Bihar Bridge Collapse; ಬಿಹಾರದಲ್ಲಿ ನಿರ್ಮಾಣ ಹಂತದ ₹12 ಕೋಟಿ ವೆಚ್ಚದ ಸೇತುವೆ ಕುಸಿತ
ಬಿಹಾರದ ಅರಾರಿಯಾದಲ್ಲಿ ನಿರ್ಮಾಣ ಹಂತದ ಸೇತುವೆಯ ಒಂದು ಭಾಗ ಮಂಗಳವಾರ ಕುಸಿದಿದೆ. ಕೋಟಿಗಟ್ಟಲೆ ಖರ್ಚು ಮಾಡಿ ಬಕ್ರಾ ನದಿಗೆ ನಿರ್ಮಿಸಿದ ಕಾಂಕ್ರೀಟ್ ಸೇತುವೆ ಕೆಲವೇ ಸೆಕೆಂಡ್‌ಗಳಲ್ಲಿ ಕುಸಿದಿದೆ.
ವೈರಲ್ ಆಗಿರುವ ದೃಶ್ಯಗಳಲ್ಲಿ ಸೇತುವೆಯು, ವೇಗವಾಗಿ ಹರಿಯುವ ನದಿಯ ಮೇಲೆ, ಒಂದು ಬದಿಗೆ ವಾಲಿರುವುದನ್ನು ನೋಡಬಹುದು ಮತ್ತು ಸೇತುವೆಯ ಬಳಿ ದಡದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದರು, ಕೆಲವೇ ಸೆಕೆಂಡ್‌ಗಳಲ್ಲಿ ಸೇತುವೆ ಸಂಪೂರ್ಣವಾಗಿ ಕುಸಿಯಿತು.

ಯಾವುದೇ ಪ್ರಾಣಾಪಾಯ ಇಲ್ಲ
ಬಿಹಾರದ ಅರಾರಿಯಾ ಜಿಲ್ಲೆಯ ಕುರ್ಸಕಾಂತ ಮತ್ತು ಸಿಕ್ತಿ ನಡುವಿನ ಪ್ರಯಾಣವನ್ನು ಸುಲಭಗೊಳಿಸಲು ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ₹ 12 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಸೇತುವೆ ಉದ್ಘಾಟನೆಗೂ ಮುನ್ನವೇ ಕುಸಿದಿದ್ದು, ಕಾಮಗಾರಿಯ ಗುಣಮಟ್ಟವನ್ನು ಪ್ರಶ್ನಿಸುವಂತೆ ಮಾಡಿದೆ.
ಸಿಕ್ತಿ ಶಾಸಕ ವಿಜಯ್ ಕುಮಾರ್ ಎಎನ್‌ಐಗೆ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿ, ನಿರ್ಮಾಣ ಕಂಪನಿಯ ಮಾಲೀಕರ ನಿರ್ಲಕ್ಷ್ಯದಿಂದ ಸೇತುವೆ ಕುಸಿದಿದೆ, ಸರ್ಕಾರ ಈ ಘಟನೆ ಬಗ್ಗೆ ತನಿಖೆ ನಡೆಸಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದಿದ್ದಾರೆ.
The bridge collapsed in Bihar before inauguration. I am shocked. Bihar mein log apne netaon ko kyun nahi pakad kar peet rahe hain? pic.twitter.com/UWAiSC8jOT
— Prayag (@theprayagtiwari) June 18, 2024
ನದಿಯಲ್ಲಿ ಕೊಚ್ಚಿಹೋದ ಸೇತುವೆ
ನದಿಯಲ್ಲಿ ಕುಸಿದ ಸೇತುವೆ ಭಾಗವು ಸೆಕೆಂಡುಗಳಲ್ಲಿ ಕೊಚ್ಚಿಕೊಂಡುಹೋಯಿತು ಮತ್ತು ಜನರು ಸುರಕ್ಷಿತವಾಗಿರಲು ಓಡಲು ಪ್ರಾರಂಭಿಸಿದರು. ಮತ್ತೊಂದು ವೀಡಿಯೊದಲ್ಲಿ, ಸೇತುವೆ ಉಳಿದ ಭಾಗದ ಅಂಚಿನಲ್ಲಿ ಕೆಲವು ಜನರು ಅಪಾಯಕಾರಿಯಾಗಿ ನಿಂತಿದ್ದಾರೆ. ಅನೇಕ ಜನರು ಅದರ ಕೆಳಗೆ ನಿಂತಿರುವುದನ್ನು ನೋಡಬಹುದು.
ಸದ್ಯ ಕುಸಿದಿರುವ ಹೆಚ್ಚಿನ ಸೇತುವೆ ಭಾಗವನ್ನು ನದಿಯ ಮೇಲೆ ನಿರ್ಮಾಣ ಮಾಡಲಾಗಿತ್ತು. ಬಕ್ರಾ ನದಿಯ ದಡದಲ್ಲಿ ನಿರ್ಮಾಣ ಮಾಡುವ ಭಾಗ ಹಾಗೆ ಉಳಿದಿದೆ.
ಇದೇ ವರ್ಷದ ಮಾರ್ಚ್‌ನಲ್ಲಿ ಬಿಹಾರದ ಸುಪೌಲ್‌ನಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಹಲವರು ಸಿಲುಕಿಕೊಂಡಿದ್ದ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದೆ.
ವರದಿಗಳ ಪ್ರಕಾರ ಕೋಸಿ ನದಿಗೆ ₹ 984 ಕೋಟಿ ವೆಚ್ಚದಲ್ಲಿ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಈ ಅಪಘಾತವು ಬಿಹಾರದ ಭಾಗಲ್ಪುರದಲ್ಲಿ ನಿರ್ಮಾಣ ಹಂತದ ಸೇತುವೆಯ ಕುಸಿತಕ್ಕೆ ವಿಲಕ್ಷಣ ಹೋಲಿಕೆಯನ್ನು ಹೊಂದಿದೆ, ಇದು ರಾಜ್ಯ ಸರ್ಕಾರ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ಚರ್ಚೆಯನ್ನು ಹುಟ್ಟುಹಾಕಿದೆ.
ಭಾರಿ ಆಕ್ರೋಶ
ಇನ್ನು ಬಿಹಾರದಲ್ಲಿ ಈ ರೀತಿಯ ಕಳಪೆ ಕಾಮಗಾರಿಗಳು ನಡೆಯುತ್ತಿರುವುದು ಇದೇ ಮೊದಲೇನಲ್ಲ. ಅಭಿವೃದ್ಧಿ ಹೆಸರಿನಲ್ಲಿ ಹೀಗೆ ಕೋಟ್ಯಂತರ ರೂಪಾಯಿ ಹಣವನ್ನು ಪೋಲು ಮಾಡುತ್ತಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ತೆರಿಗೆ ಹಂಚಿಕೆಯಲ್ಲಿ ಬಿಹಾರ ಹೆಚ್ಚಿನ ಪಾಲು ಪಡೆಯುತ್ತಿದೆ. ದಕ್ಷಿಣದ ರಾಜ್ಯಗಳು ಹೆಚ್ಚಿನ ತೆರಿಗೆ ಕಟ್ಟುತ್ತಿದ್ದರೂ, ಪಡೆಯುತ್ತಿರುವುದು ಅಲ್ಪ ಪ್ರಮಾಣದ ಪಾಲು ಮಾತ್ರ.
ಬೇರೆ ರಾಜ್ಯಗಳು ಕಟ್ಟುವ ತೆರಿಗೆಯನ್ನು ಬಿಹಾರ ಹೀಗೆ ದುರ್ಬಳಕೆ ಮಾಡಿಕೊಂಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.












Click it and Unblock the Notifications