ನಾಗಾಲ್ಯಾಂಡ್ ಮುಖ್ಯಮಂತ್ರಿಯಾಗಿ ರಿಯೋ ಪ್ರಮಾಣವಚನ
ಕೋಹಿಮಾ, ಮಾರ್ಚ್ 08: ನ್ಯಾಶ್ನಲ್ ಡೆಮಾಕ್ರೆಟಿಕ್ ಪ್ರೊಗ್ರೆಸ್ಸಿವ್ ಪಾರ್ಟಿ (ಎನ್ ಡಿಪಿಪಿ) ಮುಖಂಡ ನೈಫಿಯು ರಿಯೂ ಅವರು ನಾಗಾಲ್ಯಾಂಡಿನ ನೂತನ ಮುಖ್ಯಮಂತ್ರಿಯಾಗಿ ಇಂದು(ಮಾ.8) ಪ್ರಮಾಣವಚನ ಸ್ವೀಕರಿಸಿದರು.
ಅವರೊಂದಿಗೆ 11 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ.ಆಚಾರ್ಯ ಮುಖ್ಯಮಂತ್ರಿ ರಿಯೋ ಮತ್ತು ಇತರ ಸಚಿವರಿಗೆ ಪ್ರಮಾಣವಚನ ಬೊಧಿಸಿದರು. ರಾಜಭವನದ ಬದಲಾಗಿ ಸಾರ್ವಜನಿಕವಾಗಿ ಪ್ರಮಾಣವಚನ ಸ್ವೀಕರಿಸಿದ ಮೊದಲ ನಾಗಾಲ್ಯಾಂಡ್ ಮುಖಂಡ ಎಂಬ ಹೆಗ್ಗಳಿಕೆಗೆ ರಿಯೋ ಪಾತ್ರರಾದರು.
ನಾಗಾಲ್ಯಾಂಡ್ ನಲ್ಲಿ ಫೆ.27 ರಂದು ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಮಾರ್ಚ್ 03 ರಂದು ಹೊರಬಿದ್ದಿತ್ತು. ಚುನಾವಣೆಯಲ್ಲಿ ಎನ್ ಡಿಪಿಪಿ ಮತ್ತು ಬಿಜೆಪಿ ಮೈತ್ರಿಕೂಟ ಓಟ್ಟು 32 ಸ್ಥಾನಗಳನ್ನು ಪಡೆದು ಬಹುಮತ ಗಳಿಸಿತ್ತು.

ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮುಂತಾದ ಗಣ್ಯರು ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದರು.












Click it and Unblock the Notifications