ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸಂಪುಟ ಸೇರಿದ ಅನಂತಕುಮಾರ್ ಹೆಗಡೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 03 : ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡಿದರು. 9 ನೂತನ ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಂಡರು. ಖಾತೆಗಳ ಮರು ಹಂಚಿಕೆ ಆಗಲಿದ್ದು, ರಕ್ಷಣಾ ಖಾತೆಯನ್ನು ಯಾರಿಗೆ ನೀಡಲಾಗುತ್ತದೆ? ಎಂದು ಕಾದು ನೋಡಬೇಕು.

ಕರ್ನಾಟಕದಿಂದ ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ರಾಜ್ಯ ಸಚಿವರಾಗಿ ಮೋದಿ ಸಂಪುಟ ಸೇರಿದರು. ಭಾನುವಾರ ಬೆಳಗ್ಗೆ ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‌ನಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಿತು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.

ಸಮಯ 11.04 : ಮಾಜಿ ಐಪಿಎಸ್ ಅಧಿಕಾರಿ ಕೇರಳದ ಅಲ್ಫೋನ್ಸ್ ಕಣ್ಣಂತಾನಂ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು

ಸಮಯ 10.55 : ಹರ್ದೀಪ್ ಸಿಂಗ್ ಪುರಿ, ರಾಜ್ ಕುಮಾರ್ ಸಿಂಗ್, ಗಜೇಂದ್ರ ಸಿಂಗ್ ಶೇಖಾವತ್, ಸತ್ಯಪಾಲ್ ಸಿಂಗ್ ಪ್ರಮಾಣ ವಚನ ಸ್ವೀಕಾರ

ಸಮಯ 10.52 : ಉತ್ತರ ಕನ್ನಡ ಕ್ಷೇತ್ರದ ಸಂಸದರಾದ ಅನಂತಕುಮಾರ್ ಹೆಗಡೆ ಅವರು ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಅನಂತಕುಮಾರ್ ಹೆಗಡೆ ಪರಿಚಯಅನಂತಕುಮಾರ್ ಹೆಗಡೆ ಪರಿಚಯ

cabinet expansion

ಸಮಯ 10.50 : ರಾಜ್ಯ ಸಚಿವರಾಗಿ ಶಿವ ಪ್ರಸಾದ್‌ ಶುಕ್ಲಾ, ಅಶ್ವಿನಿ ಕುಮಾರ್ ಚೌಬೆ, ವೀರೇಂದ್ರ ಕುಮಾರ್ ಪ್ರಮಾಣ ವಚನ ಸ್ವೀಕಾರ

ಸಮಯ 10.45 : ಮುಕ್ತಾರ್ ಅಬ್ಬಾಸ್ ನಖ್ವಿ ಅವರು ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು

ಸಮಯ 10.43 : ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಸಮಯ 10.38 : ಕ್ಯಾಬಿನೆಟ್ ದರ್ಜೆ ಸಚಿವರಾಗಿ ಧರ್ಮೇಂದ್ರ ಪ್ರದಾನ್, ಪಿಯೂಷ್ ಗೋಯಲ್ ಪ್ರಮಾಣ ವಚನ ಸ್ವೀಕಾರ

ಸಮಯ 10.30 : ನೂತನ ಸಚಿವರ ಪ್ರಮಾಣ ವಚನ ಸಮಾರಂಭ ಕೆಲವೇ ಕ್ಷಣದಲ್ಲಿ ಆರಂಭವಾಗಲಿದೆ

ಸಮಯ 9.12 : ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಚಿವರನ್ನು ಉಪಹಾರ ಕೂಟಕ್ಕೆ ಆಹ್ವಾನಿಸಿದ್ದಾರೆ. ಸಂಪುಟ ಸೇರಲಿರುವ ಎಲ್ಲಾ ಸಚಿವರು ದೆಹಲಿಯ ರೇಸ್‌ ಕೋರ್ಸ್ ರಸ್ತೆಯಲ್ಲಿರುವ ಪ್ರಧಾನಿ ಮೋದಿ ನಿವಾಸಕ್ಕೆ ತೆರಳಿದ್ದಾರೆ.

ಸಮಯ 9 ಗಂಟೆ : ಮೋದಿ ಸಂಪುಟಕ್ಕೆ 9 ಸಚಿವರು ಸೇರ್ಪಡೆಗೊಳ್ಳಿದ್ದಾರೆ. ಆದರೆ, ರಕ್ಷಣಾ ಖಾತೆಯನ್ನು ಯಾರಿಗೆ ನೀಡಲಾಗುತ್ತದೆ? ಎಂಬುದು ಇನ್ನೂ ಅಂತಿಮವಾಗಿಲ್ಲ. ಮನೋಹರ್ ಪರಿಕ್ಕರ್ ಗೋವಾ ಮುಖ್ಯಮಂತ್ರಿಯಾದ ಬಳಿಕ ರಕ್ಷಣಾ ಖಾತೆಯ ಹೆಚ್ಚುವರಿ ಹೊಣೆಯನ್ನು ಅರುಣ್ ಜೇಟ್ಲಿ ಅವರಿಗೆ ವಹಿಸಲಾಗಿದೆ. ಇಂದು ಸಂಪುಟ ವಿಸ್ತರಣೆಯಾದ ಬಳಿಕ ಖಾತೆಗಳ ಮರು ಹಂಚಿಕೆ ಆಗಲಿದೆ.

ಸಮಯ 8.30 : ಒಬ್ಬರು ಮಾಜಿ ಪೊಲೀಸ್ ಅಧಿಕಾರಿ, ಮೂವರು ನಿವೃತ್ತ ಸರ್ಕಾರಿ ಅಧಿಕಾರಿಗಳು ಇಂದು ಮೋದಿ ಸಂಪುಟ ಸೇರುತ್ತಿದ್ದಾರೆ. ಮುಂಬೈನ ನಿವೃತ್ತ ಪೊಲೀಸ್ ಅಧಿಕಾರಿ ಸತ್ಯಪಾಲ್ ಸಿಂಗ್, ನಿವೃತ್ತ ಸರ್ಕಾರಿ ಅಧಿಕಾರಿಗಳಾದ ಹರ್ದೀಪ್ ಸಿಂಗ್ ಪುರಿ, ನಿವೃತ್ತ ಐಎಎಸ್ ಅಧಿಕಾರಿ ಅಲ್ಫೋನ್ಸ್ ಕಣ್ಣಂತಾನಂ ಮತ್ತು ರಾಜ್ ಕುಮಾರ್ ಸಿಂಗ್ ಮೋದಿ ಸಂಪುಟ ಸೇರಲಿದ್ದಾರೆ.

ಕೇಂದ್ರ ಸಂಪುಟ ವಿಸ್ತರಣೆ ಬಗ್ಗೆ ನನಗೇನೂ ಗೊತ್ತಿಲ್ಲ: ಉದ್ದವ್ ಠಾಕ್ರೆಕೇಂದ್ರ ಸಂಪುಟ ವಿಸ್ತರಣೆ ಬಗ್ಗೆ ನನಗೇನೂ ಗೊತ್ತಿಲ್ಲ: ಉದ್ದವ್ ಠಾಕ್ರೆ

ಕರ್ನಾಟಕದಿಂದ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಮೋದಿ ಸಂಪುಟ ಸೇರಲಿದ್ದಾರೆ. ರಾಜ್ಯದ ಇಬ್ಬರು ಸಂಸದರು ಸಂಪುಟ ಸೇರುವ ನಿರೀಕ್ಷೆ ಇತ್ತು. ಬಿ.ಶ್ರೀರಾಮುಲು, ಬೆಳಗಾವಿ ಸಂಸದ ಸುರೇಶ್ ಅಂಗಡಿ, ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ ಹೆಸರು ಹೇಳಿಬಂದಿತ್ತು. ಅಂತಿಮವಾಗಿ ಉತ್ತರ ಕನ್ನಡ ಜಿಲ್ಲೆಗೆ ಸಚಿವ ಸ್ಥಾನ ಒಲಿದು ಬಂದಿದೆ.

ಸಂಪುಟ ಸೇರುವವರು

* ಹರ್ದೀಪ್ ಸಿಂಗ್ ಪುರಿ (ಪಂಜಾಬ್)
* ಗಜೇಂದ್ರ ಸಿಂಗ್ ಶೇಖಾವತ್ (ಜೋಧಪುರ್‌)
* ನಿವೃತ್ತ ಐಎಎಸ್‌ ಅಧಿಕಾರಿ ಸತ್ಯಪಾಲ್ ಸಿಂಗ್ (ಬಾಗಪತ್, ಉ.ಪ್ರ)
* ಕೇರಳದ ಅಲ್ಫೋನ್ಸ್ ಕಣ್ಣಂತಾನಂ (ಕೇರಳ)
* ಅಶ್ವಿನಿ ಕುಮಾರ್ ಚೌಬೆ (ಬಕ್ಸಾರ್‌, ಬಿಹಾರ)
* ಶಿವ ಪ್ರಸಾದ್‌ ಶುಕ್ಲಾ (ರಾಜ್ಯಸಭಾ ಸದಸ್ಯ, ಉ.ಪ್ರ)
* ವೀರೇಂದ್ರ ಕುಮಾರ್ (ಟೀಕಂಗಢ)
* ರಾಜ್ ಕುಮಾರ್ ಸಿಂಗ್ (ಆರಾ, ಬಿಹಾರ)
* ಅನಂತ ಕುಮಾರ್ ಹೆಗಡೆ (ಉತ್ತರ ಕನ್ನಡ, ಕರ್ನಾಟಕ)

English summary
Nine new ministers joined Prime Minister Narendra Modi cabinet on Sunday, September 3, 2017. Nirmala Sitharaman, Piyush Goyal, Dharmendra Pradhan and Mukhtar Abbas Naqvi get cabinet rank.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X