ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Vande Bharat Express: ಗಂಟೆಗೆ 220 ಕಿಮೀ ವೇಗ, ಬರಲಿದೆ ಭಾರತದ ಅತ್ಯಂತ ವೇಗದ ರೈಲು- ಈ ಬಗ್ಗೆ ಮಾಹಿತಿ ತಿಳಿಯಿರಿ

|
Google Oneindia Kannada News

ನವದೆಹಲಿ, ಜನವರಿ 21: ಭಾರತೀಯ ರೈಲ್ವೇಯು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸ್ಲೀಪರ್ ಆವೃತ್ತಿಯನ್ನು ಸಿದ್ಧಪಡಿಸುತ್ತಿದೆ. ಅದು 220 ಕಿಮೀ ವೇಗವನ್ನು ಮುಟ್ಟಲಿದೆ. ಪ್ರಸ್ತುತ ವಂದೇ ಭಾರತ್ ರೈಲುಗಳ ಚೇರ್ ಕಾರ್ ಆವೃತ್ತಿಗಿಂತ 40 ಕಿಮೀ ಹೆಚ್ಚು ವೇಗದಲ್ಲಿ ಸಂಚರಿಸಲಿದೆ. ರೈಲ್ವೇ ಪ್ರಯಾಣಿಕರ ಆಕರ್ಷಣೆಯ ಕೇಂದ್ರವಾಗಿರುವ ಈ ಸೆಮಿ ಹೈಸ್ಪೀಡ್ ರೈಲುಗಳು ಗಂಟೆಗೆ 220 ಕಿ.ಮೀ ವೇಗದಲ್ಲಿ ಚಲಿಸುವಂತೆ ವಿನ್ಯಾಸಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ರೈಲುಗಳನ್ನು ವಂದೇ ಭಾರತ್ 2.0 ನಲ್ಲಿರುವಂತೆ ಉಕ್ಕಿನ ಬದಲಿಗೆ ಅಲ್ಯೂಮಿನಿಯಂ ಬಳಸಿ ತಯಾರಿಸಲಾಗುವುದು. ಇದು ರೈಲಿನ ತೂಕವನ್ನು ಕಡಿಮೆ ಮಾಡುತ್ತದೆ. ಇದು ವೇಗವನ್ನು ಹೆಚ್ಚಿಸುತ್ತದೆ.

 ಗರಿಷ್ಠ ವೇಗ ಗಂಟೆಗೆ 220 ಕಿಮೀ

ಗರಿಷ್ಠ ವೇಗ ಗಂಟೆಗೆ 220 ಕಿಮೀ

ವಂದೇ ಭಾರತ್ ರೈಲುಗಳ ಸ್ಲೀಪರ್ ಆವೃತ್ತಿಯ ಗರಿಷ್ಠ ವೇಗವು ಗಂಟೆಗೆ 220 ಕಿಮೀ ಆಗಿರುತ್ತದೆ. ಇದು ಭಾರತದ ಅತ್ಯಂತ ವೇಗದ ರೈಲು ಆಗಲಿದೆ. ಇದು ಹಳಿಗಳ ಮೇಲೆ ಗಂಟೆಗೆ 200 ಕಿಮೀ ವೇಗದಲ್ಲಿ ಚಲಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೊಸ ಸ್ಲೀಪರ್ ವಂದೇ ಭಾರತ್ ರೈಲುಗಳು ದೆಹಲಿ-ಮೀರತ್ ನಡುವೆ ಸಂಚರಿಸಲಿವೆ. ಇವು ಭಾರತದ ಅತ್ಯಂತ ವೇಗದ ರೈಲುಗಳಾಗಿ ಹೆಸರು ಮಾಡಲಿವೆ. ಪ್ರಸ್ತುತ RRTS ರೈಲು 180 ಕಿಮೀ ವೇಗವನ್ನು ಹೊಂದಿದೆ.

 180 ಕಿಲೋಮೀಟರ್ ವೇಗ

180 ಕಿಲೋಮೀಟರ್ ವೇಗ

ಪ್ರಸ್ತುತ ವಂದೇ ಭಾರತ್ ಎಕ್ಸ್‌ಪ್ರೆಸ್ ಗಂಟೆಗೆ 180 ಕಿಲೋಮೀಟರ್ ವೇಗವನ್ನು ಹೊಂದಿದೆ. ಆದರೆ ಸುರಕ್ಷತೆಯ ಕಾರಣಗಳಿಂದ ಕೇವಲ 130 ಕಿಮೀ ವೇಗದಲ್ಲಿ ಸಂಚರಿಸುತ್ತದೆ. ಚೇರ್ ಕಾರ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಶತಾಬ್ದಿ ಎಕ್ಸ್‌ಪ್ರೆಸ್ ಅನ್ನು ಹಂತ ಹಂತವಾಗಿ ಬದಲಾಯಿಸಲಿದ್ದು, ಸ್ಲೀಪರ್ ಆವೃತ್ತಿಯು ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳಿಗೆ ಪರ್ಯಾಯವಾಗಲಿದೆ ಎಂದು ಅಧಿಕಾರಿಗಲು ಮಾಹಿತಿ ನೀಡಿದ್ದಾರೆ.

 400 ವಂದೇ ಭಾರತ್ ರೈಲುಗಳಿಗೆ ಟೆಂಡರ್

400 ವಂದೇ ಭಾರತ್ ರೈಲುಗಳಿಗೆ ಟೆಂಡರ್

ರೈಲ್ವೆಯು 400 ವಂದೇ ಭಾರತ್ ರೈಲುಗಳಿಗೆ ಟೆಂಡರ್ ನೀಡಿದೆ. ಈ ತಿಂಗಳ ಅಂತ್ಯದ ವೇಳೆಗೆ ಕಾಮಗಾರಿಗೆ ಅನುಮೋದನೆ ನೀಡಲಾಗುವುದು. ಅಧಿಕಾರಿಗಳ ಪ್ರಕಾರ, ಅಂತಹ ಕೆಲವು ಆರಂಭಿಕ ರೈಲುಗಳು ಸ್ಥಳೀಯವಾಗಿ ತಯಾರಿಸಿದ ರೈಲುಗಳ ಸ್ಲೀಪರ್ ಆವೃತ್ತಿಗಳಾಗಿರಬಹುದು. ನಾಲ್ಕು ಪ್ರಮುಖ ದೇಶೀಯ ಮತ್ತು ವಿದೇಶಿ ಕಂಪನಿಗಳು ಉತ್ಪಾದನೆಗೆ ಮುಂದೆ ಬಂದಿವೆ.

 ಉಕ್ಕಿನಿಂದ ತಯಾರಿಸಿದ ರೈಲುಗಳು

ಉಕ್ಕಿನಿಂದ ತಯಾರಿಸಿದ ರೈಲುಗಳು

ಯೋಜನೆಯ ಪ್ರಕಾರ, ಮೊದಲ 200 ವಂದೇ ಭಾರತ್ ರೈಲುಗಳು ಶತಾಬ್ದಿ ಎಕ್ಸ್‌ಪ್ರೆಸ್‌ನ ಮಾದರಿಯಲ್ಲಿ ಆಸನ ವ್ಯವಸ್ಥೆಯನ್ನು ಹೊಂದಿದ್ದು, ಗಂಟೆಗೆ 180 ಕಿಮೀ ವೇಗದಲ್ಲಿ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ. ಈ ರೈಲುಗಳನ್ನು ಉಕ್ಕಿನಿಂದ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗ ಬರುವ ಸ್ಲೀಪರ್‌ ರೈಲುಗಳನ್ನು ಅಲ್ಯೂಮಿನಿಯಮ್‌ನಿಂದ ನಿರ್ಮಿಸಲಾಗುತ್ತದೆ.

 200 ವಂದೇ ಭಾರತ್ ಸ್ಲೀಪರ್ ರೈಲುಗಳು

200 ವಂದೇ ಭಾರತ್ ಸ್ಲೀಪರ್ ರೈಲುಗಳು

ಎರಡನೇ ಹಂತದಲ್ಲಿ, 200 ವಂದೇ ಭಾರತ್ ರೈಲುಗಳು ಸ್ಲೀಪರ್ ಕೋಚ್‌ ಆಗಿರುತ್ತವೆ ಮತ್ತು ಅವುಗಳನ್ನು ಅಲ್ಯೂಮಿನಿಯಂನಿಂದ ಮಾಡಲಾಗುವುದು. ಎರಡನೇ ಆವೃತ್ತಿಯ ಸ್ಲೀಪರ್ ವಂದೇ ಭಾರತ್ ರೈಲುಗಳು ಗಂಟೆಗೆ ಗರಿಷ್ಠ 200 ಕಿ.ಮೀ ವೇಗದಲ್ಲಿ ಚಲಿಸಲಿವೆ. ಇದಕ್ಕಾಗಿ ದೆಹಲಿ-ಮುಂಬೈ, ದೆಹಲಿ-ಕೋಲ್ಕತ್ತಾ ರೈಲು ಹಳಿಗಳ ದುರಸ್ತಿ, ಸಿಗ್ನಲ್ ವ್ಯವಸ್ಥೆ, ಸೇತುವೆಗಳನ್ನು ಸರಿಪಡಿಸಲಾಗುತ್ತಿದೆ ಮತ್ತು ಬೇಲಿ ಹಾಕಲಾಗುತ್ತಿದೆ. ಕೆಲಸ ನಡೆಯುತ್ತಿದೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ರೈಲು ಮಾರ್ಗಗಳಲ್ಲಿ ತಾಂತ್ರಿಕ ರಕ್ಷಾಕವಚ

ರೈಲು ಮಾರ್ಗಗಳಲ್ಲಿ ತಾಂತ್ರಿಕ ರಕ್ಷಾಕವಚ

ಇದಲ್ಲದೇ ಎರಡೂ ರೈಲು ಮಾರ್ಗಗಳಲ್ಲಿ 1,800 ಕೋಟಿ ರೂಪಾಯಿ ವೆಚ್ಚದಲ್ಲಿ ಆ್ಯಂಟಿ ಡಿಕ್ಕಿ ತಾಂತ್ರಿಕ ರಕ್ಷಾಕವಚ ಅಳವಡಿಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದರು. ಮುಂದಿನ ಎರಡು ವರ್ಷಗಳಲ್ಲಿ ತಮಿಳುನಾಡಿನ ಚೆನ್ನೈನಲ್ಲಿರುವ ಐಸಿಎಫ್, ಮಹಾರಾಷ್ಟ್ರದ ಲಾತೂರ್ ರೈಲು ಕಾರ್ಖಾನೆ ಮತ್ತು ಹರಿಯಾಣದ ಸೋನೆಪತ್‌ನಲ್ಲಿ ನಾಲ್ಕು ನೂರು ರೈಲುಗಳನ್ನು ಉತ್ಪಾದಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಈಗಿರುವ ವಂದೇ ಭಾರತ್ ರೈಲುಗಳ ಪಟ್ಟಿ

ಈಗಿರುವ ವಂದೇ ಭಾರತ್ ರೈಲುಗಳ ಪಟ್ಟಿ

1- ನವದೆಹಲಿ ವಾರಣಾಸಿ ವಂದೇ ಭಾರತ್ ಎಕ್ಸ್‌ಪ್ರೆಸ್
2- ನವದೆಹಲಿ ಕತ್ರಾ ವಂದೇ ಭಾರತ್ ಎಕ್ಸ್‌ಪ್ರೆಸ್
3- ಗಾಂಧಿನಗರ-ಮುಂಬೈ ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್
4- ನವದೆಹಲಿ- ಅಂಬ್ ಅಂದೌರಾ ವಂದೇ ಭಾರತ್ ಎಕ್ಸ್‌ಪ್ರೆಸ್
5- ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್
6- ಬಿಲಾಸ್ಪುರ್-ನಾಗ್ಪುರ ವಂದೇ ಭಾರತ್ ಎಕ್ಸ್ಪ್ರೆಸ್
7- ಹೌರಾದಿಂದ ನ್ಯೂ ಜಲ್ಪೈಗುರಿ ವಂದೇ ಭಾರತ್ ಎಕ್ಸ್‌ಪ್ರೆಸ್

English summary
Indian Railways is preparing a sleeper version of the Vande Bharat Express train. It will reach a speed of 220 kmph. It will run 40 km/h faster than the chair car version of the current Vande Bharat trains,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X