ರಾಹುಲ್‌ಗೆ ಕಪ್ಪು ಬಾವುಟ, ದೆಹಲಿಯಲ್ಲಿ ಕಾಂಗ್ರೆಸ್ VS ಬಿಜೆಪಿ
ನವದೆಹಲಿ, ಫೆಬ್ರವರಿ, 13: ನವದೆಹಲಿಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಸಂಸತ್ ದಾಳಿ ರೂವಾರಿ, ನೇಣಿಗೇರಿದ ಉಗ್ರ ಅಫ್ಜಲ್ ಗುರು ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದ ವಿವಾದ ಈಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಗುದ್ದಾಟಕ್ಕೆ ವೇದಿಕೆಯಾಗಿ ಪರಿಣಮಿಸಿದೆ.
ದೇಶದ್ರೋಹದ ಘೋಷಣೆ ಕೂಗಿದ ಆರೋಪದಲ್ಲಿ ಜವಾಹರಲಾಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನಯ್ನಾ ಕುಮಾರ್ ನನ್ನು ಬಂಧಿಸಿರುವುದು ತಪ್ಪು, ದೇಶದ್ರೋಹದ ಘೋಷಣೆ ಕೂಗಿದವರು ಎಬಿವಿಪಿಯವರು ಎಂದು ವಿದ್ಯಾರ್ಥಿಗಳ ಗುಂಪು ಆರೋಪಿಸಿ ಪ್ರತಿಭಟನೆ ಮುಂದುವರಿಸಿದೆ.[ಉಗ್ರಗಾಮಿ ಪರ ಘೋಷಣೆ ಕೂಗಿದವರ ಬಂಧನ]

ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಗಬಲ ನೀಡಲು ತೆರಳಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಎಬಿವಿಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡಿ ಗೋ ಬ್ಯಾಕ್ ಎಂದು ಘೋಷಣೆ ಕೂಗಿದರು.[ದೆಹಲಿ ಚಳಿ ದೂರಮಾಡಿದ ಪ್ರತಿಭಟನೆ ಕಾವು]
ರಾಹುಲ್ ಗಾಂಧಿ ಅವರ ವಾಹನಗಳ ಸಾಲು ಜೆಎನ್‌ಯು ಆವರಣ ಪ್ರವೇಶಿಸುತ್ತಿದ್ದಂತೆಯೇ ಎಬಿವಿಪಿ ಸಂಘಟನೆಯ ವಿದ್ಯಾರ್ಥಿಗಳು ರಾಹುಲ್ ಪ್ರವೇಶಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ನಿಜ ಅಪರಾಧಿಗಳ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಒಟ್ಟಿನಲ್ಲಿ ಅಫ್ಜಲ್ ಗುರು ಹೆಸರಿನಲ್ಲಿ ಆರಂಭವಾದ ಗೊಂದಲ ಮತ್ತು ಗಲಾಟೆ ರಾಷ್ಟ್ರೀಯ ಮಟ್ಟದ ಸುದ್ದಿಯಾಗಿ ಪರಿವರ್ತನೆ ಆಗುತ್ತಿದೆ. ಎಡ ಪಕ್ಷಗಳು ಮತ್ತು ಕಾಂಗ್ರೆಸ್ ಒಂದೆಡೆ ತಮ್ಮ ನಿಲುವು ಪ್ರಕಟಿಸಿ ಬಿಜೆಪಿ ಮತ್ತು ಎಬಿವಿಪಿ ಮೇಲೆ ಆರೋಪಗಳನ್ನು ಮಾಡುತ್ತಿವೆ.











Click it and Unblock the Notifications