ನೀಟ್ ಪಿಜಿ ಫಲಿತಾಂಶ ಪ್ರಕಟ: ಫಲಿತಾಂಶ ತಿಳಿಯುವುದು ಹೇಗೆ?

ನವದೆಹಲಿ, ಜೂನ್ 1: ಸ್ನಾತಕೋತ್ತರ ಪದವಿಗಾಗಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ( ನೀಟ್) ಫಲಿತಾಂಶ ಬಿಡುಗಡೆಯಾಗಿದೆ. ಪರೀಕ್ಷೆ ನಡೆದ 10 ದಿನಗಳಲ್ಲೇ ಫಲಿತಾಂಶ ಪ್ರಕಟವಾಗಿರುವುದು ಈ ಬಾರಿ ದಾಖಲೆಯಾಗಿದೆ.

2022ರ ಮೇ 21ರ ಶನಿವಾರ ಪಿಜಿ ನೀಟ್ ಪರೀಕ್ಷೆ ನಡೆಸಲಾಯಿತು. ವೈದ್ಯಕೀಯ ವಿಜ್ಞಾನದ ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್‌ಬಿಇಎಂಎಸ್‌) ದೇಶದ 267 ನಗರಗಳ 849 ಪರೀಕ್ಷಾ ಕೇಂದ್ರಗಳಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಲು ನೀಟ್‌ 2022 ಪರೀಕ್ಷೆ ಆಯೋಜಿಸಿತ್ತು. ಪರೀಕ್ಷೆ ಬರೆಯಲು 2,06,301 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. 1,82,318 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

neet

ನೀಟ್ ಪಿಜಿ ಫಲಿತಾಂಶವನ್ನು ವೀಕ್ಷಿಸಲು ಅಧಿಕೃತ ವೆಬ್‌ಸೈಟ್ nbe.edu.in ವೆಬ್‌ಸೈಟ್‌ಗೆ ಭೇಟಿ ನೀಡಬೇಕಿದೆ. ಅಲ್ಲಿ ನೀಟ್ ಪಿಜಿ (NEET PG) ಫಲಿತಾಂಶ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ಹೊಸ ಪಿಡಿಎಫ್ ವಿಂಡೋ ತೆರೆಯುತ್ತದೆ, ಇಲ್ಲಿ Click here to view the result of NEET-PG 2022 ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ನೀಟ್ ಪಿಜಿ ಫಲಿತಾಂಶ ಇರುವ ಪಿಡಿಎಫ್ ಫೈಲ್ ತೆರೆಯುತ್ತದೆ.

827 ಪುಟಗಳ ಪಿಡಿಎಫ್ ಫೈಲ್‌ನಲ್ಲಿ ನಿಮ್ಮ ರಿಜಿಸ್ಟರ್ ನಂಬರ್ ಹುಡುಕಿ ಫಲಿತಾಂಶ ಖಚಿತಪಡಿಸಿಕೊಳ್ಳಬಹುದು. Ctrl+F ಆಯ್ಕೆ ನಿಮ್ಮ ರಿಜಿಸ್ಟರ್ ನಂಬರ್ ಹುಡುಕಲು ಸಹಾಯಕವಾಗಲಿದೆ.

students

ನೀಟ್ ಪಿಜಿ (NEET PG) ಉತ್ತೀರ್ಣರಾದ ಅಭ್ಯರ್ಥಿಗಳು, ಏಮ್ಸ್ (AIIMS) ನವದೆಹಲಿ ಮತ್ತು ಇತರ ಕೇಂದ್ರಗಳು ಸೇರಿದಂತೆ ದೇಶಾದ್ಯಂತ ಇರುವ ವೈದ್ಯಕೀಯ ಕಾಲೇಜುಗಳಲ್ಲಿ ಎಂಡಿ (MD), ಎಂಸ್‌ (MS) ಮತ್ತು ಪಿಜಿ ಡಿಪ್ಲೊಮಾ ಕೋರ್ಸ್‌ ಸೇರಿದಂತೆ ಯಾವುದೇ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದಾಗಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಮನ್ಸುಖ್ ಮಾಂಡವಿಯಾ ನೀಟ್ ಪಿಜಿ ಪರೀಕ್ಷೆ ಫಲಿತಾಂಶ ಪ್ರಕಟವಾದ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, "ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಭಿನಂದನೆ" ಎಂದಿದ್ದಾರೆ.

ಈಗ ಬಿಡುಗಡೆಯಾಗಿರುವ ಫಲಿತಾಂಶ ತಾತ್ಕಾಲಿಕವಾಗಿದ್ದು, ಜೂನ್ 8ರಂದು ಅಂಕಪಟ್ಟಿ ಬಿಡುಗಡೆಯಾಗಲಿದೆ. ಫಲಿತಾಂಶದ ಕಟ್ ಆಫ್ ಮಾರ್ಕ್ಸ್‌ ಕೂಡ ಬಿಡುಗಡೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+