ಪಿಎಂ ಕೇರ್ಸ್ ನಿಧಿಗೆ ಪ್ರಧಾನಿ ಮೋದಿ ನೀಡಿದ ದೇಣಿಗೆ ಎಷ್ಟು?
ನವದೆಹಲಿ, ಸೆಪ್ಟೆಂಬರ್ 3: ಕೊರೊನಾ ವಿರುದ್ಧದ ಹೋರಾಟದ ಕಾರ್ಯಗಳಿಗೆ ಬಳಸಲು ಆರಂಭಿಸಲಾಗಿರುವ ಪಿಎಂ ಕೇರ್ಸ್ ಫಂಡ್‌ನ ಮೊದಲ ಲೆಕ್ಕಪತ್ರದ ವರದಿಯನ್ನು ಬುಧವಾರ ಬಹಿರಂಗಪಡಿಸಲಾಗಿತ್ತು. ಈ ನಿಧಿಯನ್ನು ಹುಟ್ಟುಹಾಕುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ 2.25 ಲಕ್ಷ ರೂ. ಹಣವನ್ನು ಆರಂಭದಲ್ಲಿ ನೀಡಿದ್ದರು ಎನ್ನುವುದು ಗುರುವಾರ ಬಹಿರಂಗವಾಗಿದೆ.
Recommended Video
ಮಾರ್ಚ್ 27ರಂದು ಸ್ಥಾಪನೆಯಾದ ಪಿಎಂ ಕೇರ್ಸ್ ನಿಧಿಗೆ ಐದೇ ದಿನದಲ್ಲಿ 3,076 ರೂ. ಹಣ ಬಂದಿತ್ತು ಎನ್ನುವುದು ವರದಿಯಾಗಿತ್ತು. ಆದರೆ ಈ ಹಣವು ಪ್ರಧಾನಿ ನರೇಂದ್ರ ಮೋದಿ ಆರಂಭದಲ್ಲಿ ನೀಡಿದ 2.25 ಲಕ್ಷ ರೂ ದೇಣಿಗೆಯನ್ನು ಒಳಗೊಂಡಿಲ್ಲ.
ಪಿಎಂ ಕೇರ್ಸ್ ಫಂಡ್‌ಗೆ ಸ್ವತಃ ತಾವೇ ದೇಣಿಗೆ ನೀಡುವ ಮೂಲಕ ಚಾಲನೆ ನೀಡಿದ ಪ್ರಧಾನಿಯ ನಡೆಯನ್ನು ಬಿಜೆಪಿಯ ಅನೇಕ ನಾಯಕರು ಶ್ಲಾಘಿಸಿದ್ದರು. ಸಾರ್ವಜನಿಕ ಕಾರಣಗಳಿಗಾಗಿ ಪ್ರಧಾನ ಮೋದಿ ತಮ್ಮ ವೈಯಕ್ತಿಕ ಸಂಪತ್ತಿನಿಂದ ದೇಣಿಗೆ ನೀಡಿರುವುದು ಇದು ಮೊದಲ ಸಲವೇನಲ್ಲ. ಹೆಣ್ಣುಮಕ್ಕಳ ಶಿಕ್ಷಣ, ಗಂಗಾ ಸ್ವಚ್ಛತಾ ಯೋಜನೆ ಹಾಗೂ ಸವಲತ್ತುರಹಿತ ಪ್ರಜೆಗಳ ಕಲ್ಯಾಣಕ್ಕೆ ಸೇರಿದಂತೆ ಹಲವು ಸಂದರ್ಭದಲ್ಲಿ ಮೋದಿ ದೇಣಿಗೆ ನೀಡಿದ್ದಾರೆ.

ನರೇಂದ್ರ ಮೋದಿ ಇದುವರೆಗೂ ಇಂತಹ ಯೋಜನೆಗಳು, ಕಾರ್ಯಕ್ರಮಗಳಿಗೆ ನೀಡಿರುವ ಒಟ್ಟು ದೇಣಿಗೆ 103 ಕೋಟಿ ರೂ ದಾಟುತ್ತದೆ ಎಂದು ವರದಿಗಳು ತಿಳಿಸಿವೆ. 2019ರಲ್ಲಿ ಕುಂಭ ಮೇಳದಲ್ಲಿ ಸ್ವಚ್ಛತಾ ಕೆಲಸಗಾರರ ಕಲ್ಯಾಣ ನಿಧಿಯ ಆರಂಭಕ್ಕೆ ತಮ್ಮ ವೈಯಕ್ತಿಕ ಉಳಿತಾಯದಿಂದ 21 ಲಕ್ಷ ರೂ ದೇಣಿಗೆ ನೀಡಿದ್ದರು.
ದಕ್ಷಿಣ ಕೊರಿಯಾದ ಸಿಯೋಲ್ ಪ್ರಶಸ್ತಿಯಿಂದ ಪಡೆದ ಸಂಪೂರ್ಣ 1.3 ಕೋಟಿ ರೂ ಹಣವನ್ನು ಗಂಗಾ ನದಿ ನೀರು ಸ್ವಚ್ಛಗೊಳಿಸುವ ನಮಾಮಿ ಗಂಗಾಕ್ಕೆ ನೀಡಿದ್ದರು. ತಮ್ಮ ಸ್ಮರಣಿಕೆಗಳನ್ನು ಹರಾಜು ಹಾಕುವ ಮೂಲಕ 3.40 ಕೋಟಿ ರೂ ಸಂಗ್ರಹಿಸಿದ್ದರು. ಈ ಸಂಪೂರ್ಣ ಹಣವನ್ನು ಸ್ವಚ್ಚ ಗಂಗಾ ಯೋಜನೆಗೆ ಬಳಸಿದ್ದರು. 2015ರವರೆಗೂ ತಾವು ಪಡೆದ ಕಾಣಿಕೆಗಳ ಹರಾಜಿನಿಂದ ಕೂಡ 8.35 ಕೋಟಿ ಹೆಚ್ಚುವರಿ ಹಣ ಸಂಗ್ರಹ ಮಾಡಿದ್ದರು. ಅದನ್ನು ಸಂಪೂರ್ಣವಾಗಿ ನಮಾಮಿ ಗಂಗೆ ಯೋಜನೆಗೆ ದೇಣಿಗೆಯನ್ನಾಗಿ ನೀಡಿದ್ದರು.
ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ಸರ್ಕಾರಿ ನೌಕರರ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ 21 ಲಕ್ಷ ರೂ ದೇಣಿಗೆ ನೀಡಿದ್ದರು.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications