ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಮ್ಸ್ 5 ಸರ್ವರ್ ಹ್ಯಾಕ್ ಹಿಂದೆ ಚೀನಾ ಕೈವಾಡದ ಶಂಕೆ

|
Google Oneindia Kannada News

ನವದೆಹಲಿ, ಡಿಸೆಂಬರ್ 02: ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಮೇಲೆ ನಡೆದ ಸೈಬರ್ ದಾಳಿಯು ಲಕ್ಷಾಂತರ ರೋಗಿಗಳ ವೈಯಕ್ತಿಕ ದತ್ತಾಂಶಗಳನ್ನು ಕದ್ದುಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಚೀನಾದ ಹ್ಯಾಕರ್‌ಗಳು ನಡೆಸಿದ ಶಂಕಿತ ಸೈಬರ್ ದಾಳಿಯಿಂದ ಒಟ್ಟು ಐದು ಮುಖ್ಯ ಸರ್ವರ್‌ಗಳನ್ನು ಗುರಿಯಾಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕದ್ದ ಡೇಟಾವನ್ನು ಇಂಟರ್ನೆಟ್‌ನ ಗುಪ್ತ ಭಾಗವಾದ ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡಲಾಗಿದೆ.

ದೆಹಲಿಯ ಏಮ್ಸ್ ಇ-ಹಾಸ್ಪಿಟಲ್ ಡೇಟಾ ಸರ್ವರ್‌ಗಳಲ್ಲಿ ಮರುಸ್ಥಾಪನೆದೆಹಲಿಯ ಏಮ್ಸ್ ಇ-ಹಾಸ್ಪಿಟಲ್ ಡೇಟಾ ಸರ್ವರ್‌ಗಳಲ್ಲಿ ಮರುಸ್ಥಾಪನೆ

ಡಾರ್ಕ್ ವೆಬ್‌ನಲ್ಲಿ ಕಳುವಾದ ಏಮ್ಸ್ ಡೇಟಾಕ್ಕಾಗಿ 1,600ಕ್ಕೂ ಹೆಚ್ಚು ಜನರು ಹುಡುಕಾಟ ನಡೆಸಿರುವುದನ್ನು ಅಂಕಿ-ಅಂಶಗಳು ತೋರಿಸುತ್ತವೆ. ಕದ್ದ ಡೇಟಾದಲ್ಲಿ ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳು ಸೇರಿದಂತೆ ವಿವಿಐಪಿಗಳ ವಿವರಗಳಿವೆ.

ಏಮ್ಸ್ ಐದು ಸರ್ವರ್ ಹ್ಯಾಕ್

ಏಮ್ಸ್ ಐದು ಸರ್ವರ್ ಹ್ಯಾಕ್

ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಸಂಬಂಧಿಸಿದ ಒಟ್ಟು ಐದು ಸರ್ವರ್ ಹ್ಯಾಕ್ ಆಗಿವೆ ಎಂದು ಐಎಫ್‌ಎಸ್‌ಒ ಮೂಲಗಳು ಬಹಿರಂಗಪಡಿಸಿವೆ. ಎಫ್‌ಎಸ್‌ಎಲ್ ತಂಡವು ಈಗ ಡೇಟಾ ಸೋರಿಕೆಯನ್ನು ಪರಿಶೀಲಿಸುತ್ತಿದೆ. ಆದರೆ, ಯಾವುದೇ ಮಾಹಿತಿ ಕಳೆದು ಹೋಗಿಲ್ಲ ಎಂದು ಐಎಫ್‌ಎಸ್‌ಒ ಅಧಿಕಾರಿಗಳು ಹೇಳುತ್ತಿದ್ದಾರೆ. ಐಎಫ್‌ಎಸ್‌ಒನಿಂದ ಹ್ಯಾಕಿಂಗ್ ಪ್ರಕರಣವನ್ನು ನಿರ್ವಹಿಸುತ್ತಿರುವುದು ಇದೇ ಮೊದಲಾಗಿದೆ. ಹ್ಯಾಕರ್‌ಗಳ ಮುಖ್ಯ ಉದ್ದೇಶ ಹಣ ಸುಲಿಗೆಯಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

200 ಕೋಟಿ ರೂಪಾಯಿ ಕ್ರಿಪ್ಟೋಕರೆನ್ಸಿಗೆ ಡಿಮ್ಯಾಂಡ್

200 ಕೋಟಿ ರೂಪಾಯಿ ಕ್ರಿಪ್ಟೋಕರೆನ್ಸಿಗೆ ಡಿಮ್ಯಾಂಡ್

ಏಮ್ಸ್ ಅಂದಾಜು 200 ಕೋಟಿ ರೂಪಾಯಿ ಕ್ರಿಪ್ಟೋಕರೆನ್ಸಿಗೆ ಹ್ಯಾಕರ್‌ಗಳು ಬೇಡಿಕೆ ಇಟ್ಟಿದ್ದಾರೆ. ಕಳೆದ ಬುಧವಾರ ಬೆಳಗ್ಗೆ ಪತ್ತೆಯಾದ ಉಲ್ಲಂಘನೆಯಿಂದಾಗಿ ಸುಮಾರು 3-4 ಕೋಟಿ ರೋಗಿಗಳ ಮಾಹಿತಿಯು ರಾಜಿಯಾಗಿರಬಹುದು ಎಂಬ ಆತಂಕ ವ್ಯಕ್ತವಾಗಿದೆ. ತುರ್ತು ಪರಿಸ್ಥಿತಿಯಲ್ಲಿ ರೋಗಿಗಳ ಆರೈಕೆ ಸೇವೆಗಳು, ಹೊರರೋಗಿಗಳು, ಒಳರೋಗಿಗಳು ಮತ್ತು ಪ್ರಯೋಗಾಲಯ ವಿಭಾಗಗಳು ಸರ್ವರ್‌ಗಳು ಡೌನ್ ಆಗಿರುವುದರಿಂದ ಎಲ್ಲವನ್ನೂ ಮ್ಯಾನುವಲ್ ಆಗಿ ನಿರ್ವಹಿಸಲಾಗುತ್ತಿದೆ.

ದೆಹಲಿ ಏಮ್ಸ್ ಸರ್ವರ್ ಮೇಲೆ ಸೈಬರ್ ಅಟ್ಯಾಕ್

ದೆಹಲಿ ಏಮ್ಸ್ ಸರ್ವರ್ ಮೇಲೆ ಸೈಬರ್ ಅಟ್ಯಾಕ್

ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(ಏಮ್ಸ್) ರಾಮ್ಸಮ್ವೇರ್ ದಾಳಿಗೆ ಒಳಗಾಗಿರಬಹುದು ಎಂದು ಆಸ್ಪತ್ರೆಯು ಹೇಳಿತ್ತು. ಈ ಸಂಬಂದ ಗುರುವಾರ ಬೆಳಗ್ಗೆ 7ರಿಂದಲೇ ಸರ್ವರ್‌ಗಳು ಕೆಟ್ಟು ನಿಂತಿದ್ದರಿಂದ ಆಸ್ಪತ್ರೆಯ ಎಲ್ಲ ವಿಭಾಗಗಳನ್ನು ಬೇರೆ ವಿಧಾನದಲ್ಲಿ ಕಾರ್ಯನಿರ್ವಹಿಸುವಂತಾಗಿತ್ತು. ಏಮ್ಸ್ ಆಸ್ಪತ್ರೆಯು ಹೇಳಿಕೆಯಲ್ಲಿ, ಸಿಸ್ಟಮ್ ಅನ್ನು ಮರುಸ್ಥಾಪಿಸಲು ಕೆಲಸ ಮಾಡುತ್ತಿರುವ ನ್ಯಾಷನಲ್ ಇನ್ಫೋಮ್ಯಾಟಿಕ್ಸ್ ಸೆಂಟರ್ "ಇದು ರಾಮ್ಸಮ್ವೇರ್ ದಾಳಿಯಾಗಿರಬಹುದು. ಈ ಬಗ್ಗೆ ಅಧಿಕಾರಿಗಳಿಂದ ಸೂಕ್ತ ತನಿಖೆ ನಡೆಸಲ್ಪಡುತ್ತದೆ," ಎಂದು ತಿಳಿಸಿತು.

"ಡಿಜಿಟಲ್ ಸೇವೆಗಳನ್ನು ಮರುಸ್ಥಾಪಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸಿಇಆರ್ಟಿ-ಇನ್) ಮತ್ತು ರಾಷ್ಟ್ರೀಯ ಮಾಹಿತಿ ಕೇಂದ್ರದಿಂದ ಬೆಂಬಲವನ್ನು ಪಡೆಯಲಾಗುತ್ತಿದೆ," ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಿತ್ತು.

ಏಮ್ಸ್ 1200 ಕಂಪ್ಯೂಟರ್‌ಗಳಲ್ಲಿ ಆಂಟಿವೈರಸ್

ಏಮ್ಸ್ 1200 ಕಂಪ್ಯೂಟರ್‌ಗಳಲ್ಲಿ ಆಂಟಿವೈರಸ್

ರಾಮ್ಸಮ್ವೇರ್ ಎನ್ನುವುದು ದುರುದ್ದೇಶಪೂರಿತ ಸಾಫ್ಟ್‌ವೇರ್ ಆಗಿದ್ದು, ಬಳಕೆದಾರರು ಅಥವಾ ಸಂಸ್ಥೆಯ ಕಂಪ್ಯೂಟರ್‌ನಲ್ಲಿರುವ ಫೈಲ್‌ಗಳಿಗೆ ಪ್ರವೇಶಿಸುವುದಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ, ಸೈಬರ್ ದಾಳಿಕೋರರು ಇಂಥ ಫೈಲ್‌ಗಳಿಗೆ ಪ್ರವೇಶವನ್ನು ಅನುಮತಿಸಲು ಸುಲಿಗೆಯನ್ನು ಕೋರುತ್ತಾರೆ.

ಈ ಹಿನ್ನೆಲೆ ಏಮ್ಸ್ ನೆಟ್‌ವರ್ಕ್ ಸ್ಯಾನಿಟೈಸೇಶನ್ ಪ್ರಗತಿಯಲ್ಲಿದೆ. ಸರ್ವರ್‌ಗಳು ಮತ್ತು ಕಂಪ್ಯೂಟರ್‌ಗಳಿಗಾಗಿ ಆಂಟಿವೈರಸ್ ಪರಿಹಾರಗಳನ್ನು ಅಳವಡಿಸಲಾಗುತ್ತಿದೆ. 5,000ಕ್ಕೂ ಹೆಚ್ಚು ಕಂಪ್ಯೂಟರ್‌ಗಳಲ್ಲಿ ಸುಮಾರು 1,200 ಕಂಪ್ಯೂಟರ್‌ಗಳಲ್ಲಿ ಇದನ್ನು ಸ್ಥಾಪಿಸಲಾಗಿದೆ. 50 ಸರ್ವರ್‌ಗಳಲ್ಲಿ 24 ಸ್ಕ್ಯಾನ್ ಮಾಡಲಾಗಿದೆ.

English summary
New Delhi: China involvement suspected in 5 AIIMS servers targeted by hackers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X