ದೇಶ ವಿದೇಶ ಸುದ್ದಿಗಳ ಶುಕ್ರವಾರದ ಚಿತ್ರಸಂಪುಟ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ, 05: ಆಫ್ರಿಕಾದ ತಾಂಜಾನಿಯಾ ವಿದ್ಯಾರ್ಥಿನಿ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಬೆಂಗಳೂರಿನ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ನಾನಾ ಘೋಷವಾಕ್ಯಗಳ ಪ್ಲೆಕಾರ್ಡ್ ಹಿಡಿದು ವಿರೋಧ ವ್ಯಕ್ತಪಡಿಸಿದರು.

ಅತ್ಯಾಚಾರವನ್ನು, ನಿಲ್ಲಿಸಿ, ಪ್ರೀತಿ ಮಾಡಿ, ಧೈರ್ಯವಿದ್ದಲ್ಲಿ ಹಿಂಸೆಗೆ ಕೊನೆ ಹೀಗೆ ನಾನಾ ಘೋಷವಾಕ್ಯಗಳ ಮೂಲಕ ಜನವರಿ 31ರಂದು ಹೆಸರಘಟ್ಟದಲ್ಲಿ ಹಲ್ಲೆಗೆ ಒಳಗಾದ ತಾಂಜಾನಿಯಾ ವಿದ್ಯಾರ್ಥಿನಿಗೆ ಬೆಂಬಲ ನೀಡಿದರು. ಆಕೆಯ ಪರ ದನಿಗೂಡಿಸಿದರು.

ತಾಂಜಾನಿಯಾ ವಿದ್ಯಾರ್ಥಿನಿಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಹಲವಾರು ಮಂದಿ ಆಕೆಗೆ ಸಾಥ್ ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿಯನ್ನು ಬಂಧಿಸಲಾಗಿದ್ದು, ಒಬ್ಬರು ಸಬ್ ಇನ್ಸ್ ಪೆಕ್ಟರ್ , ಇಬ್ಬರು ಪೇದೆಗಳು ಸೇರಿದಂತೆ ಮೂವರನ್ನು ಅಮಾನತುಗೊಳಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಎಸ್ ಮೇಘರಿಕ್ ತಿಳಿಸಿದ್ದಾರೆ.[ವಿದ್ಯಾರ್ಥಿನಿ ಮೇಲೆ ಹಲ್ಲೆ : 9 ಮಂದಿ ಬಂಧನ, ಮೂವರ ಅಮಾನತು]

ಕೈಗಾರಿಕೋದ್ಯಮ ರತನ್ ಟಾಟಾ, ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಹೀಗೆ ಇನ್ನಿತರ ವೈವಿಧ್ಯಮಯ, ವಿಭಿನ್ನ ಸುದ್ದಿಗಳು ಇಲ್ಲಿವೆ. [ಪಿಟಿಐ]

ತಾಂಜಾನಿಯಾ ವಿದ್ಯಾರ್ಥಿನಿ ಪರ ನಿಂತ ವಿದ್ಯಾರ್ಥಿಗಳು

ತಾಂಜಾನಿಯಾ ವಿದ್ಯಾರ್ಥಿನಿ ಪರ ನಿಂತ ವಿದ್ಯಾರ್ಥಿಗಳು

ತಾಂಜಾನಿಯಾ ವಿದ್ಯಾರ್ಥಿನಿ ಮೇಲೆ ನಡೆದ ಹಲ್ಲೆಯನ್ನು ನಾನಾ ಕಾಲೇಜಿನ ಹುಡುಗಿಯರು ಹಲವಾರು ಫ್ಲೇ ಕಾರ್ಡ್ ಹಾಗೂ ಮೇಣದ ಬತ್ತಿ ಹೊತ್ತಿಸಿ ವಿರೋಧಿಸಿದ್ದು, ಬೆಂಗಳೂರಿನಲ್ಲಿರುವ ಅಸುರಕ್ಷತೆ ವಿರುದ್ಧ ತಿರುಗಿಬಿದ್ದಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ರತನ್

ಮಾಧ್ಯಮದವರೊಂದಿಗೆ ಮಾತನಾಡಿದ ರತನ್

ಟಾಟಾ ಸಂಸ್ಥೆಯ ಮುಖ್ಯಸ್ಥರಾದ ಹಾಗೂ ಕೈಗಾರಿಕೋದ್ಯಮಿ ರತನ್ ಟಾಟಾ ಅವರು ಬೆಂಗಳೂರಿನ ಮಾಧ್ಯಮದವರೊಂದಿಗೆ ಸಂವಾದ ನಡೆಸಿದರು.

ಹೀಸ್ಮನ್ ಪೋಸ್ ನಲ್ಲಿ ನಗೆ ಬೀರಿದ ಒಬಾಮ

ಹೀಸ್ಮನ್ ಪೋಸ್ ನಲ್ಲಿ ನಗೆ ಬೀರಿದ ಒಬಾಮ

ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ, ಅಲಬಾಮ ವಿಶ್ವವಿದ್ಯಾನಿಲಯದ ಫುಟ್ಬಾಲ್ ಆಟಗಾರ ಹಾಗೂ ಹೀಸ್ಮನ್ ಟ್ರೋಫಿ ವಿಜೇತ ಡೆರಿಕ್ ಹೆನ್ರಿ ಹೀಸ್ಮನ್ ಪೋಸ್ ಕೊಟ್ಟು ತಾವು ಸಂತೋಷಪಟ್ಟರಲ್ಲದೇ ನೋಡುಗರನ್ನು ಖುಷಿ ಪಡಿಸಿದರು.

ಕಚೇರಿ ಕಾರ್ಯಕ್ಕೆ ಯೂಟ್ಯೂಬ್ ಚಾನಲ್

ಕಚೇರಿ ಕಾರ್ಯಕ್ಕೆ ಯೂಟ್ಯೂಬ್ ಚಾನಲ್

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಕಚೇರಿ ಕಾರ್ಯಕ್ಕೆ ಸಂಬಂಧಿಸಿದ ಯೂಟ್ಯೂಬ್ ಚಾನಲ್ ನ್ನು ನವದೆಹಲಿಯಲ್ಲಿ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಹಣಕಾಸು ಕಾರ್ಯದರ್ಶಿ ರತನ್ ಪಿ ವಾಟಾಳ್, ಶಕ್ತಿಕಾಂತ ದಾಸ್ ಮುಂತಾದಚರು ಉಪಸ್ಥಿತರಿದ್ದರು.

ಬ್ಯಾಂಕಾಕ್ ನಲ್ಲಿ ಉಪರಾಷ್ಟ್ರಪತಿ ಮತ್ತು ಅವರ ಪತ್ನಿ

ಬ್ಯಾಂಕಾಕ್ ನಲ್ಲಿ ಉಪರಾಷ್ಟ್ರಪತಿ ಮತ್ತು ಅವರ ಪತ್ನಿ

ಭಾರತದ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಹಾಗೂ ಇವರ ಪತ್ನಿ ಸಲ್ಮಾನ್ ಅನ್ಸಾರಿ ಬ್ಯಾಂಕಾಕ್ ನಲ್ಲಿರುವ ಬುದ್ಧ ದೇವಾಲಯ ನೋಡಲು ತೆರಳಿದ್ದಾರೆ.

ಸಾವಧಾನಗೊಂಡ ನವದೆಹಲಿಯ ಮುನಿಸಿಪಾಲಿಟಿ ಕೆಲಸಗಾರರು

ಸಾವಧಾನಗೊಂಡ ನವದೆಹಲಿಯ ಮುನಿಸಿಪಾಲಿಟಿ ಕೆಲಸಗಾರರು

ಸುಮಾರು ತಿಂಗಳಿನಿಂದ ಸಂಬಳ ನೀಡದಿರುವುದನ್ನು ವಿರೋಧಿಸಿ ನವದೆಹಲಿಯ ಮುನಿಸಿಪಾಲಿಟಿ ಕೆಲಸಗಾರರು (Municipality Corporation of Delhi) ಕೈಗೊಂಡ ಪ್ರತಿಭಟನೆ 10ನೇ ದಿನಕ್ಕೆ ಕಾಲಿಟ್ಟಿದ್ದು, ಇಡೀ ನವದೆಹಲಿ ಗಬ್ಬು ನಾರುತ್ತಿದ್ದು, ಸಾಮಾನ್ಯ ಜನರ ಗೋಳು ಹೇಳತೀರದಾಗಿದೆ. ಆದರೆ ಗೀತಕಾಲೋನಿಯಲ್ಲಿ ಸದ್ಯದ ಮಟ್ಟಿಗೆ ಮುಷ್ಕರ ನಿಲ್ಲಿಸಿದ್ದಾರೆ.

ಜರ್ಮನಿಯ ನಿರಾಶ್ರಿತರ ಶಿಬಿರದಿಂದ ವಾಪಸಾದ ಭಾರತೀಯ ಮಹಿಳೆ

ಜರ್ಮನಿಯ ನಿರಾಶ್ರಿತರ ಶಿಬಿರದಿಂದ ವಾಪಸಾದ ಭಾರತೀಯ ಮಹಿಳೆ

ಜರ್ಮನಿಯ ನಿರಾಶ್ರಿತರ ಶಿಬಿರದಲ್ಲಿ ಇಡಲಾಗಿದೆ ಎನ್ನಲಾಗುತ್ತಿದ್ದ ಭಾರತ ಮಹಿಳೆಯು ತನ್ನ ಎಂಟು ವರ್ಷದ ಮಗಳ ಜೊತೆ ಹರಿಯಾಣದ ಫರೀದಾಬಾದ್ ಗೆ ವಾಪಾಸ್ಸಾಗಿದ್ದು, ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Students from different colleges protest against the attack on a Tanzanian Girl, Industrialist Ratan Tata interacts with the media in Bengaluru. Municipality Corportaion of Delhi workers holding a unique protest at Geeta Colony in New Delhi 
Please Wait while comments are loading...