ಭಾರತದಲ್ಲಿಂದು ಒಂದೂ ರೂಪಾಂತರಿ ಕೊರೊನಾವೈರಸ್ ಪತ್ತೆಯಾಗಿಲ್ಲ

ನವದೆಹಲಿ, ಜನವರಿ 10: ಭಾರತದಲ್ಲಿ ಇಂದು ಒಂದೂ ರೂಪಾಂತರಿ ಕೊರೊನಾವೈರಸ್ ಪತ್ತೆಯಾಗಿಲ್ಲ. ವಿವಿಧ ರಾಜ್ಯಗಳಿಂದ ರವಾನಿಸಲಾಗಿದ್ದ ಸೋಂಕಿತರ ವರದಿಯನ್ನು ಪುಣೆಯ ರಾಷ್ಟ್ರೀಯ ವೈರಾಣು ಕೇಂದ್ರದಲ್ಲಿ ಪರೀಕ್ಷೆಗೊಳಪಡಿಸಲಾಗಿದೆ. ಈಗಾಗಲೇ ಎಲ್ಲಾ ಸೋಂಕಿತರನ್ನು ಪ್ರತ್ಯೇಕ ಕೊಠಡಿಗಳಲ್ಲಿ ಐಸೋಲೇಷನ್ ನಲ್ಲಿ ಇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ

ಭಾರತದಲ್ಲಿ ಕೊರೋನಾ ವೈರಸ್ ವೈರಸ್ ಆರ್ಭಟ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದು, ಈ ನಡುವಲ್ಲೇ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಂದೂ ರೂಪಾಂತರಿ ಕೊರೋನಾ ಸೋಂಕು ಪ್ರಕರಣ ವರದಿಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಪ್ರಸ್ತುತ ಭಾರತದಲ್ಲಿ 90 ಮಂದಿಯಲ್ಲು ರೂಪಾಂತರಿ ಕೊರೊನಾ ಪತ್ತೆಯಾಗಿದ್ದು, ಎಲ್ಲಾ ಸೋಂಕಿತರನ್ನು ಆಯಾ ರಾಜ್ಯಗಳ ಆರೋಗ್ಯ ಕೇಂದ್ರಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದೂ ಸಚಿವಾಲಯದ ಹೊಸ ಮಾಹಿತಿ ನೀಡಿದೆ.

ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದವರೆಲ್ಲರನ್ನೂ ಕ್ವಾರಂಟೈನ್'ಗೊಳಪಡಿಸಲಾಗಿದ್ದು, ಸಹ ಪ್ರಯಾಣಿಕರು, ಕುಟುಂಸ್ಥರು ಹಾಗೂ ಇತರಿಗಾಗಿ ಹುಡುಕಾಟ ಆರಂಭಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

New Covid-19 Strain In India: No Fresh Case In Last 24 Hours

ಕೋವಿಡ್ ಚೇತರಿಕೆ ಪ್ರಮಾಣ ಶೇಕಡ 96.42ಕ್ಕೆ ಏರಿದೆ. ಕಳೆದ 24 ತಾಸಿನಲ್ಲಿ 19 ಸಾವಿರಕ್ಕೂ ಹೆಚ್ಚು ಸೋಂಕಿತರು ಚೇತರಿಸಿಕೊಳ್ಳುವುದರೊಂದಿಗೆ ಇದುವರೆಗೆ ಗುಣಮುಖರಾದವರ ಸಂಖ್ಯೆ 1 ಕೋಟಿ 75 ಸಾವಿರಕ್ಕೆ ಏರಿಕೆಯಾಗಿದೆ.

ಕೋವಿಡ್ ಚೇತರಿಕೆ ಪ್ರಮಾಣ ಭಾರತದಲ್ಲಿ ವಿಶ್ವದಲ್ಲೇ ಅತ್ಯಧಿಕವಾಗಿದ್ದು, ಈ ಪ್ರಮಾಣ ಬ್ರೆಜಿಲ್‌ನಲ್ಲಿ ಶೇಕಡ 89.36, ರಷ್ಯಾದಲ್ಲಿ 81.17, ಇಟಲಿಯಲ್ಲಿ 70.68, ಅಮೆರಿಕದಲ್ಲಿ 59.59 , ಬ್ರಿಟನ್‌ನಲ್ಲಿ ಶೇಕಡ 47.77ರಷ್ಟಿದೆ.

ಕಳೆದ 24 ತಾಸಿನಲ್ಲಿ 18 ಸಾವಿರದ 645 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ದೇಶದಲ್ಲಿ ಇದುವರೆಗೆ ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 1 ಕೋಟಿ 4 ಲಕ್ಷ ದಾಟಿದೆ. ದೇಶದಲ್ಲಿ ಸೋಂಕಿನಿಂದ ಸಾವಿನ ಪ್ರಮಾಣ ಶೇಕಡ 1.45ರಷ್ಟಿದ್ದು, ಇದು ಜಾಗತಿಕವಾಗಿ ಕನಿಷ್ಠ ಮಟ್ಟವಾಗಿದೆ.

ಕಳೆದ 24 ತಾಸಿನಲ್ಲಿ 201ಸಾವು ಸಂಭವಿಸಿದ್ದು, ಈವರೆಗೆ ಮೃತಪಟ್ಟವರ ಸಂಖ್ಯೆ 1 ಲಕ್ಷ 50 ಸಾವಿರದ 999ಕ್ಕೆ ಏರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+