ಭಾರೀ ಮಳೆಗೆ ತತ್ತರಿಸಿದ ರಾಷ್ಟ್ರ ರಾಜಧಾನಿ: ಹಲವಾರು ಪ್ರದೇಶಗಳು ಜಲಾವೃತ, ಶಾಲೆಗಳು ಬಂದ್!
ನವದೆಹಲಿ ಜುಲೈ 26: ದೇಶದೆಲ್ಲೆಡೆ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಹಲವೆಡೆ ನದಿಗಳು ಉಕ್ಕಿ ಹರಿಯುತ್ತಿದ್ದು ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ದೆಹಲಿಯಲ್ಲಿ ಯಮುನಾ ನದಿ ಉಕ್ಕಿ ಹರಿಯುತ್ತಿದ್ದು ಕಳೆದ ಕೆಲ ದಿನಗಳಿಂದ ಅಲ್ಲಿನ ಜನರ ಪರಿಸ್ಥಿತಿ ಹೇಳತೀರದ್ದಾಗಿದೆ. ಈ ನಡುವೆ ಇಂದು ಭಾರೀ ಮಳೆ ಸುರಿದ್ದು ನಗರದ ಪ್ರಮುಖ ರಸ್ತೆಗಳು, ಮನೆಗಳು, ದೇವಸ್ಥಾನಗಳು ಜಲಾವೃತಗೊಂಡಿವೆ.
ದೆಹಲಿಯಲ್ಲಿ ಬುಧವಾರ ಗುಡುಗು ಮಿಂಚು ಸಹಿತವಾದ ಅಧಿಕ ಮಳೆಯಾಗಿದೆ. ಇದರಿಂದ ದೆಹಲಿಯಲ್ಲಿ ಬಿಸಿಲಿನ ವಾತಾವರಣ ವಿರಾಮವನ್ನು ತಂದಿದೆ. ಇಂದು ಸುರಿದ ಅಧಿಕ ಮಳೆಯಿಂದಾಗಿ ನೋಯ್ಡಾ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ನೋಯ್ಡಾ ಶಾಲೆಗಳು ಬಂದ್
ಭಾರೀ ಮಳೆಯಿಂದಾಗಿ ನೋಯ್ಡಾದ ಎಲ್ಲಾ ಶಾಲೆಗಳನ್ನು ಇಂದು ಮುಚ್ಚಲಾಗಿದೆ. ಹಲವಾರು ರಸ್ತೆಗಳು ಮತ್ತು ಪ್ರದೇಶಗಳು ಜಲಾವೃತವಾಗಿರುವ ಕಾರಣ ಭಾರೀ ಮಳೆಯ ಹಿನ್ನೆಲೆಯಲ್ಲಿ ನೋಯ್ಡಾ ಆಡಳಿತ ಬುಧವಾರ ಪ್ರದೇಶದ ಎಲ್ಲಾ ಶಾಲೆಗಳನ್ನು ಮುಚ್ಚಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
#WATCH | Rain lashes parts of the national capital. Visuals from Shantipath. pic.twitter.com/3uosfVnTa9
— ANI (@ANI) July 26, 2023
ಅಪಾಯದ ಮಟ್ಟ ಮೀರಿದ ಯಮುನಾ ನದಿ ನೀರು
ರಾಷ್ಟ್ರ ರಾಜಧಾನಿಯಲ್ಲಿ ಯಮುನಾ ನದಿಯು ಅಪಾಯದ ಮಟ್ಟವನ್ನು ತಲುಪುತ್ತಿದೆ. ಅಪಾಯದ ಮಟ್ಟಕ್ಕೇರಲು ಇನ್ನೂ ಕೆಲವು ಸೆಂಟಿಮೀಟರ್‌ಗಳಷ್ಟು ಕೆಳಗೆ ನದಿ ನೀರು ಹರಿಯುತ್ತಿದೆ. ಮಂಗಳವಾರ ರಾತ್ರಿ 10:00 ಗಂಟೆಗೆ ಹಳೆಯ ಯಮುನಾ ಸೇತುವೆಯ ಬಳಿ ಯಮುನಾ ನೀರಿನ ಮಟ್ಟವು 205.33 ಮೀಟರ್‌ಗಳ ಅಪಾಯದ ಗುರುತುಗೆ ವಿರುದ್ಧವಾಗಿ 205.24 ಮೀಟರ್‌ಗೆ ದಾಖಲಾಗಿದೆ. ಸಂಜೆ 7:00 ಗಂಟೆಗೆ 205.32 ಮೀಟರ್ ಆಗಿತ್ತು. ಇಂದು ಇದು ಅಪಾಯದ ಮಟ್ಟವನ್ನು ತಲುಪುವ ಸಾಧ್ಯತೆ ದಟ್ಟವಾಗಿದೆ.
#WATCH | UP: Noida wakes up to rain lashing parts of the city
— ANI UP/Uttarakhand (@ANINewsUP) July 26, 2023
(Visuals from Noida Sector 20) pic.twitter.com/MMBJ7ExuAa
ಹಿಂಡೋನ್ ನದಿ ನೀರಿನ ಮಟ್ಟದಲ್ಲಿ ಏರಿಕೆ
ಎಕೋಟೆಕ್ 3 ಬಳಿಯ ಪ್ರದೇಶವು ನೀರಿನ ಮಟ್ಟ ಹೆಚ್ಚಾದ ನಂತರ ಮುಳುಗಿದೆ ಎಂದು ದೃಶ್ಯಗಳು ತೋರಿಸಿವೆ. ಇದರಿಂದಾಗಿ ಅನೇಕ ವಾಹನಗಳು ನೀರಿನಲ್ಲಿ ಸಿಲುಕಿಕೊಂಡಿವೆ.
"ಹಿಂಡೋನ್ ನದಿಯ ನೀರಿನ ಮಟ್ಟ ಹೆಚ್ಚಾಗಿದೆ, ಇದರಿಂದಾಗಿ ಮನೆಗಳನ್ನು ಖಾಲಿ ಮಾಡುವಂತೆ ಜನರಿಗೆ ಮನವಿ ಮಾಡುತ್ತಿದ್ದೇವೆ'' ಎಂದು ಉಪ ಪೊಲೀಸ್ ಆಯುಕ್ತ (ಸೆಂಟ್ರಲ್ ನೋಯ್ಡಾ) ಅನಿಲ್ ಯಾದವ್ ಅವರು ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.

ಮುಳುಗಡೆಯಾದ ಪ್ರದೇಶದ ಬಗ್ಗೆ ಮಾತನಾಡಿದ ಡಿಸಿಪಿ ಯಾದವ್, ಓಲಾ ಕಂಪನಿಯ ಡಂಪ್ ಯಾರ್ಡ್‌ನಲ್ಲಿ ಹಳೆಯ ಮತ್ತು ಹಾನಿಗೊಳಗಾದ ವಾಹನಗಳನ್ನು ಇಡಲಾಗಿದೆ. ವಾಹನಗಳನ್ನು ತೆಗೆಯುವಂತೆ ಅವರಿಗೆ ಪೊಲೀಸ್ ಆಡಳಿತ 2 ಬಾರಿ ನೋಟಿಸ್ ನೀಡಿತ್ತು. ಸುತ್ತಮುತ್ತಲಿನ ಗ್ರಾಮಗಳನ್ನು ಸ್ಥಳಾಂತರಿಸಲಾಗಿದೆ. ಯಾವುದೇ ರೀತಿಯ ಪ್ರಾಣಹಾನಿಯಾಗಿಲ್ಲ' ಎಂದರು. ಹಿಂಡನ್ (Hindon) ಯಮುನಾ ನದಿಯ ಉಪನದಿಯಾಗಿದೆ.












Click it and Unblock the Notifications