LPG: ಗ್ಯಾಸ್ ಬುಕಿಂಗ್‌ ಮಾಡುವವರ ಗಮನಕ್ಕೆ; ಜೂನ್‌ನಿಂದ ಹೊಸ ನಿಯಮ ಜಾರಿ, ನಿಮ್ಮ ಸಿಲಿಂಡರ್ ಕನೆಕ್ಷನ್ ಕಟ್‌ ಆಗ್ಬೋದು

ದೇಶಾದ್ಯಂತ ಇರುವ ಕೋಟ್ಯಂತರ ಎಲ್‌ಪಿಜಿ ಗ್ರಾಹಕರಿಗೆ ಕೇಂದ್ರ ಸರ್ಕಾರವು ಜೂನ್ 2026ರಿಂದ ಅನ್ವಯವಾಗುವಂತೆ ಬಿಗ್ ಶಾಕ್ ನೀಡಿದೆ. ನೀವು ಇಂಡೇನ್, ಭಾರತ್ ಗ್ಯಾಸ್ ಅಥವಾ ಎಚ್‌ಪಿ ಗ್ಯಾಸ್ ಬಳಕೆದಾರರಾಗಿದ್ದರೆ, ಈ ಹೊಸ 5 ನಿಯಮಗಳನ್ನು ತಕ್ಷಣವೇ ತಿಳಿದುಕೊಳ್ಳುವುದು ಅನಿವಾರ್ಯ. ಇಲ್ಲದಿದ್ದರೆ ನಿಮ್ಮ ಗ್ಯಾಸ್ ಸಿಲಿಂಡರ್ ಬುಕಿಂಗ್ ರದ್ದಾಗುವ ಸಾಧ್ಯತೆಯಿದೆ. ಹಾಗಾದರೆ ಜೂನ್‌ನಿಂದ ಜಾರಿಗೆ ಬಂದಿರುವ ಆ ಪ್ರಮುಖ ಬದಲಾವಣೆಗಳು ಯಾವುವು? ಸಂಪೂರ್ಣ ವಿವರ ಇಲ್ಲಿದೆ.

ಕೇಂದ್ರ ತೈಲ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ದೇಶೀಯ ಅಡುಗೆ ಅನಿಲ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಮತ್ತು ದುರುಪಯೋಗವನ್ನು ತಡೆಯಲು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇಂಡೇನ್, ಭಾರತ್ ಗ್ಯಾಸ್ ಹಾಗೂ ಎಚ್‌ಪಿ ಗ್ಯಾಸ್ ಬಳಕೆದಾರರು ತಿಳಿದುಕೊಳ್ಳಬೇಕಾದ 5 ಪ್ರಮುಖ ಬದಲಾವಣೆಗಳು ಹೀಗಿವೆ.

LPG

'ಒಂದು ಮನೆಗೆ ಒಂದೇ ಕನೆಕ್ಷನ್' ನೀತಿ

ದೇಶದಲ್ಲಿ ಅಡುಗೆ ಅನಿಲದ ಕಪ್ಪು ಮಾರುಕಟ್ಟೆ ಮತ್ತು ಅಕ್ರಮ ದಾಸ್ತಾನನ್ನು ತಡೆಗಟ್ಟಲು ಸರ್ಕಾರವು 'ಒಂದು ಮನೆ, ಒಂದು ಗ್ಯಾಸ್ ಸಂಪರ್ಕ' ನಿಯಮವನ್ನು ಕಡ್ಡಾಯಗೊಳಿಸುತ್ತಿದೆ. ತೈಲ ಕಂಪನಿಗಳು (OMCs) ಒಂದೇ ವಿಳಾಸದಲ್ಲಿ ಎಲ್‌ಪಿಜಿ ಸಿಲಿಂಡರ್ ಮತ್ತು ಪೈಪ್ಡ್ ಗ್ಯಾಸ್ (PNG) ಎರಡನ್ನೂ ಹೊಂದಿರುವ ಗ್ರಾಹಕರನ್ನು ಪತ್ತೆಹಚ್ಚುತ್ತಿವೆ. ಪೈಪ್ ಗ್ಯಾಸ್ ಸೌಲಭ್ಯವಿರುವ ಪ್ರದೇಶಗಳಲ್ಲಿನ ಜನರು ಸಂಪೂರ್ಣವಾಗಿ ಪಿಎನ್‌ಜಿಗೆ ಬದಲಾಗುವಂತೆ ಪ್ರೇರೇಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಪಿಎನ್‌ಜಿ ಬಳಕೆದಾರರಿಗೆ ಸಿಲಿಂಡರ್ ಬುಕಿಂಗ್ ರದ್ದು

ಯಾವ ಮನೆಗಳಲ್ಲಿ ಈಗಾಗಲೇ ಸಕ್ರಿಯ ಪಿಎನ್‌ಜಿ ಸಂಪರ್ಕವಿದೆಯೋ, ಅಂತಹ ಗ್ರಾಹಕರು ಇನ್ಮುಂದೆ ಹೊಸ ಎಲ್‌ಪಿಜಿ ಸಂಪರ್ಕ ಪಡೆಯಲು ಅಥವಾ ಹಳೆಯ ಸಿಲಿಂಡರ್‌ಗಳನ್ನು ರೀಫಿಲ್ ಬುಕ್ ಮಾಡಲು ಅರ್ಹರಾಗಿರುವುದಿಲ್ಲ. ಇದಕ್ಕಾಗಿ ತೈಲ ಕಂಪನಿಗಳು ಮತ್ತು ಸಿಟಿ ಗ್ಯಾಸ್ ವಿತರಕರು ತಮ್ಮ ಗ್ರಾಹಕರ ದತ್ತಾಂಶವನ್ನು ಒಂದಕ್ಕೊಂದು ಲಿಂಕ್ ಮಾಡಿದ್ದಾರೆ. ಪೈಪ್ಡ್ ಗ್ಯಾಸ್ ಲಭ್ಯವಿರುವ ಕಡೆ ಸಿಲಿಂಡರ್ ಬಳಕೆಯನ್ನು ಕಡಿಮೆ ಮಾಡಿ, ಗ್ಯಾಸ್ ಸೌಲಭ್ಯವಿಲ್ಲದ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಸಿಲಿಂಡರ್ ತಲುಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.

30 ದಿನಗಳ ಒಳಗಾಗಿ ಎಲ್‌ಪಿಜಿ ಸರೆಂಡರ್ ಕಡ್ಡಾಯ

'ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ ತಿದ್ದುಪಡಿ ಕಾಯ್ದೆ 2026'ರ ಅನ್ವಯ, ನಿಮ್ಮ ಮನೆಗೆ ಪಿಎನ್‌ಜಿ ಗ್ಯಾಸ್ ಸಂಪರ್ಕ ಕಲ್ಪಿಸಿದ 30 ದಿನಗಳ ಒಳಗಾಗಿ ನೀವು ಹೊಂದಿರುವ ಹಳೆಯ ಎಲ್‌ಪಿಜಿ ಸಂಪರ್ಕವನ್ನು ಅಧಿಕೃತವಾಗಿ ರದ್ದುಗೊಳಿಸಬೇಕು. ಒಂದೇ ಸೂರಿನಡಿ ಎರಡು ನಿಯಮಬಾಹಿರ ಸಂಪರ್ಕಗಳು ಇರುವುದನ್ನು ತಡೆಯಲು ಈ ಗಡುವನ್ನು ವಿಧಿಸಲಾಗಿದೆ.

ನಿರಂತರ ಧನ ನಷ್ಟ, ಸಾಲ ಬಾಧೆಯಿಂದ ಮುಕ್ತಿ ಬೇಕೇ? ಭಾರತದ ಈ 7 ಶಕ್ತಿಶಾಲಿ ದೇವಸ್ಥಾನಗಳಿಗೆ ಒಮ್ಮೆ ಭೇಟಿ ನೀಡಿ
ನಿರಂತರ ಧನ ನಷ್ಟ, ಸಾಲ ಬಾಧೆಯಿಂದ ಮುಕ್ತಿ ಬೇಕೇ? ಭಾರತದ ಈ 7 ಶಕ್ತಿಶಾಲಿ ದೇವಸ್ಥಾನಗಳಿಗೆ ಒಮ್ಮೆ ಭೇಟಿ ನೀಡಿ

ಭವಿಷ್ಯದ ಬಳಕೆಗಾಗಿ 'ಟ್ರಾನ್ಸ್‌ಫರ್ ವೋಚರ್' ಸೌಲಭ್ಯ

ಪಿಎನ್‌ಜಿ ಸಂಪರ್ಕ ಪಡೆದ ನಂತರ ಎಲ್‌ಪಿಜಿ ಸರೆಂಡರ್ ಮಾಡುವ ಗ್ರಾಹಕರಿಗೆ ಸರ್ಕಾರ ಒಂದು ವಿಶೇಷ ವಿನಾಯಿತಿ ನೀಡಿದೆ. ಗ್ಯಾಸ್ ಸರೆಂಡರ್ ಮಾಡುವಾಗ ಕಂಪನಿಯು ನಿಮಗೆ 'ಟ್ರಾನ್ಸ್‌ಫರ್ ವೋಚರ್' ನೀಡುತ್ತದೆ. ಭವಿಷ್ಯದಲ್ಲಿ ನೀವು ಪಿಎನ್‌ಜಿ ಸೌಲಭ್ಯವಿಲ್ಲದ ಬೇರೆ ಊರು ಅಥವಾ ಮನೆಗೆ ವರ್ಗಾವಣೆಯಾದರೆ, ಅದೇ ವೋಚರ್ ಬಳಸಿ ಯಾವುದೇ ಹೊಸ ಶುಲ್ಕವಿಲ್ಲದೆ ತಕ್ಷಣವೇ ಎಲ್‌ಪಿಜಿ ಸಂಪರ್ಕವನ್ನು ಮರುಸ್ಥಾಪಿಸಿಕೊಳ್ಳಬಹುದು. ಇದು ಬಾಡಿಗೆದಾರರಿಗೆ ಮತ್ತು ವರ್ಗಾವಣೆಗೊಳ್ಳುವ ನೌಕರರಿಗೆ ಸಹಕಾರಿಯಾಗಿದೆ.

ಬುಕಿಂಗ್ ಅವಧಿಯ ನಿಯಮದಲ್ಲಿ ಬದಲಾವಣೆ ಇಲ್ಲ

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ "ಸಿಲಿಂಡರ್ ಬುಕಿಂಗ್ ಮಾಡುವ ದಿನಗಳ ಅಂತರವನ್ನು ಬದಲಾಯಿಸಲಾಗಿದೆ" ಎಂಬ ವದಂತಿಗಳು ಹರಡಿದ್ದವು. ಆದರೆ ಕೇಂದ್ರ ಸರ್ಕಾರವು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಬುಕಿಂಗ್ ನಿಯಮ ಅಥವಾ ಕಾಲಾವಕಾಶದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ತಿಳಿಸಿದೆ. ಹಳೆಯ ನಿಯಮಗಳ ಪ್ರಕಾರವೇ ಗ್ರಾಹಕರು ಎಂದಿನಂತೆ ಸಿಲಿಂಡರ್ ಬುಕ್ ಮಾಡಬಹುದು. ವದಂತಿಗಳನ್ನು ನಂಬದಂತೆ ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ.

ನೀವು ಈಗಾಗಲೇ ಪಿಎನ್‌ಜಿ ಸಂಪರ್ಕ ಹೊಂದಿದ್ದರೆ, ತಕ್ಷಣವೇ ನಿಮ್ಮ ಎಲ್‌ಪಿಜಿ ಡಿಸ್ಟ್ರಿಬ್ಯೂಟರ್ ಸಂಪರ್ಕಿಸಿ ಸ್ಟೇಟಸ್ ಪರಿಶೀಲಿಸಿಕೊಳ್ಳಿ. ಕೇವಲ ಎಲ್‌ಪಿಜಿ ಸಿಲಿಂಡರ್ ಬಳಸುವ ಸಾಮಾನ್ಯ ಗ್ರಾಹಕರಿಗೆ ಈ ನಿಯಮಗಳಿಂದ ಯಾವುದೇ ತೊಂದರೆಯಾಗುವುದಿಲ್ಲ, ಅವರು ಎಂದಿನಂತೆ ತಮ್ಮ ಬುಕಿಂಗ್ ಮುಂದುವರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+