದಕ ದ್ರವ್ಯಗಳನ್ನು ಬಳಸಲು ಯಾರಿಗೂ ಅವಕಾಶ ನೀಡದಂತೆ ಸಂಘಟಕರಿಗೆ ಎಚ್ಚರಿಕೆ ನೀಡಲಾಗಿದೆ. ಪಾರ್ಕಿಂಗ್ ಪ್ರದೇಶಗಳು ಮತ್ತು ಮಾದಕವಸ್ತುಗಳನ್ನು ರಹಸ್ಯವಾಗಿ ಮಾರಾಟ ಮಾಡಬಹುದಾದ ಇತರ ಸ್ಥಳಗಳ ಬಗ್ಗೆ ವಿಶೇಷ ಗಮನ ಹರಿಸಬೇಕು ಎಂದು ಸೂಚಿಸಲಾಗಿದೆ.
ಇನ್ನೂ, ಹೋಟೆಲ್‌ಗಳು, ಕ್ಲಬ್‌ಗಳು, ಪಬ್‌ಗಳು, ಬಾರ್‌ಗಳು ಮತ್ತು ರೆಸ್ಟೊರೆಂಟ್‌ಗಳು ತಮ್ಮ ಗ್ರಾಹಕರಿಗೆ ಕುಡಿದು ವಾಹನ ಚಲಾಯಿಸುವುದು ಮತ್ತು ಅಪಾಯಕಾರಿ ಚಾಲನೆಯ ಪರಿಣಾಮಗಳ ಬಗ್ಗೆ ತಿಳಿಸುವ ಮೋಟಾರು ವಾಹನ ಕಾಯ್ದೆ ಬಗ್ಗೆ ವಿವರಿಸಬೇಕು ಎಂದು ಮಾರ್ಗಸೂಚಿಗಳಲ್ಲಿ ಹೇಳಲಾಗಿದೆ.

ಸಾಮರ್ಥ್ಯ ಮೀರಿ ಟಿಕೆಟ್ ಮಾರಾಟ ಮಾಡಬಾರದು
ಕಾರ್ಯಕ್ರಮದ ಪಾಸ್‌ಗಳು ಅಥವಾ ಟಿಕೆಟ್‌ಗಳನ್ನು ಸ್ಥಳದ ಸಾಮರ್ಥ್ಯಕ್ಕಿಂತ ಮೀರಿ ಮಾರಾಟ ಮಾಡಬಾರದು. ಇದರಿಂದ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳಿಗೆ ಕಾರಣವಾಗಬಹುದು. ಸಂಘಟಕರು ವಾಹನ ನಿಲುಗಡೆಗೆ ವಿಶೇಷ ವ್ಯವಸ್ಥೆ ಮಾಡಬೇಕು ಮತ್ತು ಯಾವುದೇ ಅಡೆತಡೆಯಿಲ್ಲದೆ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಜೊತೆಗೆ ಸಾಕಷ್ಟು ಭದ್ರತಾ ಸಿಬ್ಬಂದಿಗಳನ್ನು ನೇಮಿಸಬೇಕು.
ಜನವರಿ 1 ರಂದು ಮಧ್ಯರಾತ್ರಿ 1 ಗಂಟೆಯವರೆಗೆ ಕಾರ್ಯಕ್ರಮಗಳು ಅಥವಾ ಪಾರ್ಟಿಗಳನ್ನು ನಡೆಸುವವ ಎಲ್ಲಾ ಪಬ್‌ಗಳು ಮತ್ತು ಹೋಟೆಲ್‌ಗಳು ಕನಿಷ್ಟ 10 ದಿನಗಳ ಮುಂಚಿತವಾಗಿ ಅನುಮತಿಗಾಗಿ ಆಯುಕ್ತರಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.
-
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ












Click it and Unblock the Notifications