ರಾಯ್ ಪುರ್ ನಲ್ಲಿ ಹುಲಿ ಫೋಟೋ ತೆಗೆದ ಪ್ರಧಾನಿ ಮೋದಿ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ರಾಯ್ ಪುರ್, ನವೆಂಬರ್ 1: ಇದು ಅಪರೂಪದ ಚಿತ್ರ. ಎಲ್ಲ ಬಿಡುವಿಲ್ಲದ ಕೆಲಸಗಳ ಮಧ್ಯೆಯೂ ಪ್ರಧಾನಿ ನರೇಂದ್ರ ಮೋದಿ ಫೋಟೋಗ್ರಾಫರ್ ಆಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಜೋರಾಗಿ ಹರಿದಾಡುತ್ತಿದೆ. ಛತ್ತೀಸ್ ಗಢದ ನಂದನ್ ವನ್ ಜಂಗಲ್ ಸಫಾರಿ ವೇಳೆ ನರೇಂದ್ರ ಮೋದಿ ಅವರು ಹುಲಿಯೊಂದರ ಫೋಟೋ ತೆಗೆದಿದ್ದಾರೆ.

ಕ್ಯಾಮೆರಾ ಲೆನ್ಸ್ ಗೆ ಮುಖ ಮಾಡಿ ನಿಂತಿರುವ ಹುಲಿಯ ಕ್ಲೋಸ್ ಅಪ್ ಫೋಟೋ ಕ್ಲಿಕ್ಕಿಸುವುದರಲ್ಲಿ ನಿರತರಾದ ಪ್ರಧಾನಿಗಳ ಫೋಟೋ ಸದ್ಯಕ್ಕೆ ವೈರಲ್ ಆಗಿದೆ. ಮುಖ್ಯಮಂತ್ರಿ ರಮಣ್ ಸಿಂಗ್ ಜತೆಗೆ, ವಿವಿಧ ಯೋಜನೆಗಳು ಹಾಗೂ ಹೊಸ ಬಂಡವಾಳ ಹೂಡಿಕೆಯನ್ನು ಉತ್ತೇಜಿಸಲು ಮೋದಿ ಅಲ್ಲಿಗೆ ತೆರಳಿದ್ದರು. 'ಛತ್ತೀಸ್ ಗಢದಲ್ಲಿ ಪ್ರವಾಸೋದ್ಯಮಕ್ಕೆ ಉತ್ತಮ ಅವಕಾಶಗಳಿವೆ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.[ವೈರಲ್ ವಿಡಿಯೋ: ಹುಲಿಗೆ ಆಹಾರವಾದ ಕಾರಿನಿಂದ ಇಳಿದ ಮಹಿಳೆ]

Modi-tiger

ಈ ದಿನ ನಮ್ಮ ಪ್ರೀತಿಯ ಅಟಲ್ ಜೀ ಅವರ ಕೆಲಸವನ್ನು ಸ್ಮರಿಸಬೇಕು. ಛತ್ತೀಸ್ ಗಢವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಿದವರು ಅವರು ಎಂದು ಮೋದಿ ಬರೆದುಕೊಂಡಿದ್ದಾರೆ. ಜಂಗಲ್ ಸಫಾರಿ ರಮಣ್ ಸಿಂಗ್ ಅವರ ನೆಚ್ಚಿನ ಯೋಜನೆ ಎಂದು ಬಣ್ಣಿಸಿದ್ದಾರೆ ಮೋದಿ. ಇದು ಎಂಟು ನೂರು ಎಕರೆಗೂ ಹೆಚ್ಚು ಪ್ರದೇಶದಲ್ಲಿ ವ್ಯಾಪಿಸಿದೆ. ಹುಲಿಯ ಜತೆಗೆ ಕರಡಿ, ಜಿಂಕೆ, ಚಿಂಪಾಂಜಿ ಮತ್ತಿತರ ಪ್ರಾಣಿಗಳು ಇಲ್ಲಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Narendra Modi tried his hand at wildlife photography when he visited the Nandan Van Jungle Safari in Chhattisgarh on Tuesday. In images widely shared on social media, he was seen squinting into the camera and leaning close for a shot, with a tiger staring into the lens.
Please Wait while comments are loading...