ಮಹಿಳೆಯರಿಗೆ ನೈಟ್ ಶಿಫ್ಟ್ ಕೆಲ್ಸ, ಮೋದಿ ಸಂಪುಟ ಓಕೆ
ನವದೆಹಲಿ, ಜು.31: ದುಡಿಮೆ ವಿಚಾರದಲ್ಲಿ ಮಹಿಳೆಯರಿಗೆ ಪುರುಷರ ಸರಿಸಮಾನತೆ ಖಾತರಿಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕಾರ್ಖಾನೆ ಕಾಯ್ದೆ ಸೇರಿದಂತೆ ಮೂರು ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತರಲಾಗಿದ್ದು, ನರೇಂದ್ರ ಮೋದಿ ಸಚಿವ ಸಂಪುಟ ತಿದ್ದುಪಡಿಗಳಿಗೆ ಅನುಮೋದನೆ ನೀಡಿದೆ.
ಮೂರು ಕಾಯ್ದೆಗಳ ಪೈಕಿ ಕಾರ್ಮಿಕ ಕಾಯ್ದೆಯಡಿಯಲ್ಲಿ ಮಹಿಳೆಯರಿಗೆ ರಾತ್ರಿ ಪಾಳಿ ಕೆಲಸಕ್ಕೆ ಅನುಕೂಲ ಕಲ್ಪಿಸಲು ಮುಂದಾಗಿದೆ. ಅಲ್ಲದೇ, ಓವರ್ ಟೈಂನ ಕಾಲಾವಧಿಯನ್ನೂ ವಿಸ್ತರಿಸಲು ತೀರ್ಮಾನಿಸಲಾಗಿದೆ. ರಾಜ್ಯಸಭೆಗೆ ಸಲ್ಲಿಸಲಾಗಿರುವ ಲಿಖಿತ ಉತ್ತರದಲ್ಲಿ, ಗಣಿಗಾರಿಕೆ, ಉಕ್ಕು ಹಾಗೂ ಉದ್ಯೋಗ ಮತ್ತು ತರಬೇತಿ ಇಲಾಖೆಯ ರಾಜ್ಯ ಸಚಿವ ವಿಷ್ಣು ಡಿಯೋ ಸಾಯಿ ಈ ವಿಚಾರ ತಿಳಿಸಿದ್ದಾರೆ.
ಏನಿದು ತಿದ್ದುಪಡಿ?: ಸಿಬ್ಬಂದಿಯ ಸೇವಾ ಅವಧಿ ಉಲ್ಲೇಖಿಸಲಾಗಿರುವ ಕಾರ್ಖಾನೆ ಕಾಯ್ದೆಯ 66ನೇ ವಿಧಿಯನ್ನು ತಿದ್ದುಪಡಿಗೆ ಒಳಪಡಿಸಲಾಗುವುದು ಎಂದು ವಿಷ್ಣು ಡಿಯೋ ಸಾಯಿ ಹೇಳಿದ್ದಾರೆ. ತಿದ್ದುಪಡಿಯಲ್ಲಿ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಗೆ ಭದ್ರತೆ ನೀಡುವುದರ ಜೊತೆ, ಅವರನ್ನು ಮನೆ ಬಾಗಿಲಿಗೆ ತಲುಪಿಸುವ ಜವಾಬ್ದಾರಿಯನ್ನು ಕಾರ್ಖಾನೆಗಳ ವ್ಯವಸ್ಥಾಪಕ ಮಂಡಳಿಗಳು ವಹಿಸಿಕೊಳ್ಳಬೇಕೆಂಬ ಅಂಶವನ್ನೂ ಸೇರಿಸಲಾಗುವುದು ಎಂದು ಸಾಯಿ ವಿವರಿಸಿದರು.

ಓವರ್ ಟೈಂನಲ್ಲಿ ದುಡಿಯಬಹುದು.
66ನೇ ವಿಧಿಯ ತಿದ್ದುಪಡಿ ಜೊತೆಗೆ, ಕಾಯ್ದೆಯ 64, 65ನೇ ವಿಧಿಯನ್ನೂ ತಿದ್ದುಪಡಿ ಮಾಡಿ ಓವರ್ ಟೈಂನ ಅವಧಿಯನ್ನು ಹೆಚ್ಚಿಸಲಾಗುತ್ತದೆ. ಪ್ರಸ್ತುತ, ಒಂದು ತ್ರೈಮಾಸಿಕದಲ್ಲಿ ಒಬ್ಬ ನೌಕರ ಗರಿಷ್ಠ 50 ಗಂಟೆಗಳವರೆಗೆ ಓವರ್ ಟೈಂನಲ್ಲಿ ದುಡಿಯಬಹುದು. ಇದನ್ನು ತಿದ್ದುಪಡಿಗೊಳಿಸಿ, ಪ್ರತಿ ತ್ರೈ ಮಾಸಿಕದಲ್ಲಿ 100 ಗಂಟೆಗಳ ಕಾಲ ಓವರ್ ಟೈಂ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ಸಾಯಿ ತಿಳಿಸಿದ್ದಾರೆ.
ಇದಲ್ಲದೆ ಕಾರ್ಮಿಕ ಕಾಯ್ದೆ ಜತೆಗೆ ಬಾಲ ಕಾರ್ಮಿಕ ಕಾಯ್ದೆ(ನಿರ್ಮೂಲನೆ) 1986, ಕನಿಷ್ಠ ವೇತನ ಕಾಯ್ದೆ 1948ಗೂ ತಿದ್ದುಪಡೆ ತರಲು ಮೋದಿ ಸರ್ಕಾರ ಮುಂದಾಗಿದೆ. ಈಗಿನ ತಿದ್ದುಪಡಿ ಬದಲಾವಣೆ ಹೀಗಿದೆ

ಕಾರ್ಖಾನೆ ಕಾಯ್ದೆ 1948
ರಾತ್ರಿ ಪಾಳಿ: ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸಲು ಮಹಿಳೆಯರಿಗೆ ಅವಕಾಶ, ಸೂಕ್ತ ಭದ್ರತೆ ಒದಗಿಸುವುದು.
ಓವರ್ ಟೈಂ: ಅವಧಿಯನ್ನು ಪ್ರತಿ ತ್ರೈಮಾಸಿಕಕ್ಕೆ 50 ಗಂಟೆಯಿಂದ 100 ಗಂಟೆಗೆ ವಿಸ್ತರಣೆ.

ಶಿಶಿಕ್ಷು ಕಾಯ್ದೆ 1961
* APPRENTICESHIP ACT, 1961 ಪಾಲಿಸದ ಕಾರ್ಖಾನೆಯ ಮಾಲೀಕರಿಗೆ ಬಂಧನ, ಪ್ರತಿ ತಿಂಗಳ ಶಿಶಿಕ್ಷು 500 ರು ದಂಡ ವಿಧಿಸಲಾಗುವುದು.
* ಹೊಸ ಟ್ರೇಡ್ ಸೇರಿಸಲು ಅವಕಾಶ ಆದರೆ, ಕೇಂದ್ರ ಸರ್ಕಾರದ ಅನುಮತಿ ಅಗತ್ಯ.
* ಗುತ್ತಿಗೆ ಆಧಾರಿತ ನೌಕರರು, ದಿನಗೂಲಿಗಳು, ಏಜೆನ್ಸಿ ಕಾರ್ಮಿಕರು, ಕ್ಯಾಷುವಲ್ ವರ್ಕರ್ಸ್ ಈ ಕಾಯಿದೆ ಒಳಪಡುತ್ತಾರೆ.
* ಖಾಯಂ ನೌಕರರಿಗೆ ಸಿಗುವ ರಜೆ, ಶಿಫ್ಟ್ ಹಾಗೂ ವೇಳಾಪಟ್ಟಿ ಮೇಲ್ಕಂಡ ನೌಕರರಿಗೂ ಅನ್ವಯವಾಗಲಿದೆ.

ಕಾರ್ಮಿಕ ಕಾಯ್ದೆ 1988
* ಪ್ರತಿ ನೌಕರ ಹಾಗೂ ಕಂಪನಿ ಹಾಗೂ ಹೋಗುಗಳ ಬಗ್ಗೆ ರಿಜಿಸ್ಟ್ರಾರ್ ನಲ್ಲಿ ದಾಖಲಿಸಬೇಕು.
* ದೊಡ್ಡ ಸಂಸ್ಥೆಗಳು ಇ ಮಾಧ್ಯಮ ಬಳಸಿ ಕಡತಗಳನ್ನು ಸಂರಕ್ಷಿಸಲು ಪ್ರೋತ್ಸಾಹ.
* ಸಣ್ಣ ಉದ್ಯಮ ಎಂದರೆ 10 ರಿಂದ 40 ಮಂದಿ ಉದ್ಯೋಗಸ್ಥರಿರುವ ಸಂಸ್ಥೆ ಎಂದು ವ್ಯಾಖ್ಯೆ ಬದಲು.












Click it and Unblock the Notifications