ನ.21: ದೇಶ, ವಿದೇಶ ಸುದ್ದಿಗಳ ಚುಟುಕು ಸುದ್ದಿ
ಬೆಂಗಳೂರು, ನ.21: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
17.05: ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಾಲಿ ಡೈಲಿ ಮಾಲೀಕ, ಟಿಎಂಸಿ ಸಂಸದ ಬೋಸ್ ಅವರನ್ನು ಸಿಬಿಐ ತಂಡ ಬಂಧಿಸಿದೆ.

11.10: ಮುಂಬರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸುವುದಾಗಿ ವಿನೋದ್ ಕುಮಾರ್ ಬಿನ್ನಿ ಘೋಷಿಸಿದ್ದಾರೆ.

11.00: ಉತ್ತರಪ್ರದೇಶದ ರಾಮಪುರದಲ್ಲಿ ಮುಲಾಯಂ ಸಿಂಗ್ ಯಾದವ್ ಅವರ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಲಾಗುತ್ತಿದೆ. 75ನೇ ಹುಟ್ಟುಹಬ್ಬಕ್ಕೆ 75 ಅಡಿ ಎತ್ತರ ಕೇಕ್ ತಯಾರಿಸಲಾಗಿದೆ.
Rampur: Preparations for celebration of Mulayam Singh Yadav's birthday pic.twitter.com/cM6Bv3QxbK
— ANI (@ANI_news) November 21, 2014 10.45: ವಿಶ್ವಖ್ಯಾತ ತಾಜ್ ಮಹಲ್ ಸ್ಮಾರಕವನ್ನು ವಕ್ಫ್ ಬೋರ್ಡ್ ವಶಕ್ಕೆ ನೀಡುವಂತೆ ಅಜಾಂ ಖಾನ್ ಆಗ್ರಹ.
10.30: ನೈಜೀರಿಯಾ: ಬೋಕೋ ಹರಾಮ್ ದಾಳಿಗೆ ಕನಿಷ್ಠ 45 ಜನ ಅಮಾಯಕರು ಬಲಿಯಾಗಿದ್ದಾರೆ.












Click it and Unblock the Notifications