ಅಂತಾರಾಷ್ಟ್ರೀಯ ಸಾಗರ ನ್ಯಾಯಾಧಿಕರಣ ಭಾರತದ ನೀರೂ ಚಾಧಾ ಜಡ್ಜ್

Posted By:
Subscribe to Oneindia Kannada

ನವದೆಹಲಿ, ಜೂನ್ 15: ಭಾರತದ ಪ್ರಖ್ಯಾತ ವಕೀಲೆ ಡಾ. ನೀರೂ ಚಾಧಾ ಅವರನ್ನು ಅಂತಾರಾಷ್ಟ್ರೀಯ ಸಾಗರ ನ್ಯಾಯಾಧಿಕರಣ (International Tribunal for the Law of the Sea (ITLOS))ದ ನ್ಯಾಯಾಧೀಶರನ್ನಾಗಿ ಆಯ್ಕೆ ಮಾಡಲಾಗಿದ್ದು, ಈ ಸ್ಥಾನವನ್ನು ಅಲಂಕರಿಸಿದ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ.

ಜೂನ್ 14 ರಂದು ನಡೆದ ಚುನಾವಣೆಯಲ್ಲಿ ಏಶ್ಯಾ ಪೆಸಿಫಿಕ್ ಗ್ರೂಪ್ ಅನ್ನು ಪ್ರತಿನಿಧಿಸಿದ ಚಾಧಾ, 120 ಮತಗಳನ್ನು ಗಳಿಸುವ ಮೂಲಕ ಚುನಾವಣೆಯಲ್ಲಿ ಜಯಗಳಿಸಿದರು.

ಬ್ರಿಟನ್ ಸಂಸತ್ತಿಗೆ ಆಯ್ಕೆಯಾದ ಮೊಟ್ಟಮೊದಲ ಸಿಖ್ ಮಹಿಳೆ

ಇದಕ್ಕೂ ಮೊದಲು ವಿಶ್ವಸಂಸ್ಥೆಯ ಮಹಾಸಭೆಯ ಅಧ್ಯಕ್ಷೆಯಾಗಿ, ವಿಜಯಲಕ್ಷ್ಮಿ ಪಂಡಿತ್ ನಂತರ ಈ ಸಾಧನೆ ಮಾಡಿದ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಯನ್ನೂ ಪಡೆದಿದ್ದರು.

ಅಮೆರಿಕದ ಮಿಶಿಗನ್ ವಿವಿ ಮತ್ತು ದೆಹಲಿ ವಿವಿ ಯಲ್ಲಿ ಓದಿದ ನೀರೂ ಚಾಧಾ, 2012 ರಲ್ಲಿ ವಿದೇಶಾಂಗ ವ್ಯವಹಾರ ಸಚಿವಾಲಯದಲ್ಲಿ ಕಾನೂನು ಸಲಹೆಗಾರರಾಗಿ ಸೇವೆ ಸಲ್ಲಿಸಿದ ಅನುಭವವನ್ನೂ ಅವರು ಹೊಂದಿದ್ದಾರೆ.

ಅಮೆರಿಕಾದ 'ಸ್ಪೆಲ್ಲಿಂಗ್ ಬೀ' ಸ್ಪರ್ಧೆ ಗೆದ್ದ ಭಾರತೀಯ ಮೂಲದ ಅನನ್ಯ

ಚಾದಾ ಅವರ ಸಾಧನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆ. ಟ್ವಿಟ್ಟರಿನಲ್ಲಿ ನೀರೂ ಚಾಧಾ ಅವರಿಗೆ ಯಾರೆಲ್ಲ ಅಭಿನಂದನೆ ಸಲ್ಲಿಸಿದದ್ದಾರೆಂದು ಒಮ್ಮೆ ನೋಡೋಣ...

ಚಿತ್ರಕೃಪೆ: ಎಎನ್ ಐ

ಮೊದಲ ಮಹಿಳೆ

ಅಂತಾರಾಷ್ಟ್ರೀಯ ಸಾಗರ ನ್ಯಾಯಾಧಿಕರಣದ ನ್ಯಾಯಾಧೀಶರಾಗಿ ಆಯ್ಕೆ ಯಾಗಿ, ಈ ಸ್ಥಾನವನ್ನು ಅಲಂಕರಿಸಿದ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿಗೆ ಅವರು ಪಾತ್ರರಾದ ಡಾ. ನೀರೂ ಚಾಧಾ ಅವರಿಗೆ ಹೃದಯ ಪೂರ್ವಕ ಅಭಿನಂದನೆಗಳು ಎಂದು ಪ್ರವೀಣ್ ಕಾಸ್ವಾನ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಅಭಿನಂದನೆ

ITLOS ನ್ಯಾಯಾಧೀಶರಾಗಿ ಆಯ್ಕೆಯಾದ ಡಾ. ನೀರೂ ಚಾಧಾ ಅವರಿಗೆ ಅಭಿನಂದನೆಗಳು ಎಂದು ದಿಲಿಪ್ ಗಾಯಕ್ ವಾಡ್ ಟ್ವೀಟ್ ಮಾಡಿದ್ದಾರೆ.

ಬ್ರಿಟನ್ ಸಂಸತ್ತಿಗೆ ಆಯ್ಕೆಯಾದ ಮೊಟ್ಟಮೊದಲ ಸಿಖ್ ಮಹಿಳೆ

ಸಾಧನೆಗೆ ಅಭಿನಂದನೆ

ನೀರು ಚಾಧಾ ಅವರ ಸಾಧನೆಗೆ ಅಭಿನಂದನೆಗಳು.

ಹೆಮ್ಮೆ ಪಡುವ ಸಾಧನೆ

ನೀರೂ ಚಾಧಾ ಸಾಧನೆ ಭಾರತೀಯರು ಹೆಮ್ಮೆ ಪಡುವಂಥದ್ದು ಎಂದು ಇಂಡಿಯನ್ ಪೊಲಿಟಿಕ್ಸ್ ವಾಚ್ ಎಂಬ ಟ್ವಿಟ್ಟರ್ ಖಾತೆಯಿಂದಲೂ ಅವರಿಗೆ ಅಭಿನಂದನೆ ರವಾನೆಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Neeru Chadha has been elected as the first Indian woman judge of the International International Tribunal for the Law of the Sea (ITLOS)), a top body which adjudicates cases related to the international law of the seas.
Please Wait while comments are loading...