ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವಿರುದ್ಧ ಹೋರಾಟ ಸಾಮೂಹಿಕವಾಗಿ ಯಶಸ್ವಿಯಾಗುತ್ತಿದೆ; ಮೋದಿ

|
Google Oneindia Kannada News

ನವದೆಹಲಿ, ಮೇ 30; "ಇಡೀ ದೇಶ ಸಂಪೂರ್ಣವಾಗಿ ಹೇಗೆ ಕೋವಿಡ್ ವಿರುದ್ಧ ಹೋರಾಡುತ್ತಿದೆ ಎಂಬುದನ್ನು ನೋಡಿದ್ದೀರಿ. 100 ವರ್ಷದಲ್ಲಿಯೇ ಇದು ದೊಡ್ಡ ಸಾಂಕ್ರಾಮಿಕ ರೋಗವಾಗಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ 'ಮನ್ ಕೀ ಬಾತ್' ತಿಂಗಳ ರೇಡಿಯೋ ಕಾರ್ಯಕ್ರಮದ ಮೂಲಕ ಭಾನುವಾರ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಎನ್‌ಡಿಎ ಮೈತ್ರಿಕೂಟದ 2ನೇ ಅವಧಿಯ 24ನೇಯ ಮನ್ ಕೀ ಕಾರ್ಯಕ್ರಮ ಇದಾಗಿದೆ.

ಕುವೈತ್ ದೇಶದಿಂದ ಶಿವಮೊಗ್ಗಕ್ಕೆ ಬಂತು ಆಕ್ಸಿಜನ್ ಕಂಟೈನರ್ಕುವೈತ್ ದೇಶದಿಂದ ಶಿವಮೊಗ್ಗಕ್ಕೆ ಬಂತು ಆಕ್ಸಿಜನ್ ಕಂಟೈನರ್

"ಹಲವು ಚಂಡಮಾರುತ, ರೋಗುಗಳು ದೇಶವನ್ನು ಕಾಡಿವೆ. ಈಗ ತಂತ್ರಜ್ಞಾನದ ಸಹಾಯದಿಂದಾಗಿ ಚಂಡಮಾರುತದ ನಷ್ಟಗಳನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ತೌಕ್ತೆ, ಯಾಸ್ ಚಂಡಮಾರುತವನ್ನು ನಾವು ಕಳೆದ 10 ದಿನದಲ್ಲಿ ಎದುರಿಸಿದ್ದೇವೆ" ಎಂದು ಪ್ರಧಾನಿ ಮೋದಿ ತಿಳಿಸಿದರು.

224 ಆಕ್ಸಿಜನ್ ಎಕ್ಸ್‌ಪ್ರೆಸ್‌ ರೈಲು ಒದಗಿಸಿದ ಪ್ರಾಣವಾಯು ಎಷ್ಟು? 224 ಆಕ್ಸಿಜನ್ ಎಕ್ಸ್‌ಪ್ರೆಸ್‌ ರೈಲು ಒದಗಿಸಿದ ಪ್ರಾಣವಾಯು ಎಷ್ಟು?

Narendra Modi Mann Ki Baat May 30 Highlights in Kannada

"ಸವಾಲು ಎಷ್ಟು ದೊಡ್ಡದಾಗಿರಲಿ. ಅದರ ಜೊತೆ ಹೋರಾಡುವ ನಮ್ಮ ಸಾಮೂಹಿಕ ಶಕ್ತಿಯೂ ಅಷ್ಟೇ ದೊಡ್ಡದಾಗಿರುತ್ತದೆ. ವೈದ್ಯರು, ನರ್ಸ್‌ಗಳು 24 ಗಂಟೆಗಳ ಕಾಲ ಜನರ ಜೀವ ಉಳಿಸಲು ಹೋರಾಡುತ್ತಿದ್ದಾರೆ" ಎಂದರು.

ಮೋದಿ ಭಾಷಣದ ಮುಖ್ಯಾಂಶಗಳು

* "ಆಕ್ಸಿಜನ್ ಉತ್ಪಾದನೆ ಮತ್ತು ಅದರ ಸಾಗಣೆ ಬಹಳ ಅಪಾಯಕಾರಿಯಾದ ಕೆಲಸವಾಗಿದೆ. ಆದರೆ ಟ್ಯಾಂಕರ್ ಡ್ರೈವರ್‌ಗಳು ತಮ್ಮ ಜೀವದ ಹಂಗನ್ನು ತೊರೆದು ಕೆಲಸ ಮಾಡುತ್ತಿದ್ದಾರೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ವೀರಪ್ಪನ್‌ ಹುಟ್ಟೂರಲ್ಲಿ ಲಸಿಕೆ ಭಯ; ಕೋವಿಡ್ ಪರೀಕ್ಷೆಗೂ ಒಪ್ಪದ ಜನ ವೀರಪ್ಪನ್‌ ಹುಟ್ಟೂರಲ್ಲಿ ಲಸಿಕೆ ಭಯ; ಕೋವಿಡ್ ಪರೀಕ್ಷೆಗೂ ಒಪ್ಪದ ಜನ

* ಮನ್ ಕೀ ಬಾತ್‌ನಲ್ಲಿಉತ್ತರ ಪ್ರದೇಶದ ದಿನೇಶ್ ಬಾಲೂಲ್‌ನಾಥ್ ಉಪಾಧ್ಯಯ ಪ್ರಧಾನಿ ಜೊತೆ ಮಾತನಾಡಿದರು. 15 ವರ್ಷಗಳಿಂದ ಅವರು ಟ್ಯಾಂಕರ್ ಚಾಲಕರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.

* ಸಮಯಕ್ಕೆ ಸರಿಯಾಗಿ ಗುರಿಯನ್ನು ತಲುಪುವುದು ನಮ್ಮ ಉದ್ದೇಶ. ನಾವು ಸರಿಯಾದ ಸಮಯಕ್ಕೆ ಹೋದರೆ ಹಲವಾರು ಜನರ ಜೀವ ಉಳಿಯುತ್ತದೆ. ಅದು ನಮಗೆ ನೆಮ್ಮದಿಯ ಕೆಲಸವಾಗಿದೆ ಎಂದು ದಿನೇಶ್ ಬಾಲೂಲ್‌ನಾಥ್ ಉಪಾಧ್ಯಯ ಹೇಳಿದರು.

* ಆಕ್ಸಿಜನ್ ಸರಬರಾಜು ಮಾಡುವುದು ಮಹತ್ವದ ಕೆಲಸವಾಗಿದೆ. ಆಕ್ಸಿಜನ್ ಸಾಗಣೆಗೆ ರೈಲ್ವೆ ಕೈ ಜೋಡಿಸಿದೆ, ಮಹಿಳೆಯರೇ ಕೆಲವು ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲನ್ನು ಓಡಿಸುತ್ತಿದ್ದಾರೆ. ರಸ್ತೆ ಮಾರ್ಗಕ್ಕಿಂತ ವೇಗವಾಗಿ ರೈಲು ಆಕ್ಸಿಜನ್ ಅನ್ನು ತಲುಪಿಸುತ್ತಿದೆ.

* ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲನ್ನು ಓಡಿಸುವ ಶಿರಿಷಾ ಗಜನಿ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತನಾಡಿದರು. ತಂದೆ-ತಾಯಿಗಳೇ ನನಗೆ ಸ್ಪೂರ್ತಿ ಎಂದು ಶಿರಿಷಾ ಹೇಳಿದರು. ಶಿರಿಷಾ ಕಾರ್ಯಕ್ಕೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದರು. 1.20 ಗಂಟೆಯಲ್ಲಿ 120 ಕಿ. ಮೀ. ವೇಗದಲ್ಲಿ ರೈಲು ಓಡಿಸಿದ ಅನುಭವ ಹಂಚಿಕೊಂಡರು.

* ಆಕ್ಸಿಜನ್ ತಲುಪಿಸಲು ನಾವು ಸಮುದ್ರ, ವಾಯು, ರಸ್ತೆ ಮಾರ್ಗದ ಮೂಲಕ ಕೆಲಸ ಮಾಡುತ್ತಿದ್ದೇವೆ. ಮತ್ತೊಂದು ಕಡೆ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡುವ ಕಾರ್ಯವೂ ನಡೆಯುತ್ತಿದೆ ಎಂದು ಮೋದಿ ಹೇಳಿದರು.

* ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಪಟ್ನಾಯಕ್ ಪ್ರಧಾನಿಗಳ ಜೊತೆ ಮನ್ ಕೀ ಬಾತ್‌ನಲ್ಲಿ ಮಾತನಾಡಿದರು. ಕಳೆದ 1 ತಿಂಗಳಿನಿಂದ ನಾವು ಆಕ್ಸಿಜನ್ ಟ್ಯಾಂಕರ್ ಸರಬರಾಜು ಮಾಡುವ ಕಾರ್ಯ ಮಾಡುತ್ತಿದ್ದೇವೆ. ಸಿಂಗಾಪುರ, ಬೆಜ್ಪಿಯಂ, ಜರ್ಮನಿ ಮುಂತಾದ ದೇಶಗಳಿಗೆ ಹೋಗಿ ಆಕ್ಸಿಜನ್ ತಂದ ಅನುಭವವನ್ನು ಕ್ಯಾಪ್ಟನ್ ಹಂಚಿಕೊಂಡರು.

* ಕ್ಯಾಪ್ಟನ್ ಪಟ್ನಾಯಕ್ ಪುತ್ರಿ ಅದಿತಿ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತನಾಡಿದರು. ತಂದೆ ಮಾಡುವ ಕೆಲಸದ ಬಗ್ಗೆ ನಮಗೆ ಗರ್ವವಿದೆ. ನನ್ನ ಸ್ನೇಹಿತರು ನಿನ್ನ ತಂದೆ ಮಹತ್ವದ ಕೆಲಸ ಮಾಡುತ್ತಿದ್ದಾರೆ ಎಂದು ಹೊಗಳುತ್ತಾರೆ ಎಂದು ಅದಿತಿ ಹೇಳಿದರು.

* ಮಕ್ಕಳ ಮಾತಿನಲ್ಲಿ ಸರಸ್ವತಿ ಇರುತ್ತಾಳೆ. ಅದಿತಿಗೆ ವಿಶ್ವಾಸವಿದೆ ಆಕೆಯ ಮಾತಿನಂತೆ ನಾವು ಕೋವಿಡ್ ವಿರುದ್ಧದ ಹೋರಾಟದಲ್ಲಿ ಗೆಲ್ಲುತ್ತೇವೆ ಎಂದು ಪ್ರಧಾನ ಮೋದಿ ಹೇಳಿದರು.

* ದೇಶದಲ್ಲಿ ಆಗ ಕೋವಿಡ್ ಮಾದರಿಗಳ ಪರೀಕ್ಷೆಗೆ ಲ್ಯಾಬ್‌ಗಳ ಸಂಖ್ಯೆ ಕಡಿಮೆ ಇತ್ತು. ಈಗ ಲ್ಯಾಬ್‌ಗಳು ಸ್ಥಾಪನೆಯಾಗಿವೆ. 34,31,83,748 ಮಾದರಿಗಳ ಪರೀಕ್ಷೆ ಮಾಡಲಾಗಿದೆ ಎಂದು ಮೋದಿ ಹೇಳಿದರು. ದೆಹಲಿಯ ಲ್ಯಾಬ್ ಟೆಕ್ನಿಷಿಯನ್ ಪ್ರಕಾಶ್ ಖಾಂಡಪಾಲ್ ಮನ್ ಕಿ ಬಾತ್‌ನಲ್ಲಿ ಮಾತನಾಡಿದರು.

* ವೈದ್ಯರು, ಲ್ಯಾಬ್ ಟೆಕ್ನಿಷಿಯನ್‌ಗಳ ಕಾರ್ಯ ಯಶಸ್ವಿಯಾಗಬೇಕಾದರೆ ನಾವು ಸಹ ನಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಆಗ ಮಾತ್ರ ನಾವು ಈ ಸಂಕಟದಿಂದ ಹೊರ ಬರಲು ಸಾಧ್ಯ ಎಂದು ಪ್ರಧಾನಿ ಮೋದಿ ಕರೆ ನೀಡಿದರು.

* ಇಂತಹ ಸಂಕಷ್ಟದ ಸಮಯದಲ್ಲಿ ರೈತ ತನ್ನ ಕಾರ್ಯವನ್ನು ನಿಲ್ಲಿಸಿಲ್ಲ. ದಾಖಲೆಯ ಮಟ್ಟದ ಬೆಳೆಗಳ ಉತ್ಪಾದನೆ ಈಗ ನಡೆದಿದೆ. ಇದರಿಂದಾಗಿ ಬಡ ಜನರಿಗೆ ನಾವು ಉಚಿತವಾಗ ಅಕ್ಕಿಯನ್ನು ನೀಡಲು ಸಾಧ್ಯವಾಗಿದೆ ಎಂದು ಮೋದಿ ಬಣ್ಣಿಸಿದರು.

* ಕೃಷಿಯಲ್ಲಿ ವಿವಿಧ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದೆ. ದಕ್ಷಿಣ ಭಾರತದಲ್ಲಿ ವಿಜಯನಗರಂ ಮಾವಿನ ಬಗ್ಗೆ ನೀವು ಹೇಳಿದ್ದೀರಿ. ಕಿಸಾನ್ ರೈಲಿನ ಮೂಲಕ ಅದನ್ನು ದೆಹಲಿಗೆ ತಲುಪಿಸಲಾಗುತ್ತಿದೆ.

* ಮೇ 30ರಂದು ನಾವು ಮನ್ ಕೀ ಬಾರ್ ಕಾರ್ಯಕ್ರಮ ಮಾಡುತ್ತಿದ್ದೇವೆ. ಸರ್ಕಾರ 7 ವರ್ಷಗಳನ್ನು ಪೂರ್ಣಗೊಳಿಸಿದೆ. ನಾವು ಸಬ್ ಕೀ ಸಾಥ್, ಸಬ್ ಕೀ ವಿಕಾಸ್ ಎಂಬ ಘೋಷಣೆ ಅಡಿಯಲ್ಲಿ ಸರ್ಕಾರವನ್ನು ಮುನ್ನೆಡೆಸುತ್ತಿದ್ದೇವೆ. ರಾಷ್ಟ್ರೀಯ ಸುರಕ್ಷತೆ ವಿಚಾರದಲ್ಲಿ ನಾವು ಎಂದೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಮೋದಿ ಹೇಳಿದರು.

* ನಮಗೆ ಸಾವಿರಾರು ಪತ್ರಗಳು ಬಂದಿವೆ. ನಮ್ಮ ಮನೆಗೆ ಈಗ ವಿದ್ಯುತ್ ಆಗಮಿಸಿದೆ, ಈಗ ರಸ್ತೆ ಆಗಿದೆ, ಈಗ ಬ್ಯಾಂಕ್ ಖಾತೆ ತೆರೆದಿದ್ದೇವೆ ಎಂದು ಹಲವಾರು ಪತ್ರಗಳು ಬಂದಿವೆ ಎಂದು ಮೋದಿ ಬಣ್ಣಿಸಿದರು.

* ಡಿಜಿಟಲ್ ವ್ಯವಹಾರದಲ್ಲಿ ಭಾರತ ಹೊಸ ದಿಕ್ಕಿನಲ್ಲಿ ಸಾಗಿದೆ. ಕ್ಷಣದಲ್ಲೇ ನೀವುವ ಡಿಜಿಟಲ್ ಪೇಮೆಂಟ್ ಮಾಡಬಹುದಾಗಿದೆ. ಕೊರೊನಾ ಕಾಲದಲ್ಲಿ ಇದು ಬಹಳ ಸಹಾಯಕವಾಗಿದೆ.

* ದಶಕಗಳಿಂದ ಆಗದ ಕೆಲಸ 7 ವರ್ಷಗಳಲ್ಲಿ ಆಗಿದೆ. ಇದಕ್ಕೆ ನಾವು ದೇಶಕ್ಕಾಗಿ ಕೆಲಸ ಮಾಡುತ್ತೇವೆ ಎಂದು ಮಾಡಿದ ಕಾರ್ಯಗಳೇ ಕಾರಣವಾಗಿದೆ. ಕೋವಿಡ್ ದೊಡ್ಡ ಸಂಕಟವನ್ನು ನಮಗೆ ತಂದಿದೆ. ಭಾರತ ಸೇವೆ ಮತ್ತು ಸಹಯೋಗದೊಂದಿಗೆ ಮುಂದೆ ಸಾಗುತ್ತಿದೆ.

* ಸಾಮಾಜಿಕ ಅಂತರ, ಮಾಸ್ಕ್ ಧಾರಣೆ, ಕೋವಿಡ್ ಲಸಿಕೆ ಪಡೆಯುವುದು ನಮ್ಮ ಕರ್ತವ್ಯವಾಗಿದೆ. ನೀವೆಲ್ಲರೂ ಸುರಕ್ಷಿತವಾಗಿರಿ. ದೇಶವನ್ನು ಹೀಗಿಯೇ ಮುನ್ನಡೆಸುತ್ತಿರಿ ಎಂದು ಮೋದಿ ಹೇಳಿದರು.

English summary
Prime minister of India Narendra Modi Mann ki baat radio program May 30, 2021. Modi addressed the nation. Here are the highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X