• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೈಲ್ವೆ ಬಜೆಟ್ 2015: ಸುರೇಶ್ ಪ್ರಭು ಪ್ರಥಮ ಚುಂಬನ

By Mahesh
|

ನವದೆಹಲಿ, ಫೆ.,26: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಮೊದಲ ಪರಿಪೂರ್ಣ ರೈಲ್ವೆ ಬಜೆಟ್‌ ಗುರುವಾರ ಮಧ್ಯಾಹ್ನ ಮಂಡನೆಯಾಗಿದೆ. ರೈಲ್ವೆ ಸಚಿವ ಸುರೇಶ್ ಪ್ರಭು ಅವರ ಜನಸಾಮಾನ್ಯರ ಮೆಚ್ಚುಗೆಯ ಬಜೆಟ್ ನೀಡಿದ್ದಾಗಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ವಾಜಪೇಯಿ ಕನಸಾದ ಡೈಮಂಡ್ ಚತುಷ್ಪಥ ಜಾಲ ಯೋಜನೆ ಜಾರಿಗೆ ಮೋದಿ ಬಯಸಿದ್ದು, ಪ್ರಮುಖ ಮೆಟ್ರೋ ನಗರಗಳನ್ನು ಹೈಸ್ಪೀಡ್ ರೈಲು ಮೂಲಕ ಹೆಣೆಯುವುದು, ಬುಲೆಟ್ ಟ್ರೈನ್, ಪ್ರಯಾಣ ದರ ಏರಿಳಿತ, ಸುರಕ್ಷತೆ, ತತ್ಕಾಲ್‌ ಟಿಕೆಟ್‌ ದರ ಹೆಚ್ಚಳ ಸಾಧ್ಯತೆ, ತಂತ್ರಜ್ಞಾನ ಬಳಕೆ, ಬಂಡವಾಳ ಹೂಡಿಕೆ ಹೀಗೆ ಹತ್ತು ಹಲವು ವಿಷಯಗಳು ಈ ಬಾರಿಯ ಬಜೆಟ್ ನ ಮುಖ್ಯಾಂಶಗಳಾಗಲಿವೆ.[ರೈಲ್ವೆ ಬಜೆಟ್ 2015: ಕರ್ನಾಟಕದ ನಿರೀಕ್ಷೆಗಳು]

ಸುರೇಶ್ ಪ್ರಭು ಚೊಚ್ಚಲ ರೈಲ್ವೆ ಬಜೆಟ್ ಮುಖ್ಯಾಂಶಗಳು:

13.20: ಸುರೇಶ್ ಪ್ರಭು ಚೊಚ್ಚಲ ಬಜೆಟ್ ಭಾಷಣ ಮುಕ್ತಾಯ. ಹೊಸ ರೈಲು ಘೋಷಣೆ ಇಲ್ಲ, ದರ ಏರಿಕೆ ಇಲ್ಲ, ಟಿಕೆಟಿಂಗ್ ವ್ಯವಸ್ಥೆಯಲ್ಲೂ ಹೆಚ್ಚಿನ ಲಾಭವಿಲ್ಲ, ತಂತ್ರಜ್ಞಾನ ಬಳಕೆ, ಸುರಕ್ಷತೆ, ಖಾಸಗಿ ಸಹಭಾಗಿತ್ವ, ಬಂಡವಾಳ ಹೂಡಿಕೆಗೆ ಹೆಚ್ಚಿನ ಒತ್ತು. ಕರ್ನಾಟಕಕ್ಕೆ ಏನೂ ಇಲ್ಲ, ಯಾರಿಗೂ ಇಲ್ಲ.

[ಭಾರತೀಯ ರೈಲ್ವೆ : ಅಂಕಿ ಸಂಖ್ಯೆಯಲ್ಲಿ ಚುಕು ಬುಕು]

13.15: ಆಯ್ದ ನಾಲ್ಕು ನಗರಗಳಲ್ಲಿ ರೈಲ್ವೆ ಸಂಶೋಧನಾ ಕೇಂದ್ರ ಸ್ಥಾಪನೆ.

13.13: ಬೆಂಗಳೂರು ರೈಲು ನಿಲ್ದಾಣ ಅಭಿವೃದ್ಧಿಗೆ ಸಂಸದ ಪಿಸಿ ಮೋಹನ್, ಮುಂಬೈನ ಗೋಪಾಲಶೆಟ್ಟಿ ಅವರಿಂದ 1 ಕೋಟಿ ರು ನೀಡಿದ್ದಕ್ಕೆ ಸಚಿವ ಪ್ರಭುರಿಂದ ಶ್ಲಾಘನೆ.

13.10: ದೇಶದ ಕರಾವಳಿಗಳನ್ನು ಸಂಪರ್ಕಿಸುವ ಯೋಜನೆ ಜಾರಿ 2000 ಕೋಟಿ ರು ಮೀಸಲು.

13.07: ರೈಲ್ವೆಯಿಂದ 1000 ಮೆ.ವ್ಯಾ ರೂಫ್ ಟಾಪ್ ಸೌರಶಕ್ತಿ ಯೋಜನೆ ಜಾರಿ.

13.05: ಕಾಗದರಹಿತ ಟಿಕೆಟಿಂಗ್ ಜಾರಿ. ಟಿಟಿಇ ಗಳಿಗೆ ಹೊಸ ಸಾಧನಗಳನ್ನು ನೀಡಲಾಗುತ್ತದೆ.

13.02: ದೆಹಲಿ-ಮುಂಬೈ ಹಾಗೂ ದೆಹಲಿ-ಕೋಲ್ಕತ್ತಾ ಓವರ್ ನೈಟ್ ಜರ್ನಿ ಈಗ ಸಾಧ್ಯ.

13.01: ಫಾಸ್ಟ್ ಟ್ರ್ಯಾಕ್ ಯೋಜನೆಗೆ ಒತ್ತು. ಶೇ 84ರಷ್ಟು ಬಂಡವಾಳ ಹೂಡಿಕೆ ಏರಿಕೆ. 77 ಹೊಸ ಯೋಜನೆ ಜಾರಿ.

12.59: 24 ಗಂಟೆಗಳ ಸಹಾಯವಾಣಿ 138 ಮಾರ್ಚ್.1 ರಿಂದ ಆರಂಭ. ಸುರಕ್ಷತೆ ಹೆಲ್ಪ್ ಲೈನ್ 182 ಟೋಲ್ ಫ್ರೀ.12.55: ಹೈಸ್ಪೀಡ್ ರೈಲುಗಳ ವೇಗ 160 ರಿಂದ 200 ಕಿ.ಮೀ ಪ್ರತಿ ಗಂಟೆಗೆ ಏರಿಕೆ.

12.54: ಮೇಕ್ ಇನ್ ಇಂಡಿಯಾ ಅನುಗುಣವಾಗಿ 9 ಹೈಸ್ಪೀಡ್ ಕಾರಿಡಾರ್ ಘೋಷಣೆ. ಡೈಮಂಡ್ ಚತುಷ್ಪಥಕ್ಕೆ ಪೂರಕವಾಗಿ ಕಾರ್ಯ ನಿರ್ವಹಣೆ.

12.53: ರೈಲ್ವೇ ನಿಲ್ದಾಣ ನಿರ್ಮಾಣಕ್ಕೆ ಬಹಿರಂಗ ಬಿಡ್, ಖಾಸಗಿ ಬಂಡವಾಳ ಹೂಡಿಕೆಗೆ ಮುಕ್ತ ಅವಕಾಶ.

12.50: ಗರ್ಭಿಣಿಯರಿಗೆ ಲೋಯರ್ ಬರ್ಥ್ ನಲ್ಲೇ ಸೀಟು ನೀಡಲು ವ್ಯವಸ್ಥೆ.

12.47: ಪ್ರಯಾಣ ದಿನಕ್ಕೂ ಮುನ್ನ 120 ದಿನಗಳ ಮೊದಲೇ ಟಿಕೆಟ್ ಬುಕ್ ಮಾಡಬಹುದು.

12.45: 400 ಸ್ಟೇಷನ್ ಗಳಲ್ಲಿ ವೈ ಫೈ ಸೌಲಭ್ಯ ನೀಡಲಾಗುವುದು,

12.42: ಆಯ್ದ 10 ಪ್ರಮುಖ ನಗರಗಳಲ್ಲಿ ಸ್ಯಾಟಲೈಟ್ ರೈಲ್ವೆ ಟರ್ಮಿನಲ್ ನಿರ್ಮಾಣ.

12.40: ಸಾಮಾನ್ಯ ದರ್ಜೆ ರೈಲಿನಲ್ಲೂ ಮೊಬೈಲ್ ಫೋನ್ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು.

* ಪ್ರಮುಖ ನಿಲ್ದಾಣಗಳಲ್ಲಿ ಲಿಫ್ಟ್ ಹಾಗೂ ಎಸ್ಕಲೇಟರ್ ವ್ಯವಸ್ಥೆ ಕಲ್ಪಿಸಲು 120 ಕೋಟಿ ರು ಮೀಸಲು.

12.37: ಹಿರಿಯ ನಾಗರಿಕರು, ರೋಗಿಗಳು, ಅಂಗವಿಕಲರಿಗೆ ಆನ್ ಲೈನ್ ಮೂಲಕ ವ್ಹೀಲ್ ಚೇರ್ ಬುಕ್ಕಿಂಗ್ ವ್ಯವಸ್ಥೆ

* ಶತಾಬ್ದಿ ಏಕ್ಸ್ ಪ್ರೆಸ್ ರೈಲಿನಲ್ಲಿ ಆನ್ ಬೋರ್ಡ್ ಮನರಂಜನೆ ಒದಗಿಸಲು ಕ್ರಮ.

* ರೈಲು ಆಗಮನ ಹಾಗೂ ನಿರ್ಗಮನ ಟೈಮಿಂಗ್ಸ್ ಪಡೆಯಲು ಎಸ್ಎಂಎಸ್ ಅಲರ್ಟ್ ಒದಗಿಸಲಾಗಿದೆ.

12.36: ದೂರು, ಸಲಹೆ ರಿಯಲ್ ಟೈಮ್ ನಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕಾಗಿ ವಿಶೇಷ ಮೊಬೈಲ್ ಅಪ್ಲಿಕೇಷನ್ ಬಳಕೆ.

12.35: 5 ನಿಮಿಷದಲ್ಲೇ ಟಿಕೆಟ್ ಪಡೆಯುವ ವ್ಯವಸ್ಥೆ. ಮುಂಗಡ ಟಿಕೆಟ್ ಕಾಯ್ದಿರಿಸದ ಪ್ರಯಾಣಿಕರು ಕೂಡಾ 5 ನಿಮಿಷದಲ್ಲೇ ಟಿಕೆಟ್ ಪಡೆಯಬಹುದು.

12.33: ನಿರ್ಭಯಾ ಫಂಡ್ ಬಳಸಿ ಮಹಿಳಾ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುವುದು.

12.30: ಪ್ರಯಾಣದರ ಏರಿಕೆ ಮಾಡಿಲ್ಲ ಎಂದ ಸುರೇಶ್ ಪ್ರಭು

12.25: ಪ್ರತಿದಿನ ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆ 2.3 ಕೋಟಿ ಇದೆ. ಇದನ್ನು 3 ಕೋಟಿಗೇರಿಸಲು ಕ್ರಮ.

12.15: ರೈಲ್ವೆ ಇಲಾಖೆಯಲ್ಲಿ ಭಾರಿ ಬದಲಾವಣೆಯ ಸೂಚನೆ ನೀಡಿದ ಪ್ರಭು, ಬಡತನ ನಿರ್ಮೂಲನೆ, ಮಹಾತ್ಮ ಗಾಂಧೀಜಿ ಅವರು ರೈಲಿನ ಬಗ್ಗೆ ಇದ್ದ ಕನಸು, ವಿಷನ್ 2020 ಬಗ್ಗೆ ಪ್ರಸ್ತಾವನೆ.

12.10: ಚೊಚ್ಚಲ ಬಜೆಟ್ ಭಾಷಣ ಆರಂಭಿಸಿದ ಮಹಾರಾಷ್ಟ್ರ ಮೂಲದ ಸುರೇಶ್ ಪ್ರಭು.

11.45: ಸಂಸತ್ತಿಗೆ ಆಗಮಿಸಿದ ಸುರೇಶ್ ಪ್ರಭು ಜೊತೆಗೆ ರಾಜ್ಯ ಸಚಿವ ಮನೋಜ್ ಕುಮಾರ್ ಸಾಥ್. ಬಜೆಟ್ ಕಾಪಿ ಇರುವ ಸೂಟ್ ಕೇಸ್ ಪ್ರದರ್ಶಿಸಿದರು.

11.20: ರೈಲ್ ಭವನ ತಲುಪಿದ ಸಚಿವ ಸುರೇಶ್ ಪ್ರಭು: ಒಳ್ಳೆ ಬಜೆಟ್, ಜನ ಸಾಮಾನ್ಯರ ಬಜೆಟ್ ನೀಡುತ್ತೇನೆ ಎಂದರು.

10.50: ಅಲಹಾಬಾದಿನಲ್ಲಿ ಪೋರ್ಟರ್ ಗಳ ಪ್ರತಿಭಟನೆ.

10.30: ದೆಹಲಿ : ರೈಲ್ವೆ ಬಜೆಟ್ ಪ್ರತಿಗಳು

ಬಜೆಟ್ ಮಂಡನೆ ಲೈವ್ ಅಪ್ಡೇಟ್ ಗೂ ಮುನ್ನ ಈ ಅಂಶಗಳ ಮೇಲೆ ಕಣ್ಣಿರಿಸಿ

* ಡೀಸೆಲ್ ಬೆಲೆಯಲ್ಲಿ ಕಡಿತವಾಗಿದ್ದರೂ ವಿದ್ಯುತ್ ದರದಲ್ಲಿ 4 ಶೇ. ಏರಿಕೆಯಾಗಿದೆ. ಹೀಗೆ ಉಂಟಾದ ಲಾಭವನ್ನು ವಿದ್ಯುತ್ ದರ ಏರಿಕೆಯಿಂದ ಉಂಟಾಗುತ್ತಿರುವ ನಷ್ಟಕ್ಕೆ ಸರಿಹೊಂದಿಸಲಾಗುತ್ತಿದೆ. ರೈಲ್ವೆಯಲ್ಲಿ ಖಾಸಗಿ ಹೂಡಿಕೆಯನ್ನು ಆಕರ್ಷಿಸಲು ರೈಲ್ವೆ ಸಚಿವರು ಮಾರ್ಗನಕ್ಷೆಯೊಂದನ್ನು ಅನಾವರಣಗೊಳಿಸಬಹುದು. [ಬುಲೆಟ್ ರೈಲಿನ ವಿಶೇಷತೆಗಳು!]

* ಮೋದಿ ಕನಸಿನ ಡೈಮಂಡ್ ಚತುಷ್ಪಥ ಯೋಜನೆ-ದೇಶದ ಮೆಟ್ರೋ ನಗರಗಳನ್ನು ಹೈ ಸ್ಪೀಡ್ ರೈಲಿನ ಮೂಲಕ ಸಂಪರ್ಕ ಸಾಧಿಸುವ ಯೋಜನೆ.

* ಬಾಕಿ ಉಳಿದಿರುವ 359 ಯೋಜನೆಗೆ 1.7 ಲಕ್ಷ ಕೋಟಿ ಸಂಗ್ರಹ

* ಪ್ರಯಾಣಿಕರ ಸುರಕ್ಷತೆಗೆ ತಂತ್ರಜ್ಞಾನ ಬಳಕೆ, ರೈಲ್ವೆ ಸುರಕ್ಷತಾ ದಳ(ಆರ್ ಪಿಎಫ್)ಕ್ಕೆ ಹೆಚ್ಚಿನ ಶಕ್ತಿ.

* ಈಶಾನ್ಯ ರಾಜ್ಯಗಳಿಗೆ ಹೆಚ್ಚಿನ ಅನುದಾನ, ಹೊಸ ಮಾರ್ಗ. [ವಿಡಿಯೋ: ಜನರ ನಿರೀಕ್ಷೆಗಳೇನು?]

* ವೈಫೈ ಬಳಕೆ ಹೆಚ್ಚಳ, ಆರ್ ಎಫ್ ಐಡಿ ಮೂಲಕ ರೈಲುಗಳ ಸಂಚಾರ ಟ್ರ್ಯಾಕಿಂಗ್.

* ಸ್ವಚ್ಛ ಭಾರತ ಅಭಿಯಾನ ರೈಲುಗಳಿಗೂ ಅಳವಡಿಕೆ.

ರೈಲ್ವೆ ಬಜೆಟ್ 2015 : ಸುರೇಶ್ ಪ್ರಭು ಭಾಷಣ ವಿಡಿಯೋ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Read in English: Railway Budget 2015 (Live)
English summary
Rail Budget 2015 Updates In Kannada: Railway Budget, this year, is being looked upon for more than one reason. Being the first rail budget after the NDA government's victory at the Centre, this would be a litmus test for the ministry to meet the expectations of the people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more