ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಡಿಎನ್‌ಎ ಪರೀಕ್ಷೆಗೆ ಸಿದ್ಧ, ಅಸ್ಥಿ ತನ್ನಿ; ನೇತಾಜಿ ಮಗಳು

|
Google Oneindia Kannada News

ನವದೆಹಲಿ, ಆಗಸ್ಟ್ 15: 75 ನೇ ಸ್ವಾತಂತ್ರ್ಯ ವಾರ್ಷಿಕೋತ್ಸವದಂದು ಟೋಕಿಯೊದ ರೆಂಕೋಜಿ ದೇವಸ್ಥಾನದಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಅಸ್ಥಿಯನ್ನು ಭಾರತಕ್ಕೆ ಮರಳಿ ತನ್ನಿ ಎಂದು ನೇತಾಜಿ ಅವರ ಮಗಳು ಅನಿತಾ ಬೋಸ್ ಫಾಫ್ ಕರೆ ನೀಡಿದ್ದಾರೆ.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮಗಳು ಅನಿತಾ ಬೋಸ್ ಫಾಫ್ ಟೋಕಿಯೊದ ರೆಂಕೋಜಿ ದೇವಸ್ಥಾನದಲ್ಲಿರುವ ಅವಶೇಷಗಳು ತನ್ನ ತಂದೆಯೆಂದು ನನಗೆ ಮನವರಿಕೆಯಾಗಿದೆ ಎಂದು ಹೇಳಿದರು.

ಜರ್ಮನಿಯಲ್ಲಿ ವಾಸಿಸುತ್ತಿರುವ 79 ವರ್ಷದ ಅನಿತಾ ಬೋಸ್ ಫಾಫ್, ಡಿಎನ್‌ಎ ಪರೀಕ್ಷೆಗಳನ್ನು ಮಾಡಲು ಜಪಾನಿನ ರಾಜಧಾನಿಯಲ್ಲಿ ಸಂರಕ್ಷಿಸಲಾದ ಅವಶೇಷಗಳಾದ ಮೂಳೆಗಳು ಮತ್ತು ಹಲ್ಲುಗಳನ್ನು ಒಳಗೊಂಡಂತೆ ಇರುವ ಅಸ್ಥಿಯನ್ನು ತನ್ನಿ. ಡಿಎನ್‌ಎ ಪರೀಕ್ಷೆಗೆ ಸಿದ್ಧ ಎಂದು ಹೇಳಿದರು.

Netaji Subhas Chandra Bose’s Daughter Anita Bose Asked to his Mortal Remains Bring to India

"ಆಧುನಿಕ ತಂತ್ರಜ್ಞಾನವು ಈಗ ಅತ್ಯಾಧುನಿಕ ಡಿಎನ್‌ಎ-ಪರೀಕ್ಷೆಗೆ ಸಾಧನಗಳನ್ನು ನೀಡುತ್ತದೆ, ಅವಶೇಷಗಳಿಂದ ಡಿಎನ್‌ಎಯನ್ನು ಹೊರತೆಗೆಯಬಹುದು. ನೇತಾಜಿಯವರು 18 ಆಗಸ್ಟ್ 1945 ರಂದು ನಿಧನರಾದರು ಎಂಬುದನ್ನು ಇನ್ನೂ ಅನುಮಾನಿಸುವವರಿಗೆ, ಟೋಕಿಯೊದ ರೆಂಕೋಜಿ ದೇವಾಲಯದಲ್ಲಿ ಇರಿಸಲಾಗಿರುವ ಅವಶೇಷಗಳು ಅವರದೇ ಎಂದು ವೈಜ್ಞಾನಿಕ ಪುರಾವೆಗಳನ್ನು ಪಡೆಯಲು ಈ ತಂತ್ರಜ್ಞಾನವು ಅವಕಾಶವನ್ನು ನೀಡುತ್ತದೆ" ಎಂದರು.

"ರೆಂಕೋಜಿ ದೇವಸ್ಥಾನದ ಅರ್ಚಕರು ಮತ್ತು ಜಪಾನ್ ಸರ್ಕಾರವು ಅಂತಹ ಪರೀಕ್ಷೆಗೆ ಒಪ್ಪಿಗೆ ನೀಡಿದೆ ಎಂಬುದು ನೇತಾಜಿ ಸಾವಿನ ಬಗ್ಗೆ ಭಾರತೀಯ ತನಿಖೆಯ ಅನುಬಂಧಗಳಲ್ಲಿನ ದಾಖಲೆಗಳು ತೋರಿಸುತ್ತವೆ" ಎಂದು ತಿಳಿಸಿದರು.

''ಆದ್ದರಿಂದ ನಾವು ಅವನನ್ನು ಮನೆಗೆ ಕರೆತರಲು ಸಿದ್ಧರಾಗೋಣ! ನೇತಾಜಿಗೆ ಅವರ ಜೀವನದಲ್ಲಿ ಅವರ ದೇಶದ ಸ್ವಾತಂತ್ರ್ಯಕ್ಕಿಂತ ಮುಖ್ಯವಾದುದು ಯಾವುದೂ ಇರಲಿಲ್ಲ. ಪರಕೀಯರ ಆಳ್ವಿಕೆಯಿಂದ ಮುಕ್ತವಾದ ಭಾರತದಲ್ಲಿ ಬದುಕುವುದಕ್ಕಿಂತ ಹೆಚ್ಚು ಹಂಬಲಿಸಿದ್ದು ಬೇರೇನೂ ಇರಲಿಲ್ಲ! ಅವರು ಸ್ವಾತಂತ್ರ್ಯದ ಸಂತೋಷವನ್ನು ಅನುಭವಿಸಲು ಬದುಕಿಲ್ಲವಾದ್ದರಿಂದ, ಅವರ ಅವಶೇಷಗಳಾದರೂ ಭಾರತೀಯ ನೆಲಕ್ಕೆ ಮರಳುವ ಸಮಯ ಬಂದಿದೆ'' ಎಂದು ಆಶಿಸಿದರು.

Netaji Subhas Chandra Bose’s Daughter Anita Bose Asked to his Mortal Remains Bring to India

ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಲು ಭಾರತೀಯ ರಾಷ್ಟ್ರೀಯ ಸೇನೆಯನ್ನು ರಚಿಸಿದ ನೇತಾಜಿ ಅವರ ಸಾವು ಭಾರತೀಯ ಇತಿಹಾಸದ ಬೃಹತ್ ರಹಸ್ಯಗಳಲ್ಲಿ ಒಂದಾಗಿದೆ. ನೇತಾಜಿಯ ಏಕೈಕ ಪುತ್ರಿ ಅನಿತಾ ಬೋಸ್ ಫಾಫ್ ತನ್ನ ತಂದೆ ಬಹಳ ಹಿಂದೆಯೇ ನಿಧನರಾಗಿದ್ದಾರೆ. ಅವರ ಅವಶೇಷಗಳು ರೆಂಕೋಜಿ ದೇವಸ್ಥಾನದಲ್ಲಿವೆ ಎಂದು ದೀರ್ಘಕಾಲದಿಂದ ವಾದಿಸುತ್ತಿದ್ದಾರೆ.

ಆದರೆ, ನೇತಾಜಿಯವರ ಹಲವಾರು ಭಾರತೀಯ ಸಂಬಂಧಿಕರು, ಅವರು ಆಗಸ್ಟ್ 18, 1945 ರಂದು ಈಗ ತೈವಾನ್‌ನಲ್ಲಿರುವ ಫಾರ್ಮೋಸಾದಲ್ಲಿ ಜಪಾನಿನ ಮಿಲಿಟರಿ ವಿಮಾನದ ಅಪಘಾತದಲ್ಲಿ ಮೃತಪಟ್ಟಿಲ್ಲ. ಅವರು ತೈವಾನ್‌ನಿಂದ ಎಲ್ಲಿಗೆ ಪ್ರಯಾಣಿಸಿದರು ಎಂಬುದನ್ನು ತಿಳಿದುಕೊಳ್ಳಲು ಸರ್ಕಾರ ಸರಿಯಾದ ಹುಡುಕಾಟವನ್ನು ಮುಂದುವರಿಸಬೇಕು ಎಂದು ವಾದಿಸಿದ್ದಾರೆ.

English summary
Netaji Subhas Chandra Bose’s Mortal remains bring back India asked daughter Anita Bose Pfaff on 75th anniversary of independence. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X