ಮೋದಿ ಮನದ ಮಾತು: ಬರಗಾಲ, ಅರಣ್ಯ ರಕ್ಷಣೆಗೆ ಅದ್ಯತೆ

Posted By:
Subscribe to Oneindia Kannada

ನವದೆಹಲಿ, ಮೇ 22: ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಪ್ರವಾಸಕ್ಕೆ ತೆರಳುವ ಮುನ್ನ ಆಕಾಶವಾಣಿಯಲ್ಲಿ ತಮ್ಮ ಮನದ ಮಾತುಗಳನ್ನು ಬಿತ್ತರಿಸಿದ್ದಾರೆ. 20ನೇ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಭಾನುವಾರದಂದು ಬರಗಾಲ, ಅರಣ್ಯ ಸಂರಕ್ಷಣೆ, ಒಲಿಂಪಿಕ್ಸ್ಮ್, ಯೋಗ, ಪರೀಕ್ಷೆ ಫಲಿತಾಂಶ ಮುಂತಾದ ವಿಷಯಗಳ ಬಗ್ಗೆ ಭಾಷಣ ಮಾಡಿದರು. ಮೋದಿ ಅವರ ಮನದ ಮಾತಿನ ಮುಖ್ಯಾಂಶ ಇಲ್ಲಿದೆ:

* ಆಕಾಶವಾಣಿ ಮೂಲಕ ನಾನು ದೇಶದ ವಿವಿಧ ಕಡೆ ಇರುವ ಜನರನ್ನು ತಲುಪಲು ಸಾಧ್ಯವಾಗುತ್ತಿದೆ. ಜನರು ತಮ್ಮ ಸಮಸ್ಯೆಗಳನ್ನು ನನಗೆ ಪತ್ರ, ಇಮೇಲ್, mygov ವೆಬ್ ಸೈಟ್, ನರೇಂದ್ರ ಮೋದಿ ಅಪ್ಲಿಕೇಷನ್ ಮೂಲಕ ತಲುಪಿಸುತ್ತಿದ್ದಾರೆ.[ಮುಂಗಾರು ಪ್ರವೇಶ ಒಂದು ವಾರ ವಿಳಂಬ]

* ಅರಣ್ಯ ನಾಶದಿಂದ ನಗರ ಪ್ರದೇಶಗಳಲ್ಲಿ ತಾಪಮಾನ ಹೆಚ್ಚಳವಾಗಿದೆ. ಈ ಬಾರಿ ಮುಂಗಾರು ಮಳೆ ಕೂಡಾ ವಿಳಂಬವಾಗಲಿದೆ ಎಂಬ ಸುದ್ದಿ ಮಾಧ್ಯಮಗಳ ಮೂಲಕ ತಿಳಿದು ಆತಂಕ ಹೆಚ್ಚಿದೆ.

Narendra Modi's radio address 20th 'Mann ki Baat'Highlights

* ಇತ್ತೀಚೆಗೆ ಬರಗಾಲ ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿ ಈ ಬಗ್ಗೆ ಚರ್ಚಿಸಲಾಯಿತು.
* ಈ ಬಗ್ಗೆ ಇನ್ನಷ್ಟು ಸಭೆ ನಡೆಸಿ ಪ್ರತಿ ರಾಜ್ಯದ ಮುಖ್ಯಮಂತ್ರಿ ಜೊತೆಗೆ ಪ್ರತ್ಯೇಕ ಸಭೆ ನಡೆಸಲು ಉದ್ದೇಶಿಸಿದ್ದೇನೆ.
* ಅನೇಕ ರಾಜ್ಯಗಳಲ್ಲಿ ಬರಗಾಲದ ವಿರುದ್ಧ ಪಕ್ಷಾತೀತವಾಗಿ ಹೋರಾಟ ನಡೆಸಿರುವುದು ಕಂಡು ಬಂದಿದೆ. ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.[ಉತ್ತರಾಖಂಡ ಒಂದೇ ಅಲ್ಲ ಉತ್ತರ ಕನ್ನಡವು ಸುಡ್ತಿದೆ!]
* ಈ ನಿಟ್ಟಿನಲ್ಲಿ ಗುಜರಾತ್ ಹಾಗೂ ಆಂಧ್ರಪ್ರದೇಶ ಸರ್ಕಾರಗಳು, ಜಲ ಸಂರಕ್ಷಣೆ ಹಾಗೂ ಅರಣ್ಯ ರಕ್ಷಣೆ ಮಾಡಲು ತಂತ್ರಜ್ಞಾನ ಬಳಕೆ ಮಾಡಿ ಮೆಚ್ಚುಗೆ ಕಾರ್ಯವನ್ನು ಮಾಡಿವೆ.
* ಉತ್ತರಾಖಂಡ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಹಿಮಾಲಯದ ಅನೇಕ ಕಡೆ ಕಾಡ್ಗಿಚ್ಚಿಗೆ ಅಪಾರವಾದ ವನ್ಯಸಂಪತ್ತು ನಾಶವಾಗಿದೆ. ['ಸುಡುತ್ತಿರುವ ಪಶ್ಚಿಮ ಘಟ್ಟ ಮೊದಲು ಉಳಿಸಿಕೊಳ್ಳಿ']
* ಮುಂಗಾರು ಪ್ರವೇಶದ ನಂತರ ಜೂನ್, ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ ಜಲ ಸಂರಕ್ಷಣೆಗೆ ಹೆಚ್ಚಿನ ಮಹತ್ವ ನೀಡಬೇಕಿದೆ.

ಮೋದಿ ಅವರ 'ಮನ್ ಕಿ ಬಾತ್' ಕೇಳಿಸಿಕೊಳ್ಳಿ:

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Highlights of Prime Minister Narendra Modi's 20th edition of radio address 'Mann ki Baat' on Sunday(May 22)
Please Wait while comments are loading...