ಗಾಂಧಿನಗರದಲ್ಲಿ ಮೋದಿ ತಾಯಿಯಿಂದ ನೋಟು ಎಕ್ಸ್ ಚೇಂಜ್

Posted By:
Subscribe to Oneindia Kannada

ಗಾಂಧಿನಗರ(ಗುಜರಾತ್), ನವೆಂಬರ್ 15: ಪ್ರಧಾನಿ ನರೇಂದ್ರ ಮೋದಿ ಅವರು ತಾಯಿ ಹೀರಾಬೇನ್ ಅವರು ಗಾಂಧಿನಗರ ಬ್ಯಾಂಕೊಂದರಲ್ಲಿ ಮಂಗಳವಾರ ಹಳೆ ನೋಟುಗಳನ್ನು ಬದಲಾಯಿಸಿಕೊಂಡಿದ್ದಾರೆ.

ವಯೋವೃದ್ಧೆ ಹೀರಾಬೇನ್ ಅವರು ಹಳೆ ನೊಟುಗಳನ್ನು ತಮ್ಮ ಕೈಲಿ ಹಿಡಿದುಕೊಂಡು ಗಾಲಿ ಚಕ್ರದಲ್ಲಿ ಕುಳಿತು ತಮ್ಮ ಸರದಿಯಾಗಿ ಬ್ಯಾಂಕಿನ ಮುಂದೆ ಕಾಯುತ್ತಿರುವ ಚಿತ್ರವನ್ನು ಎಎನ್ ಐ ಟ್ವೀಟ್ ಮಾಡಿದೆ.

Narendra Modi's mother at bank to exchange notes

ನಂತರ ಬ್ಯಾಂಕಿನಿಂದ 4,500 ರು ಬದಲಾಯಿಸಿಕೊಂಡು ಬ್ಯಾಂಕಿನಿಂದ ತೆರಳಿದ್ದಾರೆ.


ನವೆಂಬರ್ 8 ರ ಮಧ್ಯರಾತ್ರಿಯಿಂದ 500 ರೂ ಹಾಗೂ 1000 ರೂಪಾಯಿ ನೋಟುಗಳ ಬಳಕೆ ನಿಷೇಧಿಸಿ ಪ್ರಧಾನಿ ಮೋದಿ ಅವರು ಆದೇಶ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

90 ವರ್ಷ ವಯಸ್ಸಿನ ಹೀರಾಬೇನ್ ಅವರು ಎಲ್ಲರಂತೆ ಸರತಿ ಸಾಲಿನಲ್ಲಿ ಕಾದಿದ್ದು ತಮ್ಮ ಸರದಿ ಬಂದಾಗ ಹಣ ವಿನಿಯಮ ಮಾಡಿಕೊಂಡಿದ್ದಾರೆ.

2000 ರೂಪಾಯಿಯ ಹೊಸ ನೋಟು ಕೈಗೆ ಬಂದ ತಕ್ಷಣ ನೋಟಿನೊಂದಿಗೆ ಫೋಟೊ ತೆಗೆಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮೋದಿ ಅವರ ಕುಟುಂಬಸ್ಥರು ಅವರಿಗೆ ನೆರವಾಗಿದ್ದಾರೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Narendra Modi's mother Heeraben Modi was seen at a bank on Tuesday to exhange currency. Heeraben was seen carrying old currency in her hand as she waited for her turn and was later seen exchanging the notes at a counter.
Please Wait while comments are loading...