ಭರವಸೆ ನೀಡಿದ್ದಕ್ಕಿಂತ ವೇಗವಾಗಿ ಪೂರ್ಣಗೊಂಡ ಗ್ರಾಮೀಣ ವಿದ್ಯುತ್ ಸಂಪರ್ಕ, ಇದು ಮೋದಿ ಹಾದಿ
Recommended Video

ನವದೆಹಲಿ, ಅಕ್ಟೋಬರ್ 24: ಆಗಸ್ಟ್ 15ನೇ ತಾರೀಕು 2015ನೇ ಇಸವಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಇನ್ನು 1000 ದಿನದಲ್ಲಿ ದೇಶದ ಪ್ರತಿ ಹಳ್ಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುತ್ತೇವೆ ಎಂದಿದ್ದರು. ಏಪ್ರಿಲ್ 28ನೇ ತಾರೀಕು 2018ರಲ್ಲಿ ಮಣಿಪುರದ ಪುಟ್ಟ ಗ್ರಾಮ ಲೀಸಂಗ್ ಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ಮೋದಿ ಸರಕಾರ ಗ್ರಾಮೀಣ ಭಾರತದಲ್ಲಿ ಶೇ 100ರಷ್ಟು ವಿದ್ಯುತ್ ಸಂಪರ್ಕ ಒದಗಿಸಿತು.
ಇದಕ್ಕಾಗಿ ಕೇಳಿದ್ದು 1000 ದಿನಗಳು. ಆದರೆ ಗುರಿ ಈಡೇರಿದ್ದು 988 ದಿನಗಳಲ್ಲಿ. ಗ್ರಾಮೀಣ ವಿದ್ಯುದ್ದೀಕರಣ ಎಂಬುದು ಮೋದಿಯವರ ಬಹು ಪ್ರೀತಿಯ ಯೋಜನೆ. ಚುನಾವಣೆ ಭರವಸೆಗಳ ಪೈಕಿ ಅತಿ ಮುಖ್ಯವಾದದ್ದರಲ್ಲಿ ಇದು ಒಂದಾಗಿತ್ತು. 2014ರ ಚುನಾವಣೆಯ ಒಟ್ಟಾರೆ ಪ್ರಚಾರದಲ್ಲಿ ಅಭಿವೃದ್ಧಿ ಹಾಗೂ ಭ್ರಷ್ಟಾಚಾರಮುಕ್ತ ಆಡಳಿತ ನೀಡುವ ಮಾತು ನೀಡಿದ್ದರು.
ಈ ವರ್ಷದ ಏಪ್ರಿಲ್ 29ನೇ ತಾರೀಕು ನರೇಂದ್ರ ಮೋದಿ ಟ್ವೀಟ್ ಮಾಡಿದರು. "ಭಾರತದ ಅಭಿವೃದ್ಧಿಯ ಪಥದಲ್ಲಿ ಈ ದಿನವು ಐತಿಹಾಸಿಕ ದಿನವಾಗಿ ನೆನಪಿನಲ್ಲಿ ಉಳಿಯುತ್ತದೆ". "ನಿನ್ನೆಯಷ್ಟೇ ನಾವು ನೀಡಿದ ಮಾತನ್ನು ಪೂರ್ತಿ ಮಾಡಿದ್ದೇವೆ. ಇದರಿಂದಾಗಿ ಹಲವಾರು ಭಾರತೀಯರ ಜೀವನದಲ್ಲಿ ಮುಂದೆಂದಿಗೂ ಬದಲಾವಣೆ ಆಗುತ್ತದೆ! ನನಗೆ ಬಹಳ ಸಂತಸವಾಗಿದೆ. ಭಾರತದ ಪ್ರತಿ ಹಳ್ಳಿಗೂ ಈಗ ವಿದ್ಯುತ್ ಸಂಪರ್ಕ ಇದೆ" ಎಂದಿದ್ದರು.

ಭಾರತ ಸ್ವತಂತ್ರಗೊಂಡಾಗ ಅಂದರೆ 1947ರಲ್ಲಿ 1500 ಹಳ್ಳಿಗಳ್ಳಿಗೆ ಮಾತ್ರ ವಿದ್ಯುತ್ ಸಂಪರ್ಕವಿತ್ತು. 1991ನೇ ಇಸವಿ ಹೊತ್ತಿಗೆ 481,124ಕ್ಕೆ ತಲುಪಿತು. ಇಂಧನ ಸಚಿವಾಲಯದ ವರದಿ ಪ್ರಕಾರ 597,464 ಗಣತಿಯಾದ ಹಳ್ಳಿಗಳ ಪೈಕಿ 597,464 ಹಳ್ಳಿಗಳಲ್ಲೂ (ಶೇ 100%) ಈಗ ವಿದ್ಯುತ್ ಸಂಪರ್ಕ ಇದೆ.
ಇದರ ಅರ್ಥ ಎಲ್ಲ 100% ಮನೆಗಳಲ್ಲೂ ವಿದ್ಯುತ್ ಸಂಪರ್ಕ ಇದೆ ಅಂತಲ್ಲ. ಕೇಂದ್ರ ಇಂಧನ ಸಚಿವಾಲಯದ ವ್ಯಾಖ್ಯಾನದ ಪ್ರಕಾರ, ಹಳ್ಳಿಯೊಂದು ವಿದ್ಯುದ್ದೀಕರಣ ಆಗಿದೆ ಅಂದರೆ, 10%ನಷ್ಟು ಮನೆಗಳಿಗೆ ವಿದ್ಯುತ್ ಸಂಪರ್ಕ ಇರಬೇಕು. ಇನ್ನು ಸಾರ್ವಜನಿಕ ಸ್ಥಳಗಳಾದ ಶಾಲೆ, ಪಂಚಾಯಿತಿ ಕಚೇರಿ, ಆರೋಗ್ಯ ಕೇಂದ್ರ ಮತ್ತು ಸಮುದಾಯ ಕೇಂದ್ರಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರಬೇಕು.
ಓಹ್, ಇಷ್ಟೇನಾ ಅಂದುಕೊಳ್ಳಬೇಡಿ. ಗ್ರಾಮೀಣ ಭಾಗದಲ್ಲಿ 100% ವಿದ್ಯುದ್ದೀಕರಣ ಅನ್ನೋದು ಅಷ್ಟು ಸುಲಭದ ಮಾತು ಖಂಡಿತಾ ಅಲ್ಲ. ಗ್ರಾಮೀಣ ಭಾಗದ ವಿದ್ಯುದ್ದೀಕರಣದ ಜತೆಗೆ ಭಾರತವನ್ನು ವಿದ್ಯುತ್ ಮಿಗಿತ ದೇಶವನ್ನಾಗಿ ಮಾಡುವುದು ಸಾಧನೆಯೇ ಸರಿ. ಬಿಜೆಪಿ ಆಡಳಿತಾವಧಿಯಲ್ಲಿ ದೇಶದಲ್ಲಿ ಬೆಳಕು ಹೊತ್ತಿಕೊಂಡಿದೆ. ಆ ಕಾರಣಕ್ಕೆ ಮೋದಿ ಸರಕಾರದಲ್ಲಿ ಇಂಧನ ಸಚಿವಾಲಯ ಅದ್ಭುತವಾಗಿ ಕಾರ್ಯ ನಿರ್ವಹಿಸಿದೆ ಅಂತ ಹೇಳುವುದರಲ್ಲಿ ತಪ್ಪೇನೂ ಇಲ್ಲ.
ಬಿಜೆಪಿ ಸರಕಾರದ ಅವಧಿಯಲ್ಲಿ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ವಿದ್ಯುತ್ ಮಿಗಿತದ ದೇಶವಾಗಿದೆ. ವಿವಿಧ ಸಚಿವಾಲಯದ ಮಧ್ಯೆ ಒಂದು ತಂತು ಬೆಸೆಯುವ ಮೂಲಕ ಆ ಸಾಧನೆ ಮಾಡಲು ಸಾಧ್ಯವಾಗಿದೆ. ಇಂಧನ, ಕಲ್ಲಿದ್ದಲು ಮತ್ತು ಹೊಸದಾದ ನವೀಕರಿಸಬಹುದಾದ ಶಕ್ತಿ ಮೂಲದ ಸಚಿವಾಲಯಗಳೆಲ್ಲ ಒಟ್ಟಾಗಿ ಕೆಲಸ ಮಾಡುವ ಮೂಲಕ ಈ ಸಾಧನೆ ಸಾಧ್ಯವಾಗಿದೆ.
-
ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ-ಬಿ.ಎಸ್.ಯಡಿಯೂರಪ್ಪ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ












Click it and Unblock the Notifications