ದೇಶಕ್ಕೆ ನೆಹರು ನೀಡಿದ ಕೊಡುಗೆ ಸ್ಮರಿಸುತ್ತೇವೆ: ನರೇಂದ್ರ ಮೋದಿ

Recommended Video

      ಜವಾಹರ‌ಲಾಲ್ ನೆಹರು ಅವರನ್ನ ನೆನಪಿಸಿಕೊಂಡ ನರೇಂದ್ರ ಮೋದಿ | Oneindia Kannada

      ವಾರಣಾಸಿ, ಮೇ 27: ಸ್ವತಂತ್ರ್ಯ ಭಾರತದ ಮೊದಲ ಪ್ರಧಾನಿ ಜವಾಹಾರ್‌ ಲಾಲ್ ನೆಹರು ಅವರು ಪುಣ್ಯ ತಿಥಿ ಅಂಗವಾಗಿ ಇಂದು ನರೇಂದ್ರ ಮೋದಿ ಅವರು ನೆಹರೂ ಅವರನ್ನು ನೆನಪಿಸಿಕೊಂಡು ಟ್ವೀಟ್ ಮಾಡಿದ್ದಾರೆ.

      ನೆಹರು ಅವರ ಪುಣ್ಯತಿಥಿಯಂದು ಅವರಿಗೆ ಗೌರವ ಸಲ್ಲಿಸುತ್ತೇವೆ, ಅವರು ದೇಶಕ್ಕೆ ನೀಡಿದ ಕೊಡುಗೆಗಳನ್ನು ಸದಾ ಸ್ಮರಿಸುತ್ತೇವೆ ಎಂದು ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.

      ನರೇಂದ್ರ ಮೋದಿ ಅವರು ಇಂದು ವಾರಣಾಸಿಯಲ್ಲಿದ್ದು, ವಿವಿಧ ಪೂಜೆ ಮತ್ತು ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಇದರ ನಡುವೆ ಟ್ವೀಟ್ ಮಾಡಿ ನೆಹರೂ ಅವರನ್ನು ನೆನಪಿಸಿಕೊಂಡಿದ್ದಾರೆ.

      ಮೋದಿ ಅವರು ಕೆಲವು ದಿನಗಳ ಹಿಂದಷ್ಟೆ ಚುನಾವಣಾ ಪ್ರಚಾರದ ಸಮಯದಲ್ಲಿ ಇದೇ ನೆಹರೂ ಅವರನ್ನು ಟೀಕಿಸಿದ್ದರು. ನೆಹರು ಅಸೂಕ್ಷ್ಮ ಪ್ರಧಾನಿ ಆಗಿದ್ದರು ಎಂದು ಜರಿದಿದ್ದರು. ಅಷ್ಟೆ ಅಲ್ಲದೆ ಕಾಂಗ್ರೆಸ್ ಭಾರತವನ್ನು ಹಾವಾಡಿಗರ ದೇಶವೆಂದು ಬಿಂಬಿಸಿತ್ತು ಎಂದು ನೆಹರು ಅವರ ಮೇಲೆ ವಾಗ್ದಾಳಿ ನಡೆಸಿದ್ದರು.

      vaNarendra Modi rememberd Jawaharlal Nehru through twitter

      ಹಿಂದೊಮ್ಮೆ 'ಗುಲಾಬಿಯನ್ನು ಧರಿಸುತ್ತಿದ್ದ ವ್ಯಕ್ತಿಗೆ ಉದ್ಯಾನಗಳ ಬಗ್ಗೆ ಮಾಹಿತಿ ಇತ್ತಷ್ಟೆ ವಿನಃ ರೈತರ ಬಗ್ಗೆ ಕಾಳಜಿ ಇರಲಿಲ್ಲ, ಹಾಗಾಗಿ ಭಾರತದ ರೈತರು ಇನ್ನೂ ಕಷ್ಟದಲ್ಲಿದ್ದಾರೆ' ಎಂದು ನೆಹರು ಹೆಸರು ಹೇಳಿದೆ ಟೀಕಿಸಿದ್ದರು.

      ಆದರೆ ಇಂದು ಪ್ರಧಾನಿ ಅವರು ನೆಹರು ಅವರು ದೇಶಕ್ಕೆ ಕೊಡುಗೆ ನೀಡಿದ್ದಾರೆ. ಆ ಕೊಡಗೆಯನ್ನು ನಾವು ಮರೆಯುವುದಿಲ್ಲ ಎಂದು ಹೇಳಿ, ಅವರಿಗೆ ಗೌರವ ಸಲ್ಲಿಸುವುದಾಗಿಯೂ ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+