RBI New Notes: ಆರ್‌ಬಿಐನಿಂದ ನೋಟುಗಳ ಬಗ್ಗೆ ಹೊಸ ಅಪ್ಡೇಟ್ಸ್!
ಭಾರತೀಯ ರಿಸರ್ವ್ ಬ್ಯಾಂಕ್ ಭಾರತೀಯರಿಗೆ ಭರ್ಜರಿ ಗುಡ್‌ನ್ಯೂಸ್‌ವೊಂದನ್ನು ಕೊಟ್ಟಿದೆ. ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ ಹೊಸ ಹೊಸ ನೋಟುಗಳು ಬರುತ್ತಿವೆ. ನೋಟುಗಳ ಬಣ್ಣ ಬದಲಾಗುವುದು ಸೇರಿದಂತೆ ಹಲವು ವಿಶೇಷತೆಗಳನ್ನು ತರಲಾಗುತ್ತಿದೆ. ಎರಡು ಸಾವಿರ ರೂಪಾಯಿ ನೋಟಿ ಪರಿಚಯಿಸಿದ್ದು. ಗುಲಾಬಿ ಬಣ್ಣದ ನೋಟು ಪರಿಚಯಿಸಿ ಮತ್ತೆ ಅವುಗಳನ್ನು ಹಿಂಪಡೆಯಲಾಗಿತ್ತು. ಇದೀಗ ಹೊಸ ನೋಟುಗಳನ್ನು ಪರಿಸಚಯಿಸುವುದಕ್ಕೆ ಆರ್‌ಬಿಐ ಮುಂದಾಗಿದೆ. ಯಾವ ಮಾದರಿಯ ಹೊಸ ನೋಟು ಬರಲಿದೆ ಹಾಗೂ ಈ ವಿಚಾರವಾಗಿ ಆರ್‌ಬಿಐ ಹೇಳಿರುವುದೇನು ಎನ್ನುವ ವಿವರ ಇಲ್ಲಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ಹೌದು ಹೊಸ ನೋಟುಗಳ ಬಿಡುಗಡೆಗೆ ಸಂಬಂಧಿಸಿದಂತೆ ಗುಡ್‌ನ್ಯೂಸ್ ಕೊಡಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಹೊಚ್ಚ ಹೊಸ ನೋಟುಗಳು ಮಾರುಕಟ್ಟೆಗೆ ಬಿಡುಗಡೆ ಆಗಲಿವೆ. 10 ರೂಪಾಯಿ ಹಾಗೂ 500 ರೂಪಾಯಿ ಮುಖಬೆಲೆ ಇರುವ ಬ್ಯಾಂಕ್ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಆರ್ಬಿಐ ಹೇಳಿದೆ. ಹೊಸ ನೋಟುಗಳು ಇನ್ನು ಕೆಲವೇ ದಿನಗಳಲ್ಲಿ ಬಳಕೆಗೆ / ಮಾರುಕಟ್ಟೆಗೆ ಬರಲಿದೆ. ಇನ್ನು ಈಗ ಇರುವ ಮಹಾತ್ಮ ಗಾಂಧಿ ಸರಣಿ ನೋಟುಗಳಿಗಿಂತಲೂ ಈಗ ಬರಲಿರುವ ನೋಟುಗಳು ಬೇರೆ ರೀತಿ ಇರುವುದಿಲ್ಲ. ಆದರೆ ಕೆಲವೊಂದು ನಿರ್ದಿಷ್ಟ ಬದಲಾವಣೆಗಳು ಆಗಲಿವೆ. ವಿನ್ಯಾಸ ಸಹ ಅದೇ ಮಾದರಿಯಲ್ಲಿ ಮುಂದುವರಿಯಲಿದೆ ಎಂದು ಹೇಳಲಾಗಿತ್ತು.

ಗವರ್ನರ್ ಸಹಿ ಬದಲಾವಣೆ: ಇನ್ನು ಹೊಸ ನೋಟುಗಳಲ್ಲಿ ಆರ್‌ಬಿಐ ಗವರ್ನರ್ ಸಹಿ ಬದಲಾವಣೆ ಆಗಲಿದೆ ಎಂದು ಹೇಳಲಾಗಿದೆ.
ಸಂಜಯ್ ಮಲ್ಹೋತ್ರಾ ಅವರು ಜನವರಿಯಲ್ಲಿ ನೂತನ ಆರ್ಬಿಐಗೆ ಗವರ್ನರ್ ಆಗಿ ನೇಮಕವಾಗಿರುವ ಹಿನ್ನೆಲೆಯಲ್ಲಿ ಅಥವಾ ಹೊಸದಾಗಿ ಬ್ಯಾಂಕ್ ನೋಟುಗಳನ್ನು ಮುದ್ರಣ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಹಿ ಬದಲಾಗಲಿದೆ. ಹೊಸದಾದ ನೋಟುಗಳಾಗಿರುವುದರಿಂದ ಗವರ್ನರ್ ಅವರ ಸಹಿ ಸಹ ಬದಲಾಗಿ ಪ್ರಕಟವಾಗಲಿದೆ.
ಮಾರುಕಟ್ಟೆಗೆ ಬರಲಿದೆ ಹೊಸ ಗರಿ ಗರಿ ನೋಟು!
ಇನ್ನು ಮಾರುಕಟ್ಟೆಗೆ ಹೊಸ ಹಾಗೂ ಗರಿ ಗರಿ ನೋಟುಗಳು ಬರಲಿವೆ. ಇದೀಗ 10 ಹಾಗೂ 500 ರೂಪಾಯಿ ಮುಖಬೆಲೆಯ ನೋಟುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಹೇಳಲಾಗಿದೆ. ಈಚೆಗಷ್ಟೇ ಆರ್ಬಿಐ 100 ರೂಪಾಯಿ ಹಾಗೂ 200 ರೂಪಾಯಿ ಮುಖಬೆಲೆಯ ಬ್ಯಾಂಕ್ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಪ್ರಕಟಿಸಿತ್ತು.
ಇದೇ ಮೊದಲೇನು ಅಲ್ಲ: ಇನ್ನು ಭಾರತದಲ್ಲಿ ನೋಟುಗಳು ಬದಲಾವಣೆ ಆಗುವುದು. ಹೊಸ ಮಾದರಿಯ ಹಾಗೂ ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡುವುದು ಇದೇ ಮೊದಲೇನು ಅಲ್ಲ. ಈ ಹಿಂದೆ 500 ಹಾಗೂ 1000 ರೂಪಾಯಿ ನೋಟುಗಳು ಇದ್ದವು. ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ರದ್ದು ಮಾಡಿತ್ತು. 2000 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಪರಿಚಯಿಸಲಾಗಿತ್ತು. ಆದರೆ, ಕೆಲವು ತಿಂಗಳುಗಳ ನಂತರ ಆ ನೋಟುಗಳನ್ನು ಹಿಂಪಡೆಯಲಾಗಿತ್ತು. ಇದೀಗ ಹೊಸ ವಿನ್ಯಾಸದ ನೋಟುಗಳು ಮಾರುಕಟ್ಟೆಗೆ ಬರಲಿವೆ.












Click it and Unblock the Notifications