Aravind Kejriwal Home Renovation: ಬಿಜೆಪಿ ಆರೋಪ ಖಂಡಿಸಿದ ಎಎಪಿ ವಿಡಿಯೋ ಪೋಸ್ಟ್ ಮಾಡಿ ತಿರುಗೇಟು

ನವದೆಹಲಿ, ಏಪ್ರಿಲ್ 26: ಆಮ್‌ ಆದ್ಮಿ ಪಕ್ಷದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ನವೀಕರಣ ಕುರಿತು ಬಿಜೆಪಿ ಮಾಡಿದ್ದ ಆರೋಪಕ್ಕೆ ಇದೀಗ ಎಎಪಿ ಒಂದಷ್ಟು ವಿಡಿಯೋಗಳ ಮೂಲಕ ತಿರುಗೇಟು ನೀಡಿದೆ. ಮನೆ ನವೀಕರಣ ವಿಚಾರದ ಸದ್ಯ ಹೆಚ್ಚು ಚರ್ಚೆಯಾಗುತ್ತಿದೆ.

ದೆಹಲಿ ಆಡಳಿತಾತ್ಮಕ ಪಕ್ಷವಾದ ಎಎಪಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ನಿವಾಸದ ನವೀಕರಣಕ್ಕಾಗಿ ಒಟ್ಟು ₹45 ಕೋಟಿಗಿಂತಲೂ ಅಧಿಕ ಹಣ ವ್ಯಯಿಸಿದ್ದಾರೆ. ಅವರದ್ದು ಬೂಟಾಟಿಕೆ ಎಂದು ಕಳೆದ ಬುಧವಾರ ಬಿಜೆಪಿ ಆರೋಪಿಸಿತ್ತು. ಬಿಜೆಪಿಯ ಈ ಹೇಳಿಕೆಯನ್ನು ಖಂಡಿಸಿರುವ ಎಎಪಿ ಪಕ್ಷವು ಸಿಎಂ ಅರವಿಂದ ಕೇಜ್ರಿವಾಲರ ಶಿಥಿಲಗೊಂಡ ಮನೆಯ ಮೇಲ್ಛಾವಣಿ, ಮನೆ ಇನ್ನಿತರ ಭಾಗದ ವೀಡಿಯೊ ಮಾಡಿ ಬಿಜೆಪಿಗೆ ತಿರುಗೇಟು ನೀಡಿದೆ.

New Delhi CM Aravind Kejriwal spent 45 Cr for Residence Renovation BJP allegation , AAP condemn

ಆರಂಭದಲ್ಲಿ ಕೇಜ್ರಿವಾಲ್ ಅವರು ಎಎಪಿ ಮೂಲಕ ರಾಜಕೀಯ ಪ್ರವೇಶದ ವೇಳೆ ಪ್ರಾಮಾಣಿಕತೆ ಮತ್ತು ಸರಳತೆಯ ಪಾಠ ಂಆಡಿದ್ದಾರೆ. ಅವರು ನೀಡಿದ ಇದೀಗ ಭರವಸೆಯನ್ನು ದ್ರೋಹ ಮಾಡಿದ್ದಾರೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು. ಅಂದು ಕೇಜ್ರಿವಾಲ್‌ನನ್ನು ಮಹಾರಾಜ ಇಲ್ಲವೇ ರಾಜ ಎಂದು ಕರೆದಿದ್ದ ಅವರು ಸದ್ಯ ಅವರನ್ನು ಐಷಾರಾಮಿ ಆಸೆ ಹೊಂದಿದವರು ಎಂದು ಕರೆದಿದ್ದಾರೆ.

ಮಾಧ್ಯಮಗಳಿಗೆ ಲಂಚ ಆರೋಪ

ಈ ಮನೆ ನವೀಕರಣ, ಐಶಾರಾಮಿ ಜೀವನದ ಆಸೆ ವಿಚಾರ ಹತ್ತಿಕ್ಕಲು ಕೇಜ್ರಿವಾಲ್ ಸುದ್ದಿ ಮಾಧ್ಯಮ ಸಂಸ್ಥೆಗಳಿಗೆ ₹20 ರಿಂದ 50 ಕೋಟಿ ನೀಡಿದ್ದರು. ಹೀಗಾಗಿ ಮಾಧ್ಯಮಗಳು ಇಂತಹ ಸುದ್ದಿ ಬಿತ್ತರಿಸದೇ ನಿರ್ಲಕ್ಷ್ಯ ವಹಿಸಿವೆ ಎಂದು ಪಾತ್ರಾಅವರು ನಿರಾಧಾರ ಆರೋಪ ಮಾಡಿದರು.

ಅಷ್ಟೇ ಸ್ಲಲದೇ ಸಿಎಂ ಕೇಜ್ರಿವಾಲರ ಮನೆಗೆ ವಿಯೆಟ್ನಾಂನಿಂದ ಆಮದು ಮಾಡಿಕೊಂಡ ದುಬಾರಿ ಅಮೃತಶಿಲೆ, ಪೂರ್ವ-ನಿರ್ಮಿತ ಮರದ ಗೋಡೆಗಳು ಮತ್ತು ತಲಾ ಲಕ್ಷ ರೂಪಾಯಿ ವೆಚ್ಚದ ಪರದೆ ಅಳವಡಿಸಲಾಗಿದೆ. ಒಂದು ಪರದೆಗೆ ಬರೋಬ್ಬರಿ ₹7.94 ಲಕ್ಷ ರೂ. ಅಧಿಕ ಬೆಲೆ ಇದೆ ಎಂದು ಅವರು ಕೆಲವು ದಾಖಲೆಗಳನ್ನು ಪ್ರಸ್ತುತಪಡಿಸಿದರು.

New Delhi CM Aravind Kejriwal spent 45 Cr for Residence Renovation BJP allegation , AAP condemn

ನಾಚಿಕೆಯಿಲ್ಲದ ರಾಜನ ಕಥೆ: ಪಾತ್ರ

ಕೇಜ್ರಿವಾಲ್ ಅವರು ಈ ಹಿಂದೆ ಅದ್ಧೂರಿ ಖರ್ಚು ವೆಚ್ಚವನ್ನು ವಿರೋಧಿಸುತ್ತಿದ್ದರು. ರಾಜಕಾರಣದಲ್ಲಿರುವವರು ಆಡಂಬರದ ನಿವಾಸಗಳಲ್ಲಿ ವಾಸಿಸುತ್ತಿದ್ದಾರೆ, ಸಾರ್ವಜನಿಕ ವೆಚ್ಚದಲ್ಲಿ ಐಶಾರಾಮಿಯಾಗಿ ಬದುಕನ್ನು ಆನಂದಿಸುತ್ತಾರೆ ಎಂದು ಟೀಕಿಸಿದ್ದರು. ನಮ್ಮ ನಾಲ್ಕು ಕೋಣೆಯ ಮನೆ ಇದ್ದು, ಅದರಲ್ಲಿ ತೃಪ್ತನಾಗಿದ್ದೇನೆ ಎಂದು ಹೇಳಿಕೊಂಡಿದ್ದರು ಎಂದರು.

ಪ್ರಧಾನಿ ನರೇಂದ್ರ ಮೋದಿಯವರನ್ನು ಶೈಕ್ಷಣಿಕ ಅರ್ಹತೆ ಕುರಿತು ಎಎಪಿ ನಾಯಕರೊಬ್ಬರು ಪ್ರಶ್ನಿಸಿದ್ದಾರೆ. ಹಾಗಾಗದೇ ಮನೆ ನವೀಕರಣ ಕುರಿತು ಎದ್ದಿರುವ ಎಲ್ಲ ಪ್ರಶ್ನೆಗಳಿಗೆ ಕೇಜ್ರಿವಾಲ್ ಅವರು ಉತ್ತರ ನೀಡುತ್ತಾರೆಯೆ ಎಂದು ಅವರು ಪ್ರಶ್ನಿಸಿದರು.

ಆರೋಪಗಳಿಗೆ ತಕ್ಷಣ ಪ್ರತಿಕ್ರಿಯಿಸದೇ ನವೀಕರಣಗೊಂಡ ಮನೆ ಸ್ಥಿತಿ ಮರೆ ಮಾಚಿ, ಹಳೆಯ ದುಸ್ಥಿತಿಯಲ್ಲಿದ್ದ ನಿವಾಸ ಫೋಟೊ, ವಿಡಿಯೋಗಳನ್ನು ಸಾಮಾಜಿಕ್ಯ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಉತ್ತಮರೆನಿಸಿಕೊಳ್ಳುವ ಯತ್ನ ಮಾಡಲಾಗುತ್ತಿದ ಎಂದು ಅವರು ಗುಡುಗಿದರು.

ನಿಮ್ಮ ಬಡ ಮನೆ ಸಿಎಂಗೆ ನೀಡಿ: ಕಕ್ಕರ್

ಇನ್ನೂ ಬಿಜೆಪಿ ವಿರುದ್ಧ ಕಿಡಿ ಕಾರಿದ ಎಎಪಿ ವಕ್ತಾರೆ ಪ್ರಿಯಾಂಕಾ ಕಕ್ಕರ್ ಅವರು, ಪ್ರಧಾನಿ ಮೋದಿ ಸ್ನೇಹಿತ ಡೊನಾಲ್ಡ್ ಟ್ರಂಪ್ ಅವರ 3 ಗಂಟೆಗಳ ಭೇಟಿಗೆ 80 ಕೋಟಿ ರೂ. ಖರ್ಚು ಆಗಿದೆ. ಈ ಬಗ್ಗೆ ಯಾವುದೇ ಮಾಧ್ಯಮಗಳು ಚರ್ಚೆ ಮಾಡುವುದಿಲ್ಲ ಎಂದು ಟ್ವೀಟ್ ಮಾಡಿದ್ದರೆ.

ದೆಹಲಿ ಸಿಎಂ ಕೇಜ್ರಿವಾಲ್ ಅವರ ಮನೆ ಒಂದು ಎಕರೆಗಿಂತ ಚಿಕ್ಕದಾದ ಬಂಗಲೆ 1942ರಲ್ಲಿ ನಿರ್ಮಾಣವಾಗಿದೆ. ಅದರ ಛಾವಣಿ ಮೂರು ಬಾರಿ ಬಿದ್ದಿದೆ. ಒಮ್ಮೆ ಅವರ ಪೋಷಕರ ಕೋಣೆಯ ಛಾವಣಿಯು ಕೆಳಗೆ ಬಿದ್ದಿತು ಮತ್ತು ಒಮ್ಮೆ ಅವರು ಜನತಾ ದರ್ಬಾರ್ ನಡೆಸಿದ್ದರು. ಆದರೆ ಬಿಜೆಪಿಯ ಮಾಧ್ಯಮಗಳು ಅರವಿಂದ್ ಕೇಜ್ರಿವಾಲ್ ಅವರು 45 ಕೋಟಿ ಮೌಲ್ಯದ ಅರಮನೆ ನಿರ್ಮಿಸಿದ್ದಾರೆ ಎಂದು ಹೇಳುತ್ತಿವೆ. ಈ ಅರಮನೆಯನ್ನೂ ನೀವೆ ತೆಗೆದುಕೊಳ್ಳಿ, ನಿಮ್ಮ ಬಡ ಮನೆಯಲ್ಲಿ ಕೇಜ್ರಿವಾಲ್ ಅವರಿಗೆ ನೀಡಿ ಎಂದು ಅವರು ತಿರುಗೇಟು ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+