ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಸಿಮ್ ಪಡೆಯಲು ಆಧಾರ್ ನಂಬರ್ ಕಡ್ಡಾಯ

|
Google Oneindia Kannada News

ನವದೆಹಲಿ, ನ.3 : ಹೊಸದಾಗಿ ಮೊಬೈಲ್ ಸಿಮ್ ಖರೀದಿ ಮಾಡಬೇಕಾದರೆ ಇನ್ನು ಮುಂದೆ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ. ಮೊಬೈಲ್‌ ನಂಬರ್‌ ಜತೆಗೆ ಆಧಾರ್‌ ಸಂಖ್ಯೆ ಜೋಡಿಸುವ ಪ್ರಸ್ತಾಪವನ್ನು ಕಾರ್ಯರೂಪಕ್ಕೆ ತರುವ ಸಲುವಾಗಿ ಈ ನಿಯಮವನ್ನು ಜಾರಿಗೆ ತರಲಾಗಿದೆ.

ದೂರ ಸಂಪರ್ಕ ಇಲಾಖೆ ಸಿಮ್‌ ನೀಡುವಾಗ ಆಧಾರ್‌ ಸಂಖ್ಯೆ ಪಡೆದುಕೊಳ್ಳಲು ಎಲ್ಲ ಮೊಬೈಲ್‌ ಸೇವಾದಾರ ಕಂಪೆನಿಗಳಿಗೆ ಸೂಚನೆ ನೀಡಿದೆ. ಆದ್ದರಿಂದ ಇನ್ನು ಮುಂದೆ ಹೊಸ ಸಿಮ್‌ ಖರೀದಿಸುವಾಗ ಅರ್ಜಿಯ ಜತೆಗೆ ಆಧಾರ್‌ ಕಾರ್ಡಿನ ಪ್ರತಿಯನ್ನು ಲಗತ್ತಿಸಬೇಕಾಗಿದೆ. [ಆಧಾರ್‌ ಸಂಖ್ಯೆಗೆ ಮೊಬೈಲ್‌ ನಂಬರ್ ಲಿಂಕ್]

mobile

ಮೊಬೈಲ್‌ ಕಂಪೆನಿಗಳು ಗ್ರಾಹಕರ ಮಾಹಿತಿಯ ಜತೆಗೆ ಆಧಾರ್‌ ಸಂಖ್ಯೆಯನ್ನೂ ಡಾಟಾಬೇಸ್‌ನಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕು, ಇದರಿಂದ ಗ್ರಾಹಕನ ಎಲ್ಲ ಮಾಹಿತಿಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಲು ಸಾಧ್ಯವಾಗುತ್ತದೆ ಎಂದು ದೂರ ಸಂಪರ್ಕ ಇಲಾಖೆ ಹೇಳಿದೆ. [ಆನ್ ಲೈನ್ ನಲ್ಲಿ ಆಧಾರ್ ಮಾಹಿತಿ ಬದಲಾವಣೆ ಹೇಗೆ?]

ನೂತನ ಸಿಮ್ ಕಾರ್ಡ್ ಖರೀದಿ ಮಾಡುವಾಗ ಆಧಾರ್‌ ಸಂಖ್ಯೆಯನ್ನು ವಿಳಾಸದ ಪುರಾವೆಯೆಂದು ಪರಿಗಣಿಸುವ ಬಗ್ಗೆಯೂ ಚಿಂತನೆ ನಡೆಯುತ್ತಿದ್ದು, ಎರಡು ತಿಂಗಳಲ್ಲಿ ಈ ಕುರಿತು ಅಭಿಪ್ರಾಯ ತಿಳಿಸುವಂತೆ ಮೊಬೈಲ್‌ ಕಂಪೆನಿಗಳಿಗೆ ಸೂಚನೆ ನೀಡಲಾಗಿದೆ. [ಆಧಾರ್ ನೋಂದಣಿ ಮತ್ತಷ್ಟು ಸುಲಭ]

ಆಧಾರ್‌ಗೆ ಮೊಬೈಲ್ ನಂಬರ್ ಸಂಪರ್ಕಿಸುವುದರಿಂದ ಹೊಸ ಸಿಮ್ ಕಾರ್ಡ್ ಖರೀದಿ ಸಂದರ್ಭದಲ್ಲಿ ಉಪಯೋಗವಾಗಲಿದೆ. ವಿಳಾಸ ದೃಡೀಕರಣದ ಸಂದರ್ಭದಲ್ಲಿ ಮೊಬೈಲ್ ನಂಬರ್ ಪ್ರಮುಖ ಪುರಾವೆಯಾಗಲಿದ್ದು, ಬೇಕಾಬಿಟ್ಟಿ ಸಿಮ್ ಖರೀದಿಗೆ ಕಡಿವಾಣ ಬೀಳಲಿದೆ ಎಂದು ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಆರ್.ಎಸ್.ಶರ್ಮಾ ಕಳೆದ ವಾರ ಹೇಳಿದ್ದರು.

English summary
Department of Telecom (DoT) has asked all mobile operators to collect ‘Aadhaar’ number along with customer application form for issuing new SIM cards and store the unique identification number in their database.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X