ಮೋದಿ ಸಂಪುಟದಲ್ಲಿ ಯಾರಿಗೆ, ಯಾವ ಖಾತೆ?

Posted By:
Subscribe to Oneindia Kannada

ಬೆಂಗಳೂರು, ಜುಲೈ 06 : ಪ್ರಧಾನಿ ನರೇಂದ್ರ ಮೋದಿ ಅವರು 19 ಸಚಿವರನ್ನು ಸೇರಿಸಿಕೊಳ್ಳುವ ಮೂಲಕ ಸಂಪುಟ ಪುನಾರಚನೆ ಮಾಡಿದ್ದಾರೆ. ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದ್ದು, ಹಿಂದೆ ಇದ್ದ ಸಚಿವರ ಖಾತೆಯಲ್ಲಿಯೂ ಬದಲಾವಣೆಯಾಗಿದೆ.

ವಿವಾದಗಳಿಂದಲೇ ಸುದ್ದಿ ಮಾಡುತ್ತಿದ್ದ ಸ್ಮೃತಿ ಇರಾನಿ ಅವರ ಖಾತೆ ಬದಲಾವಣೆಯಾಗಿದೆ. ಪ್ರಕಾಶ್ ಜಾವಡೇಕರ್ ಅವರಿಗೆ ಮಾನವ ಸಂಪನ್ಮೂಲ ಖಾತೆ ನೀಡಲಾಗಿದ್ದು, ಸ್ಮೃತಿ ಇರಾನಿ ಅವರಿಗೆ ಜವಳಿ ಖಾತೆಯ ಹೊಣೆ ನೀಡಲಾಗಿದೆ. [ಖಾತೆ ಹಂಚಿಕೆಯಲ್ಲಿ ಭಾರೀ ಬದಲಾವಣೆ, ಸ್ಮೃತಿಗೆ ಶಾಕ್]

cabinet expansion

ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ.ಸದಾನಂದ ಗೌಡ ಅವರ ಖಾತೆ ಮತ್ತೆ ಬದಲಾವಣೆಯಾಗಿದೆ. ಅವರ ಕೈಯಲ್ಲಿದ್ದ ಕಾನೂನೂ ಖಾತೆ ರವಿಶಂಕರ ಪ್ರಸಾದ್ ಅವರ ಪಾಲಾಗಿದೆ. ಸದಾನಂದ ಗೌಡರಿಗೆ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಖಾತೆ ನೀಡಲಾಗಿದೆ. [ಮೋದಿ ಸಂಪುಟ: 19 ಹೊಸ ಮುಖಗಳು ಇನ್, 6 ಮಂದಿ ಔಟ್]

ಕರ್ನಾಟಕದ ಸಚಿವರು
* ರಮೇಶ್ ಜಿಗಜಿಣಗಿ - ಕುಡಿಯುವ ನೀರು ಮತ್ತು ನೈರ್ಮಲ್ಯ
* ಜಿ.ಎಂ.ಸಿದ್ದೇಶ್ವರ - ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ
* ಅನಂತ್ ಕುಮಾರ್ - ರಾಸಾಯನಿಕ ಮತ್ತು ರಸಗೊಬ್ಬರ, ಸಂಸದೀಯ ವ್ಯವಹಾರ
* ಡಿ.ವಿ.ಸದಾನಂದ ಗೌಡ - ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ

ಬದಲಾದ ಖಾತೆಗಳು

* ಅರುಣ್ ಜೇಟ್ಲಿ - ಹಣಕಾಸು, ಕಾರ್ಪೊರೇಟ್ ವ್ಯವಹಾರ
* ಎಂ.ವೆಂಕಯ್ಯ ನಾಯ್ಡು - ನಗರಾಭಿವೃದ್ಧಿ, ಬಡತನ ನಿರ್ಮೂಲನೆ, ವಾರ್ತಾ ಮತ್ತು ಪ್ರಸಾರ
* ಸ್ಮೃತಿ ಇರಾನಿ - ಜವಳಿ
* ಪ್ರಕಾಶ್ ಜಾವಡೇಕರ್ - ಮಾನವ ಸಂಪನ್ಮೂಲ ಅಭಿವೃದ್ಧಿ
* ಡಿ.ವಿ.ಸದಾನಂದ ಗೌಡ - ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ
* ಅನಂತ್ ಕುಮಾರ್ - ರಸಗೊಬ್ಬರ, ಸಂಸದೀಯ ವ್ಯವಹಾರ
* ರವಿಶಂಕರ ಪ್ರಸಾದ್ - ಮಾಹಿತಿ ತಂತ್ರಜ್ಞಾನ, ಕಾನೂನು
* ತಾವರ್ ಚಂದ್ ಗೆಹ್ಲೋಟ್ - ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Narendra Modi rejigged his council of ministers on Tuesday, inducting 19 new ministers. Here are the portfolios of ministers.
Please Wait while comments are loading...