ಇರಾನ್‌ನಲ್ಲಿ ಸಿಲುಕಿರುವ ಭಾರತೀಯ ರಕ್ಷಣೆಗೆ ಹೊರಟ ನೌಕಾಪಡೆ

ನವದೆಹಲಿ, ಜೂನ್ 08 : ಲಾಕ್ ಡೌನ್ ಪರಿಣಾಮ ವಿದೇಶದಲ್ಲಿ ಸಿಲುಕಿದ್ದ ಭಾರತೀಯರನ್ನು ವಂದೇ ಭಾರತ್ ಮಿಷನ್ ಮೂಲಕ ವಾಪಸ್ ಕರೆತರಲಾಗಿತ್ತು. ಭಾರತೀಯ ನೌಕಾಪಡೆ ಇರಾನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಈಗ ಕಾರ್ಯಾಚರಣೆ ಆರಂಭಿಸಿದೆ.

Recommended Video

      ನಿಜಕ್ಕೂ ಈ ಸಂದರ್ಭ ಯಾವ ಹೆಣ್ಣಿಗೂ ಬೇಡ | Meghana Raj

      ಕಳೆದ ತಿಂಗಳು ನೌಕಾಪಡೆ ವಿದೇಶದಲ್ಲಿರುವ ಭಾರತೀಯರನ್ನು ಕರೆತರಲು 'ಸಮುದ್ರ ಸೇತು' ಕಾರ್ಯಾಚರಣೆ ನಡೆಸಿತ್ತು. ಜಲಾಶ್ವ ಮತ್ತು ಮಾಗರ್ ಹಡಗಿನ ಮೂಲಕ ಭಾರತೀಯರನ್ನು ಕರೆತರಲಾಗಿತ್ತು.

      2,874 ಜನರು ಮಾಲ್ಡೀವ್ಸ್‌ ಮತ್ತು ಶ್ರೀಲಂಕಾದಿಂದ ಕೊಚ್ಚಿನ್ ಮತ್ತು ಟ್ಯುಟಿಕೋರಿನ್ ಬಂದರಿಗೆ 'ಸಮುದ್ರ ಸೇತು' ಕಾರ್ಯಾಚರಣೆಯ ಮೂಲಕ ಆಗಮಿಸಿದ್ದರು. 2ನೇ ಹಂತದ ಕಾರ್ಯಾಚರಣೆ ಭಾಗವಾಗಿ ಐಎನ್‌ಎಸ್ ಶಾರ್ದೂಲ್ ಸಂಚಾರ ನಡೆಸಿತ್ತು.

      Navy Begins Operation To Evacuate Indians from Iran

      'ಸಮುದ್ರ ಸೇತು' ಅನ್ವಯ ಭಾರತೀಯರನ್ನು ವಾಪಸ್ ಕರೆತರುವಾಗ ಸಾಮಾಜಿಕ ಅಂತರ ಸೇರಿದಂತೆ ಕೋವಿಡ್ - 19 ಹಡರದಂತೆ ತಡೆಯುವ ಎಲ್ಲಾ ಮಾರ್ಗಸೂಚಿಗಳನ್ನು ಪಾಲನೆ ಮಾಡಲಾಗುತ್ತಿದೆ. ಹಡಗಿನಲ್ಲಿ ಪಿಪಿಇ ಕಿಟ್‌ಗಳು ಇದ್ದು, ವೈದ್ಯರು ಮತ್ತು ಸಹಾಯಕ ಸಿಬ್ಬಂದಿಗಳು ಸಹ ಇದ್ದಾರೆ.

      ಹಡಗಿನಲ್ಲಿ ವಿಶೇಷ ಐಸೋಲೇಷನ್ ವಾರ್ಡ್‌ಗಳನ್ನು ಸಹ ನಿರ್ಮಾಣ ಮಾಡಲಾಗಿದ್ದು, ಅಗತ್ಯವಿದ್ದರೆ ಅದನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಎರಡು ಹಂತದ ಕಾರ್ಯಾಚರಣೆ ಯಶಸ್ವಿಯಾದ ಬಳಿಕ ಇರಾನ್‌ನಲ್ಲಿರುವ ಭಾರತೀಯರನ್ನು ಕರೆತರುವ ಕಾರ್ಯಾಚರಣೆಯನ್ನು ನೌಕಾಪಡೆ ಆರಂಭಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+