ಚಿತ್ರಗಳಲ್ಲಿ: ಅಡ್ವಾಣಿಗೆ ಥ್ಯಾಂಕ್ಸ್ ಹೇಳಿದ ಮೋದಿ
ಅಹಮದಾಬಾದ್, ಅ.17: 'ನನ್ನ ಕ್ಷೇತ್ರಕ್ಕೆ ಬಂದು ನಾಲ್ಕು ಹಿತವಚನ ನೀಡಿದ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅವರ ಆಶಯದಂತೆ 2014ರ ಚುನಾವಣೆಯಲ್ಲಿ ಬಿಜೆಪಿ ಬದಲಾವಣೆ ತರಲಿದೆ' ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಬುಧವಾರ ಇನ್ಸ್ಟಿಟ್ಯೂಟ್ ಆಫ್ ಇನ್ಫ್ರಾಸ್ಟಕ್ಚರ್ ಟೆಕ್ನಾಲಜಿ, ರಿಸರ್ಚ್ ಹಾಗೂ ಮ್ಯಾನೇಜ್ಮೆಂಟ್ ಉದ್ಘಾಟನಾ ಸಮಾರಂಭದಲ್ಲಿ ಬಿಜೆಪಿ ನಾಯಕ ಅಡ್ವಾಣಿ ಅವರು ಪಾಲ್ಗೊಂಡು ಮೋದಿ ಅವರೊಡನೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು.
'ಮೋದಿ ಅವರು ಪ್ರಧಾನಿಯಾದರೆ ಒಳ್ಳೆಯದು, ಬಿಜೆಪಿ ಬದಲಾವಣೆ ತರಲಿದೆ' ಎಂದು ತಮ್ಮ ಭಾಷಣದಲ್ಲಿ ಹೇಳುವ ಮೂಲಕ ಅಡ್ವಾಣಿ ಎಲ್ಲರನ್ನು ಚಕಿತಗೊಳಿಸಿದ್ದರು.
ಮುನಿಸು ಅಂತ್ಯ: ಬಿಜೆಪಿಯಿಂದ ಪ್ರಧಾನಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಮುನಿಸಿಕೊಂಡಿದ್ದ ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಆಡ್ವಾಣಿ ಅವರೀಗ ತಣ್ಣಗಾಗಿದ್ದಾರೆ. ಪ್ರಧಾನಿ ಅಭ್ಯರ್ಥಿಯಾಗಿ ಇದೇ ಮೊದಲ ಬಾರಿಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಹಿರಿಯ ಮುಖಂಡ ಬಹಿರಂಗವಾಗಿ ಬೆಂಬಲಿಸಿದ್ದಾರೆ. 'ಕೇಂದ್ರದಲ್ಲಿ ಸರ್ಕಾರ ನಡೆಸಲು ಬಿಜೆಪಿಗೆ ಮತ್ತೊಂದು ಅವಕಾಶ ಸಿಕ್ಕರೆ ಮೋದಿ ಅವರನ್ನು ಪ್ರಧಾನಿ ಸ್ಥಾನದಲ್ಲಿ ನೋಡಲು ಇಷ್ಟಪಡುತ್ತೇನೆ' ಎಂದು ಹೇಳಿದ್ದರು.

ಅಡ್ವಾಣಿ ಹಾಗೂ ಮೋದಿ
ಅಹಮದಾಬಾದ್ ನಲ್ಲಿ ಮೂಲಸೌಲಭ್ಯ, ತಂತ್ರಜ್ಞಾನ, ಸಂಶೋಧನೆ ಮತ್ತು ಮ್ಯಾನೇಜ್ ಮೆಂಟ್ ಶಿಕ್ಷಣ ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ಬುಧವಾರ ಆಡ್ವಾಣಿ ಈ ವಿಚಾರ ತಿಳಿಸಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಆಡ್ವಾಣಿ ಹೊಗಳಿಕೆ
ಮೂಲಸೌಲಭ್ಯವನ್ನು ಒಂದು ಪಠ್ಯವಾಗಿ ಬೋಧಿಸುವ ಸಂಸ್ಥೆಗಳು ದೇಶದ ಇತರೆಡೆ ಎಲ್ಲಾದರೂ ಇವೆಯೇ ಎಂದು ನಾನು ಸಂಸ್ಥೆಯ ಅಧಿಕಾರಿಗಳಲ್ಲಿ ಪ್ರಶ್ನಿಸಿದೆ. ಅವರಿಂದ ಇಲ್ಲ ಎನ್ನುವ ಉತ್ತರ ಬಂತು. ನರೇಂದ್ರ ಮೋದಿ ಅವರ ಚಿಂತನೆ ಯಾವತ್ತೂ ಹೊಸತರ ಕಡೆಗೆ ತುಡಿಯುತ್ತಿರುತ್ತದೆ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಆಡ್ವಾಣಿ ಹೊಗಳಿದ್ದಾರೆ.

ಆಡ್ವಾಣಿ ಹೊಗಳಿಕೆ
ಮೂಲಸೌಲಭ್ಯವನ್ನು ಒಂದು ಪಠ್ಯವಾಗಿ ಬೋಧಿಸುವ ಸಂಸ್ಥೆಗಳು ದೇಶದ ಇತರೆಡೆ ಎಲ್ಲಾದರೂ ಇವೆಯೇ ಎಂದು ನಾನು ಸಂಸ್ಥೆಯ ಅಧಿಕಾರಿಗಳಲ್ಲಿ ಪ್ರಶ್ನಿಸಿದೆ. ಅವರಿಂದ ಇಲ್ಲ ಎನ್ನುವ ಉತ್ತರ ಬಂತು. ನರೇಂದ್ರ ಮೋದಿ ಅವರ ಚಿಂತನೆ ಯಾವತ್ತೂ ಹೊಸತರ ಕಡೆಗೆ ತುಡಿಯುತ್ತಿರುತ್ತದೆ ಎನ್ನುವುದಕ್ಕೆ ಇದು ಸಾಕ್ಷಿ ಎಂದು ಆಡ್ವಾಣಿ ಹೊಗಳಿದ್ದಾರೆ.

ವಿದೇಶದಲ್ಲೂ ಮೆಚ್ಚುಗೆ
ಗುಜರಾತ್ ನಲ್ಲಿ ಮೋದಿ ಮಾಡಿದ ಕೆಲಸಕ್ಕೆ ದೇಶ ಮಾತ್ರವಲ್ಲದೆ ವಿದೇಶದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ ಎಂದಿದ್ದಾರೆ ಆಡ್ವಾಣಿ. ಪ್ರಧಾನಿ ಅಭ್ಯರ್ಥಿ ಘೋಷಣೆಯಾದ ಬಳಿಕ ಮೋದಿ ಹಾಗೂ ಆಡ್ವಾಣಿ ಒಂದೇ ವೇದಿಕೆ ಹಂಚಿಕೊಂಡಿದ್ದು ಇದೇ ಮೊದಲಲ್ಲ.ಆದರೆ, ಪ್ರಧಾನಿ ಅಭ್ಯರ್ಥಿಯಾಗಿ ಮೋದಿ ಅವರನ್ನು ಆಡ್ವಾಣಿ ಬಹಿರಂಗವಾಗಿ ಬೆಂಬಲಿಸಿದ್ದು ಮಾತ್ರ ಇದೇ ಮೊದಲು.

ವಿವಿಧ ಕಾರ್ಯಕ್ರಮದಲ್ಲಿ ಭಾಗಿ
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರು ರಿವರ್ ಪಾರ್ಕ್ ಉದ್ಘಾಟನೆ ನಂತರ ಕಂಡಿದ್ದು ಹೀಗೆ

ಯುಪಿಎ ವಿರುದ್ಧ ವಾಗ್ದಾಳಿ
ಕೇಂದ್ರದ ವಿರುದ್ಧವಾಗಿರುವ ರಾಜ್ಯಗಳು ಸಮಸ್ಯೆ ಎದುರಿಸುತ್ತಿವೆ. ಈ ಮೂಲಕ ಕೇಂದ್ರ ಸರ್ಕಾರ ಕಾಂಗ್ರೇಸೇತರ ಪಕ್ಷ ಆಡಳಿತದಲ್ಲಿರುವ ರಾಜ್ಯಗಳ ವಿರುದ್ಧ ತಾರತಮ್ಯ ಎಸಗುತ್ತಿದೆ ಎಂದು ಮೋದಿ ಆರೋಪಿಸಿದರು. ಆಡ್ವಾಣಿ ಅವರು 2014ರಲ್ಲಿ ಬದಲಾವಣೆಯ ಭರವಸೆ ವ್ಯಕ್ತಪಡಿಸಿದ್ದಾರೆ. ಆಡ್ವಾಣಿ ಅವರ ಮಾತಿನ ಮೇಲೆ ನನಗೆ ನಂಬಿಕೆ ಇದೆ

ಪ್ರತಿಭಟನೆ
ಅಹಮದಾಬಾದಿನ ಖೊಖ್ರಾ ಪ್ರದೇಶದಲ್ಲಿಎನ್ ಎಸ್ ಯುಐ ಕಾರ್ಯಕರ್ತರು ಕಪ್ಪು ಬಾವುಟ ಹಿಡಿದು ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ ಹಾಗೂ ನರೇಂದ್ರ ಮೋದಿ ವಿರುದ್ಧ ಪ್ರತಿಭಟನೆ ನಡೆಸಿದರು.












Click it and Unblock the Notifications