ಕಾಂಗ್ರೆಸ್ ಅಸ್ತಿತ್ವ ಉಳಿಸಿಕೊಳ್ಳಲು ಸಿಬಿಐ ಬಳಕೆ : ಮೋದಿ

ಬಹರೈಚ್ (ಉತ್ತರ ಪ್ರದೇಶ), ನ.8 : "ಬಿಜೆಪಿ ಮತ್ತು ನರೇಂದ್ರ ಮೋದಿಯನ್ನು ಪ್ರಜಾಪ್ರಭುತ್ವ ಮಾದರಿಯಲ್ಲಿ ಸೋಲಿಸಲು ಸಾಧ್ಯವಿಲ್ಲ ಎಂದು ಅರಿತಿರುವ ಕಾಂಗ್ರೆಸ್ ಸಿಬಿಐ ಸೇರಿದಂತೆ ಇತರ ತಂತ್ರಗಳನ್ನು ಅನುಸರಿಸುತ್ತಿದೆ" ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಶುಕ್ರವಾರ ಉತ್ತರ ಪ್ರದೇಶದ ಬಹರೈಚ್ ನಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ನರೇಂದ್ರ ಮೋದಿ ಮಾತನಾಡಿದರು.

ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಸಮಾಜವಾದಿ ಪಕ್ಷ, ಕಾಂಗ್ರೆಸ್, ಬಿಎಸ್ಪಿ ಪಕ್ಷದ ವಿರುದ್ಧವೂ ಆರೋಪಗಳ ಸುರಿಮಳೆ ಸುರಿಸಿದ ಮೋದಿ, ಮೂರು ಪಕ್ಷಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಹೆಸರೊಂದನ್ನು ಬಿಟ್ಟು ಎಂದು ವ್ಯಂಗ್ಯವಾಡಿದರು. ಮೂರು ಪಕ್ಷಗಳಿಗೂ ಜನರ ಸಂಕಷ್ಟಕ್ಕೆ ಸ್ಪಂದಿಸುವುದಿಲ್ಲ ಎಂದು ದೂರಿದರು.

Narendra Modi

ಕಾಂಗ್ರೆಸ್ ಯುವ ನೇತಾರ ದಿನವೊಂದಕ್ಕೆ ಕುಡಿಯುವ ನೀರಿಗೆ ವ್ಯಯಿಸುವ ಮೊತ್ತ 100 ರಿಂದ 200 ರೂಪಾಯಿಯಾಗಿದ್ದರೆ, ಅದೇ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ನಿಗದಿಗೊಳಿಸಿರುವ ಬಡಪಾಯಿಯೊಬ್ಬನ ಖರ್ಚಿನ ವೆಚ್ಚ ಕೇವಲ 26 ರೂಪಾಯಿ ಎಂದು ನರೇಂದ್ರ ಮೋದಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ನರೇಂದ್ರ ಮೋದಿ ಭಾಷಣದ ಮುಖ್ಯಾಂಶಗಳು

* ಕಾಂಗ್ರೆಸ್ ಬಿಜೆಪಿ ಮತ್ತು ನರೇಂದ್ರ ಮೋದಿಯನ್ನು ಪ್ರಜಾಪ್ರಭುತ್ವ ಮಾದರಿಯಲ್ಲಿ ಸೋಲಿಸಲು ಸಾಧ್ಯವಿಲ್ಲ ಎಂದಾಗ ಸಿಬಿಐ ಮುಂತಾದ ಇತರ ಅಸ್ತ್ರಗಳನ್ನು ಬಳಸುತ್ತದೆ.

* ದೇಶದಲ್ಲಿ ಇಂದು ಬದಲಾವಣೆಯ ಪ್ರಕ್ರಿಯೆ ತ್ವರಿತವಾಗಿ ನಡೆಯುತ್ತಿದೆ. ಅದು ಕೆಲವು ಭಾಗಗಳಿಗೆ ಮಾತ್ರ ಸೀಮಿತವಾಗಿಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿ ವರಗೆ ದೇಶ ಬದಲಾಗಲು ಹಂಬಲಿಸುತ್ತಿದೆ ಎಂದು ನರೇಂದ್ರ ಮೋದಿ ಹೇಳಿದರು.

* ಉತ್ತರ ಪ್ರದೇಶದಲ್ಲಿ ಕೋಮು ಗಲಭೆಯನ್ನು ನಿಯಂತ್ರಿಸಲು ಸಾಧ್ಯವಾಗದ ಸರ್ಕಾರ, ನಮ್ಮ ಪಕ್ಷದ ಇಬ್ಬರು ಶಾಸಕರನ್ನು ಬಂಧಿಸಿ ಜೈಲಿಗೆ ಕಳುಹಿಸಿದೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ನೀವು ಇಂತಹ ನೀತಿ ಅನುಸರಿಸುತ್ತೀರಿ ಎಂಬುದು ಎಲ್ಲರಿಗೂ ತಿಳಿದಿದೆ.

* ಗನ್ ಮತ್ತು ಬಾಂಬ್ ಗಳಿಂದ ಆಡಳಿತ ನಡೆಸುವ ಪಕ್ಷಗಳಿಗೆ ನಾವು ಸ್ಪಷ್ಟ ಸಂದೇಶ ಕಳುಸುತ್ತೇವೆ. ನಾವು ದೇಶದಲ್ಲಿ ಇಂತಹ ಆಡಳಿತ ನಡೆಸುವುದಿಲ್ಲ. ಭಯೋತ್ಪಾದನೆ ನಿರ್ಮೂಲನೆಯೇ ನಮ್ಮ ಗುರಿಯಾಗಿದೆ.

* ಮಂದಿನ ಚುನಾವಣೆಯಲ್ಲಿ ಇಂಡಿಯನ್ ಮುಜಾಹಿದ್ದೀನ್ ಮತ್ತು ಸಿಬಿಐ ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸಲಿವೆ. ಕಾಂಗ್ರೆಸ್ ನೇರವಾಗಿ ಚುನಾವಣೆ ಎದುರಿಸದೆ ಇವುಗಳ ಮೂಲಕ ಚುನಾವಣೆ ಎದುರಿಸಲಿದೆ.
* ನಿಮ್ಮಲ್ಲಿ ಶಕ್ತಿ ಇದ್ದರೆ ನಮ್ಮನ್ನು ಪ್ರಜಾಪ್ರಭುತ್ವ ಮಾದರಿಯಲ್ಲಿ ಎದುರಿಸಿ, ಬ್ರಿಟಿಷರ ಮಾದರಿಯ ಆಡಳಿತ ನಮಗೆ ಬೇಡ. ದೇಶದ ಜನರು ಸತ್ಯಕ್ಕಾಗಿ ಹೋರಾಟ ನಡೆಸುತ್ತಿದ್ದರು.

* ಕೆಂಪುಕೋಟೆಯಲ್ಲಿ ಪ್ರಧಾನಿ ಭಾಷಣ ಮಾಡುವಾಗ, ನರೇಂದ್ರ ಮೋದಿ ಅವರ ಭಾಷಣ ಟಿವಿಗಳಲ್ಲಿ ಪ್ರಸಾರವಾಗಿದ್ದು ಹೇಗೆ ಎಂದು ವಾರ್ತಾ ಇಲಾಖೆಗೆ ಸರ್ಕಾರ ಹೇಳಿದೆ. ನನ್ನ ಭಾಷಣವನ್ನು ಕಾಂಗ್ರೆಸ್ ನವರು ಸಹಿಸಿಕೊಳ್ಳುವುದಿಲ್ಲ.

* ಭಯೋತ್ಪಾದರಕ ಬಂದೂಕು ದೇಶದ ಅಭಿವೃದ್ಧಿಯನ್ನು ತಡೆಯಲು ಸಾಧ್ಯವಿಲ್ಲ. ನಾವು ನಡೆಸುವ ಆಡಳಿತದಿಂದ ದೇಶದಲ್ಲಿ ಹೊಸ ಬೆಳಕು ಮೂಡುತ್ತದೆ. ಭಯೋತ್ಪಾದಕರು ತಮ್ಮ ಬಂದೂಕಿನ ಮೂಲಕ ಮುಗ್ಧರ ಹತ್ಯೆ ಮಾಡುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+