ಮನ್ ಕಿ ಬಾತ್ ಮೂಲಕ ದೇಶವನ್ನು ಉದ್ದೇಶಿಸಿ ಮೋದಿ ಭಾಷಣ

ನವದೆಹಲಿ, ಜುಲೈ 29 : ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ರೆಡಿಯೋ ಕಾರ್ಯಕ್ರಮದ ಮೂಲಕ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದರು. ಇದು ಮನ್ ಕಿ ಬಾತ್ ಸರಣಿಯ 46ನೇ ಕಾರ್ಯಕ್ರಮವಾಗಿದೆ.

ಭಾನುವಾರ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಗುರುನಾನಕ್, ಸಂತ ಕಬೀರ್ ದಾಸ್, ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರನ್ನು ನೆನಪು ಮಾಡಿಕೊಂಡರು. ಜಿಎಸ್‌ಟಿ, ಥಾಯ್ಲೆಂಡ್ ಗುಹೆಯಿಂದ ಮಕ್ಕಳನ್ನು ರಕ್ಷಣೆ ಮಾಡಿದ ಕಾರ್ಯ ಮುಂತಾದ ವಿಚಾರಗಳ ಬಗ್ಗೆ ಮಾತನಾಡಿದರು.

Narendra Modi addresses nation on 46th edition of Mann Ki Baat

ಪರಿಸರದ ಬಗ್ಗೆ ಮಾತನಾಡಿದ ಮೋದಿ ಪರಿಸರ ರಕ್ಷಣೆಯ ಕಾರ್ಯದ ಮಹತ್ವವನ್ನು ತಿಳಿಸಿದರು.

ಅಹಮದಾಬಾದ್‌ನ ಆಟೋ ಚಾಲಕನ ಮಗಳಾದ ಅಫ್ರಿನ್ ಶೇಖ್ ಕಡು ಬಡತನದ ನಡುವೆಯೇ ಜಿಎಸ್ಇಬಿ ಪರೀಕ್ಷೆಯಲ್ಲಿ 98.31ರಷ್ಟು ಅಂಕಗಳನ್ನು ಪಡೆದಿದ್ದಳು. ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ಅಫ್ರಿನ್ ಶೇಖ್ ಸಾಧನೆಯನ್ನು ಶ್ಲಾಘಿಸಿದರು.

ಅಫ್ರಿನ್ ಶೇಖ್ ಮೋದಿ ಅವರು ತಮ್ಮ ಹೆಸರು ಹೇಳಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.

ಇದ್ದಕ್ಕಿದ್ದಂತೆ ಸುರಿದ ಮಳೆಯಿಂದಾಗಿ ಥೈಲ್ಯಾಂಡ್‌ನ ಗುಹೆಯಲ್ಲಿ 12 ಬಾಲಕರು ಸಿಕ್ಕಿಬಿದ್ದಿದ್ದರು. ಘಟನೆ ವೇಳೆ ಜನರು ತೋರಿದ ಜವಾಬ್ದಾರಿ ಅತ್ಯುತ್ತಮವಾಗಿತ್ತು. ಈ ಕಾರ್ಯಾಚರಣೆಯ ತಾಳ್ಮೆ, ಶೂರತೆಯಿಂದ ಜನರು ಸಾಕಷ್ಟು ಕಲಿಯುವುದು ಇದೆ ಎಂದು ಮೋದಿ ಹೇಳಿದರು.

ಜುಲೈ ತಿಂಗಳು ರೈತರು ಮತ್ತು ವಿದ್ಯಾರ್ಥಿಗಳಿಗೆ ಅತ್ಯಂತ ಕಠಿಣ ಸಮಯವಾಗಿದೆ. ಹೊಸ ಕಾಲೇಜು ಮತ್ತು ಶಾಲೆಗಳಿಗೆ ಮಕ್ಕಳು ದಾಖಲಾಗಬೇಕಾಗುತ್ತದೆ. ಕೆಲ ವಿದ್ಯಾರ್ಥಿಗಳು ಮನೆಯಿಂದ ಹೊರಬಂದು ಕಾಲೇಜು ಸೇರಿಕೊಳ್ಳಬೇಕಾಗುತ್ತದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+