• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಕ್ಸಲೀಯರ ಇತ್ತೀಚಿನ ಹತ್ಯಾಕಾಂಡ : ಟೈಮ್ ಲೈನ್

By ವಿಕಾಸ್ ನಂಜಪ್ಪ
|

ನವದೆಹಲಿ, ಏಪ್ರಿಲ್ 25 : ಛತ್ತೀಸ್ ಗಢದ ಸುಕ್ಮಾ ಪ್ರದೇಶದಲ್ಲಿ ಸೋಮವಾರ ನಕ್ಸಲೀಯರು ನಡೆದ ಭೀಕರ ಹತ್ಯಾಕಾಂಡ ಇಡೀ ಭಾರತವನ್ನು ಬೆಚ್ಚಿ ಬೀಳಿಸಿದೆ. ಸಿಆರ್‌ಪಿಎಫ್ ಪಡೆಯ ಮೇಲೆ ಎರಗಿದ ನಕ್ಸಲೀಯರು 26 ಯೋಧರನ್ನು ಕೊಂದುಹಾಕಿದ್ದಾರೆ.

ಒಂದೆಡೆ ಕೆಲ ನಕ್ಸಲೀಯರು ಶರಣಾಗಿ ಹೊಸ ಜೀವನಕ್ಕೆ ನಾಂದಿ ಹಾಡುತ್ತಿದ್ದರೆ, ಮತ್ತೊಂದೆಡೆ ನೂರಾರು ನಕ್ಸಲೀಯರು ಯೋಧರ ಮಾರಣಹೋಮ ಮಾಡಿದ್ದು, ನಕ್ಸಲೀಯರನ್ನು ದಮನ ಮಾಡುವಲ್ಲಿ ಸರಕಾರ ಸೋಲುತ್ತಿರುವುದನ್ನು ಎತ್ತಿ ತೋರಿಸುತ್ತಿದೆ.

ನಕ್ಸಲೀಯರ ಕೆಂಪು ರಕ್ತದ ಜಾಡನ್ನು ನೋಡಿದರೆ ರಕ್ತ ಕುದಿಯದೆ ಇರದು. ಇತ್ತೀಚಿನ ದಿನಗಳಲ್ಲಿ ನಕ್ಸಲೀಯರಿಂದ ಹತ್ಯೆಗಳು ನಡೆಯುತ್ತಲೇ ಇವೆ. ಸರಕಾರ ಸಾಕಷ್ಟು ಪ್ರಯತ್ನ ನಡೆಸುತ್ತಲೇ ಇದೆಯಾದರೂ ನಕ್ಸಲೀಯರನ್ನು ಹತ್ತಿಕ್ಕುವಲ್ಲಿ ವಿಫಲವಾಗುತ್ತಲೇ ಇದೆ.[ಛತ್ತೀಸ್ ಘಡ ಎನ್ಕೌಂಟರ್: ಪೊಲೀಸರ ಸಾವಿನ ಸಂಖ್ಯೆ 26ಕ್ಕೆ ಏರಿಕೆ]

ನಕ್ಸಲೀಯರ ರಕ್ತಸಿಕ್ತ ಹಾದಿ ಇಲ್ಲಿದೆ

ಜೂನ್ 29, 2008 : ಓರಿಸ್ಸಾದ ಬಲಿಮೇಲಾ ಅಣೆಕಟ್ಟು ಪ್ರದೇಶದಲ್ಲಿ ಬೋಟ್ ಮೇಲೆ ದಾಳಿ ಮಾಡಿದ್ದ ನಕ್ಸಲೀಯರು 38 ಯೋಧರನ್ನು ಹೊಡೆದು ಉರುಳಿಸಿದ್ದರು.

ಜುಲೈ 16, 2008 : ಓರಿಸ್ಸಾದ ಮಲ್ಕಂಗಿರಿ ಜಿಲ್ಲೆಯಲ್ಲಿ ಪೊಲೀಸ್ ವ್ಯಾನ್ ಅನ್ನು ಸ್ಫೋಟಿಸಿ 21 ಪೊಲೀಸರನ್ನು ಹತ್ಯೆಗೈದಿದ್ದರು.

ಏಪ್ರಿಲ್ 13, 2009 : ಓರಿಸ್ಸಾದ ಪೂರ್ವಭಾಗದಲ್ಲಿ ಪ್ಯಾರಾಮಿಲಿಟರಿ ಮೇಲೆ ಎರಗಿದ್ದ ನಕ್ಸಲೀಯರು 10 ಯೋಧರನ್ನು ಕೊಂದುಹಾಕಿದ್ದರು.

ಏಪ್ರಿಲ್ 22, 2009 : ಕನಿಷ್ಠ 300 ಜನರಿದ್ದ ರೈಲನ್ನು ನಕ್ಸಲೀಯರು ಅಪಹರಿಸಿದ್ದರು. ಆದರೆ, ಜಾರ್ಖಂಡ್ ನ ಲತೇಹಾರ್ ಎಂಬಲ್ಲಿ ರೈಲು ನಿಂತಾಕ್ಷಣ ಅವರು ಪರಾರಿಯಾಗಿದ್ದರು.

ಮೇ 22, 2009 : ಮಹಾರಾಷ್ಟ್ರದ ಗಡಚಿರೋಲಿ ಜಿಲ್ಲೆಯಲ್ಲಿ ನಕ್ಸಲೀಯರು 16 ಪೊಲೀಸರನ್ನು ಹತ್ಯೆಗೈದಿದ್ದರು.[ದಿಡ್ಡಳ್ಳಿ ಗುಂಡಿನ ದಾಳಿ ಪ್ರಕರಣ:ಆರೋಪಿ ಬಂಧನ]

ಜೂನ್ 10, 2009 : ಜಾರ್ಖಂಡ್ ನ ಸರಂಡಾ ಅರಣ್ಯದಲ್ಲಿ ನಕ್ಸಲೀಯರ ದಾಳಿಯಲ್ಲಿ 9 ಭದ್ರತಾ ಸಿಬ್ಬಂದಿಗಳ ಹತ್ಯೆ.

ಜೂನ್ 13, 2009 : ಬೋಕಾರೋದಲ್ಲಿ ಎರಡು ಕಡೆಗಳಲ್ಲಿ ನೆಲಬಾಂಬ್ ಸ್ಫೋಟಿಸಿ 10 ಪೊಲೀಸರ ಹತ್ಯೆ ಮತ್ತು ಇನ್ನೊಂದು ಘಟನೆಯಲ್ಲಿ ಬಾಂಬ್ ಸ್ಫೋಟಿಸಿ 10 ಪೊಲೀಸರ ಮಾರಣಹೋಮ.

ಜೂನ್ 16, 2009 : ಜಾರ್ಖಂಡ್ ನ ಪಲಮಾವ್ ಜಿಲ್ಲೆಯ ಬೆಹೆರಾಖಂಡ್ ನಲ್ಲಿ ಲ್ಯಾಂಡ್ ಮೈನ್ ಸ್ಫೋಟಿಸಿ 11 ಪೊಲೀಸರ ಹತ್ಯೆ. ಮತ್ತೊಂದು ಘಟನೆಯಲ್ಲಿ 4 ಪೊಲೀಸರ ಮರಣ.

ಜುಲೈ 18, 2009 : ಬಸ್ತಾರ್ ನಲ್ಲಿ ನಕ್ಸಲೀಯರಿಂದ ಗ್ರಾಮಸ್ಥನ ಹತ್ಯೆ.[ಆದಿವಾಸಿ ಗುಡಿಸಿಲಿನ ಮೇಲೆ ಗುಂಡಿನ ದಾಳಿ: ಕೊಡಗಿನಲ್ಲಿ ನಕ್ಸಲರ ಅಟ್ಟಹಾಸ?!]

ಜುಲೈ 27, 2009 : ಛತ್ತೀಸ್ ಗಢದ ದಂತೇವಾಡಾ ಜಿಲ್ಲೆಯಲ್ಲಿ ನೆಲಬಾಂಬ್ ಸ್ಫೋಟಿಸಿದ್ದರಿಂದ 6 ಜನರ ಸಾವು.

ಸೆಪ್ಟೆಂಬರ್ 4, 2009 : ಛತ್ತೀಸ್ ಗಢದ ಬಿಜಾಪುರ ಜಿಲ್ಲೆಯಲ್ಲಿ ಮಾವೋವಾದಿಗಳಿಂದ 4 ಹಳ್ಳಿಗರ ಮಾರಣಹೋಮ.

ಸೆಪ್ಟೆಂಬರ್ 26, 2009 : ಛತ್ತೀಸ್ ಗಢದ ಜಗದಲಪುರ ಜಿಲ್ಲೆಯ ಪೈರಾಗುಡ ಗ್ರಾಮದಲ್ಲಿ ಬಾಲಘಾಟ್ ದ ಬಿಜೆಪಿ ಸಂಸದ ಬಲಿರಾಮ್ ಕಶ್ಯಪ್ ಅವರ ಮಕ್ಕಳ ಹತ್ಯೆ

ಅಕ್ಟೋಬರ್ 8, 2009 : ಮಹಾರಾಷ್ಟ್ರದ ಗಡಚಿರೋಲಿ ಜಿಲ್ಲೆಯಲ್ಲಿ ನಕ್ಸಲೀಯರಿಂದ 17 ಪೊಲೀಸ್ ಸಿಬ್ಬಂದಿಗಳ ಮಾರಣಹೋಮ.

ಫೆಬ್ರವರಿ 15, 2010 : ಪಶ್ಚಿಮ ಬಂಗಾಳದ ಸೀಲ್ಡಾ ಜಿಲ್ಲೆಯಲ್ಲಿ ಮಾವೋವಾದಿಗಳಿಂದ ಈಸ್ಟರ್ನ್ ಫ್ರಂಟಿಯರ್ ರೈಫಲ್ಸ್ ನ 24 ಸಿಬ್ಬಂದಿಗಳ ಗುಂಡಿಟ್ಟು ಹತ್ಯೆ.

ಏಪ್ರಿಲ್ 4, 2010 : ಓರಿಸ್ಸಾದ ಖೋರಾಪುಟ್ ನಲ್ಲಿ ನೆಲಬಾಂಬ್ ಸ್ಫೋಟಿಸಿ ಸ್ಪೆಷಲ್ ಆಪರೇಷನ್ ಗ್ರೂಪ್ ನ 11 ಸಿಬ್ಬಂದಿಗಳ ಹತ್ಯೆ.[ಮಂಗಳೂರು: ನ್ಯಾಯಾಲಯ ಆವರಣದಲ್ಲೇ ಬಂಧಿತನಿಂದ ನಕ್ಸಲ್ ಘೋಷಣೆ]

ಏಪ್ರಿಲ್ 6, 2010 : ಛತ್ತೀಸ್ ಗಢದ ದಂತೇವಾಡಾ ಜಿಲ್ಲೆಯಲ್ಲಿ 75 ಸಿಆರ್ ಪಿಎಫ್ ಜವಾನರ ಮಾರಣಹೋಮ. ಈ ಹತ್ಯಾಕಾಂಡದಲ್ಲಿ ರಾಜ್ಯ ಪೊಲೀಸ್ ಅಧಿಕಾರಿ ಕೂಡ ಹತರಾಗಿದ್ದರು.

ಮೇ 8, 2010 : ಛತ್ತೀಸ್ ಗಢದ ಬಿಜಾಪುರ ಜಿಲ್ಲೆಯಲ್ಲಿ ನೆಲಬಾಂಬ್ ಸ್ಫೋಟಿಸಿ ಬುಲೆಟ್ ಪ್ರೂಫ್ ವಾಹನದಲ್ಲಿ ಸಾಗುತ್ತಿದ್ದ 8 ಸಿಆರ್ ಪಿಎಫ್ ಸಿಬ್ಬಂದಿಯನ್ನು ಹತ್ಯೆಗೈಯಲಾಗಿತ್ತು.

ಜೂನ್ 29, 2010 : ಛತ್ತೀಸ್ ಗಢದ ನಾರಾಯಣಪುರ ಜಿಲ್ಲೆಯಲ್ಲಿ 26 ಸಿಆರ್‌ಎಫ್ ಜವಾನರ ಮೇಲೆ ಏಕಾಏಕಿ ದಾಳಿ ನಡೆಸಿ ಮಾವೋವಾದಿಗಳು ಕೊಂದು ಹಾಕಿದ್ದರು.

ಅಕ್ಟೋಬರ್ 18, 2012 : ಗಯಾದಲ್ಲಿ ಸಿಆರ್ಪಿಎಫ್ ಮೇಲೆ ನಡೆಸಿದ ದಾಳಿಯಲ್ಲಿ 6 ಜವಾನರು ಸಾವಿಗೀಡಾಗಿ, ಡೆಪ್ಯೂಟಿ ಕಮಾಂಡಂಟ್ ಸೇರಿ 8 ಸಿಬ್ಬಂದಿಗಳು ಗಾಯಗೊಂಡಿದ್ದರು.

ಮೇ 25, 2013 : ಛತ್ತೀಸ್ ಗಢದ ದರ್ಭಾ ಕಣಿವೆಯಲ್ಲಿ ಮಾಜಿ ಸಚಿವ ಮಹೇಂದ್ರ ಕರ್ಮಾ ಸೇರಿದಂತೆ 25 ಕಾಂಗ್ರೆಸ್ ಮುಖಂಡರನ್ನು ಹೊಡೆದು ಉರುಳಿಸಲಾಗಿತ್ತು. ಛತ್ತೀಸ್ ಗಢದ ಕಾಂಗ್ರೆಸ್ ಮುಖಂಡ ನಂದ ಕುಮಾರ್ ಪಟೇಲ್ ಕೂಡ ಹತ್ಯೆಗೀಡಾಗಿದ್ದರು.

ಜುಲೈ 2, 2013 : ಜಾರ್ಖಂಡ್ ನ ಪಕೂರ್ ನ ಪೊಲೀಸ್ ಸುಪರಿಂಟೆಂಡೆಂಡ್ ಮತ್ತಿತರ ನಾಲ್ವರು ಪೊಲೀಸ್ ಸಿಬ್ಬಂದಿಗಳು ಡುಮ್ಕಾದಲ್ಲಿ ನಡೆಸಿದ ದಾಳಿಯಲ್ಲಿ ಸಾವಿಗೀಡಾಗಿದ್ದರು.

ಫೆಬ್ರವರಿ 28, 2014 : ಛತ್ತೀಸ್ ಗಢದ ದಂತೇವಾಡಾದಲ್ಲಿ ಸ್ಟೇಷನ್ ಹೌಸ್ ಆಫೀಸರ್ ಸೇರಿದಂತೆ 6 ಜನ ಪೊಲೀಸ್ ಸಿಬ್ಬಂದಿಗಳು ನಕ್ಸಲೀಯರ ದಾಳಿಯಲ್ಲಿ ಪ್ರಾಣ ಕಳೆದುಕೊಂಡರು.

ಮಾರ್ಚ್ 11, 2014 : ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯಲ್ಲಿ ಮಾವೋವಾದಿಗಳಿಂದ 15 ಭದ್ರತಾ ಸಿಬ್ಬಂದಿಗಳ ಹತ್ಯೆ.

ಮಾರ್ಚ್ 12, 2017 : ಬಂಡುಕೋರರಿಂದ ತತ್ತರಿಸಿರುವ ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯಲ್ಲಿ 12 ಸಿಆರ್‌ಪಿಎಫ್ ಜವಾನರ ಮಾರಣಹೋಮ.

ಏಪ್ರಿಲ್ 24, 2017 : ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯಲ್ಲಿ ಕೇಂದ್ರ ಪೊಲೀಸ್ ಮೀಸಲು ದಳದ 26 ಯೋಧರ ಹತ್ಯಾಕಾಂಡ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Naxalite attacks have been on the rise. On Monday a CRPF party was ambushed in which 26 jawans lost their lives. The naxalites have been on the rampage and on Monday in an ambush 26 jawans of the CRPF made the supreme sacrifice at Chhattisgarh. Since the past decade naxalite violence has claimed many lives.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more