ವಿಡಿಯೋ: ದಕ್ಷಿಣ ಕಾಶ್ಮೀರದ ಕಾಡಿನಲ್ಲಿ ಚಳಿ ಕಾಯಿಸುತ್ತಿರುವ ಉಗ್ರರು

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಜನವರಿ 17: ದಕ್ಷಿಣ ಕಾಶ್ಮೀರದ ಕಾಡುಗಳಲ್ಲಿ ಹಲವು ಉಗ್ರಗಾಮಿಗಳು ಅಡಗಿಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷ್ಯಗಳು ದೊರಕಿವೆ. ಹೊಸ ವಿಡಿಯೋವೊಂದರಲ್ಲಿ ಲಷ್ಕರ್ ಇ ತೋಯ್ಬಾ ಉಗ್ರರು ಕಾಡಿನಲ್ಲಿ ಅವಿತಿರುವುದು ಪತ್ತೆಯಾಗಿದೆ. ಹಿನ್ನೆಲೆ ಹಾಗೂ ಗಾಳಿಯ ಶಬ್ದವು ಉಗ್ರರು ದಕ್ಷಿಣ ಕಾಶ್ಮೀರದ ಕಾಡುಗಳಲ್ಲಿ ಅಡಗಿಕೊಂಡಿರುವುದನ್ನೇ ಸೂಚಿಸುತ್ತದೆ.

ಉಗ್ರಗಾಮಿಗಳ ಬಳಿ ಬಂದೂಕುಗಳಿವೆ. ಬೆಂಕಿ ಹಾಕಿ ಅದರ ಮುಂದೆ ಕೂತಿರುವುದನ್ನು ಗಮನಿಸಿದರೆ, ಕಾಶ್ಮೀರದ ಚಳಿಯಿಂದ ರಕ್ಷಣೆ ಪಡೆಯಲು ಹೀಗೆ ಮಾಡಿದಂತಿದೆ. ಆದರೆ ಈ ವಿಡಿಯೋದಲ್ಲಿರುವ ಉಗ್ರರು ಹೊಸದಾಗಿ ದೇಶದೊಳಗೆ ನುಸುಳಿದ್ದಾರೋ ಅಥವಾ ದಾಳಿಯ ನಂತರ ಇಲ್ಲಿ ಆಶ್ರಯ ಪಡೆದಿದ್ದಾರೋ ಎಂಬುದು ಗೊತ್ತಾಗುವುದಿಲ್ಲ.[ಜಮ್ಮುನ ಅಖ್ನೂರ್ನಲ್ಲಿ ಉಗ್ರರ ದಾಳಿ, 3 ಕಾರ್ಮಿಕರ ಹತ್ಯೆ]

Jammu and Kashmir

ಕಳೆದ ವಾರವಷ್ಟೆ ಉಗ್ರಗಾಮಿಗಳು ಅಖ್ನೂರಿನ ಸೇನಾ ಕ್ಯಾಂಪ್ ಮೇಲೆ ದಾಳಿ ನಡೆಸಿ ಮೂವರನ್ನು ಕೊಂದಿದ್ದರು. ಆ ಉಗ್ರರೇ ಕಾಡಿನೊಳಗೆ ಇದ್ದಾರೆಯೇ ಎಂಬ ಅನುಮಾನ ಮೂಡುತ್ತದೆ. ಉಗ್ರರ ಇಂಥ ಹಲವು ವಿಡಿಯೋಗಳು ಕಳೆದ ಕೆಲ ತಿಂಗಳಲ್ಲಿ ಕಂಡುಬಂದಿವೆ. ಹಿಮದಲ್ಲಿ ಆಟವಾಡುತ್ತಿದ್ದ ಹಿಜ್ಬುಲ್ ಮುಜಾಹಿದೀನ್ ಉಗ್ರರ ವಿಡಿಯೋ ಸಿಕ್ಕಿತ್ತು.

ಈ ವಿಡಿಯೋದಿಂದ ಗೊತ್ತಾಗುವುದು ಏನೆಂದರೆ, ಉಗ್ರರು ದಕ್ಷಿಣ ಕಾಶ್ಮೀರದ ಕಾಡಿನಲ್ಲಿ ಅಡಗಿಕೊಂಡಿದ್ದಾರೆ. ಈ ಕಾಡಿನಲ್ಲಿ ಕಾರ್ಯಾಚರಣೆ ನಡೆಸುವುದು ಕಷ್ಟಸಾಧ್ಯ. ಜತೆಗೆ ಉಗ್ರರನ್ನು ಪತ್ತೆ ಹಚ್ಚುವುದು ಕಷ್ಟ. ಪಾಕಿಸ್ತಾನದಿಂದ ದೇಶದೊಳಗೆ ನುಸುಳುವ ಉಗ್ರರು ಕಾಶ್ಮೀರದ ಮುಖ್ಯಪ್ರದೇಶ ಹೊಕ್ಕಿ, ದಾಳಿ ನಡೆಸುವ ಮುನ್ನ ಕಾಡಿನಲ್ಲೇ ಆಶ್ರಯ ಪಡೆಯುತ್ತಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
There is more proof that has emerged which suggests that several militants continue to hide in the jungles of South Kashmir. A new video showing three Lashkar-e-Tayiba militants hiding in the jungle has surfaced.
Please Wait while comments are loading...