New Covid Variant Eris: ವೇಗವಾಗಿ ಹರಡುತ್ತಿದೆ ಕೋವಿಡ್‌ನ ಹೊಸ ತಳಿ- ಭಾರತಕ್ಕಿದೆಯೇ ಆತಂಕ? ತಜ್ಞರು ಹೇಳಿದ ಸತ್ಯವೇನು?
ನವದೆಹಲಿ, ಆಗಸ್ಟ್ 07: ಇಂಗ್ಲೆಂಡ್‌ನಲ್ಲಿ ಕೋವಿಡ್ ವೈರಸ್‌ನ ಹೊಸ ರೂಪಾಂತರ 'ಎರಿಸ್' ವೇಗವಾಗಿ ಹರಡುತ್ತಿದೆ. ಈ ಹೊಸ ಅಲೆಯು ಜಾಗತಿಕವಾಗಿ ಮತ್ತೊಮ್ಮೆ ಸಾಂಕ್ರಾಮಿಕ ಭೀತಿಯನ್ನು ಸೃಷ್ಟಿಸಲಿದೆ ಎಂಬ ಕಳವಳವನ್ನು ಹಲವು ದೇಶಗಳ ತಜ್ಞರು ವ್ಯಕ್ತಪಡಿಸಿದ್ದಾರೆ. ಈ ಭಯಗಳ ನಡುವೆ, 'ಎರಿಸ್' ರೂಪಾಂತರವು ಭಾರತದಲ್ಲಿ ಹರಡಬಹುದೇ ಅಥವಾ ಇಲ್ಲವೇ ಎಂಬುದರ ಕುರಿತು ತಜ್ಞರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಸುಮಾರು ಒಂದು ವರ್ಷದ ಬಳಿಕ ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಸ್ಟೇಟ್ಸ್ ಮತ್ತು ಜಪಾನ್‌ನಂತಹ ಹಲವಾರು ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಮತ್ತೊಮ್ಮೆ ಹೆಚ್ಚಾಗುತ್ತಿವೆ. ವೇಗವಾಗಿ ಹರಡುತ್ತಿರುವ ಕೋವಿಡ್ ರೂಪಾಂತರ ಎರಿಸ್ ಭಾರತದಲ್ಲಿ ಇನ್ನೂ ಕಾಣಿಸಿಕೊಂಡಿಲ್ಲ.

ಭಾರತದಲ್ಲಿ ಎರಿಸ್ ಸಾಂಕ್ರಾಮಿಕ ರೋಗವು ಮತ್ತೊಂದು ಅಲೆಯನ್ನು ಉಂಟುಮಾಡಬಹುದು ಎಂಬ ಭಯವಿದೆ. ಈ ಹೊಸ ರೂಪಾಂತರವು ಭಾರತದ ಜನಸಂಖ್ಯೆಯಲ್ಲಿ ಹರಡುವ ಸಾಧ್ಯತೆಯಿಲ್ಲ ಎಂದು ಅನೇಕ ತಜ್ಞರು ಬಹಿರಂಗಪಡಿಸಿದ್ದಾರೆ.
ಕೋವಿಡ್‌ನ ಎರಿಸ್ ರೂಪಾಂತರವು ಭಾರತದಲ್ಲಿ ಸಾಂಕ್ರಾಮಿಕ ರೋಗದ ಹೊಸ ಅಲೆಯನ್ನು ಉಂಟುಮಾಡುವ ಸಾಧ್ಯತೆಯಿಲ್ಲ ಎಂದು ಹೇಳಿದ್ದಾರೆ. ಭಾರತದಲ್ಲಿನ ಜನಸಂಖ್ಯೆಯು ಈಗಾಗಲೇ ವೈರಸ್ ವಿರುದ್ಧದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇದು ಭಾರತಕ್ಕೆ ಬಂದರೂ, ವೇಗವಾಗಿ ಹರಡುವುದಿಲ್ಲ. ನಿಧಾನವಾಗಿ ಹರಡಿದರೂ, ಸಾವುಗಳು ಸಂಭವಿಸುವುದಿಲ್ಲವೆಂದು ತಜ್ಞರು ಹೇಳಿದ್ದಾರೆ.

ಇದರರ್ಥ ಕೋವಿಡ್ ವೈರಸ್‌ನ ಎರಿಸ್ ರೂಪಾಂತರದ ಹರಡುವಿಕೆಯು ಸೀಮಿತವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಸದ್ಯಕ್ಕೆ ಜನರು ಯಾವುದೇ ಆತಂಕಕ್ಕೆ ಒಳಗಾಗುವ ಸಾಧ್ಯತೆ ಇಲ್ಲ. ಆದರೂ, ಸೋಂಕನ್ನು ತಪ್ಪಿಸಲು ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರೂ ಸರಿಯಾದ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ (ಯುಕೆಎಚ್‌ಎಸ್‌ಎ) ಪ್ರಕಾರ, ಹೊಸ ಎರಿಸ್ ರೂಪಾಂತರವು ದೇಶದಲ್ಲಿ ಪ್ರತಿ ಏಳು ಕೋವಿಡ್ ಪ್ರಕರಣಗಳಲ್ಲಿ ಒಂದಕ್ಕೆ ಕಾರಣವಾಗಿದೆ. ಇದು ಯುನೈಟೆಡ್ ಕಿಂಗ್‌ಡಂನಲ್ಲಿ ವೇಗವಾಗಿ ಹರಡುತ್ತಿದೆ.

'ನಮ್ಮ ಹಿಂದಿನ ವರದಿಗೆ ಹೋಲಿಸಿದರೆ ಈ ವಾರ ಕೋವಿಡ್ ಪ್ರಕರಣಗಳ ಸಂಖ್ಯೆಗಳು ಹೆಚ್ಚಾಗುತ್ತಲೇ ಇವೆ. ಉಸಿರಾಟದ ಡೇಟಾಮಾರ್ಟ್ ಸಿಸ್ಟಮ್ ಮೂಲಕ ಕಂಡುಬಂದಿರುವ 4,396 ಉಸಿರಾಟದ ಮಾದರಿಗಳಲ್ಲಿ ಶೇ 5.4ರಷ್ಟು ಕೋವಿಡ್ ಪ್ರಕರಣಗಳು ಎಂದು ಗುರುತಿಸಲಾಗಿದೆ' ಎಂದು ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ ಹೇಳಿದೆ.












Click it and Unblock the Notifications