ಮೋದಿ ವಿರುದ್ಧದ ಭಾಷಣ ನಂದಲ್ಲ: ನಾರಾಯಣಮೂರ್ತಿ

Subscribe to Oneindia Kannada

ಬೆಂಗಳೂರು, ಡಿಸೆಂಬರ್. 08: ನಾನು ಮೋದಿ ವಿರುದ್ಧ ಭಾಷಣ ಮಾಡಿಲ್ಲ ಎಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಸ್ಪಷ್ಟನೆ ನೀಡಿದ್ದಾರೆ. ನಾನು ಮೋದಿ ವಿರುದ್ಧ ಮಾತನಾಡಿದಂತಹ ಆಡಿಯೋ ಕ್ಲಿಪಿಂಗ್ ಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಅದಕ್ಕೆ ನನಗೆ ಸಂಬಂಧವಿಲ್ಲ ಎಂದು ಹೇಳಿದ್ದಾರೆ

ನಾನು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾತನಾಡಿದ ಕುರಿತು ಸ್ನೇಹಿತರು ಸಂದೇಶ ರವಾನಿಸಿ ಕೇಳಿದ್ದಾರೆ. ಎಲ್ಲರಿಗೂ ಸ್ಪಷ್ಟನೆ ನೀಡಲು ಸಾಧ್ಯವಿಲ್ಲದ ಕಾರಣ ಫೇಸ್ ಬುಕ್ ಮೂಲಕ ನಾನು ಮಾತನಾಡಿಲ್ಲ ಎಂದು ಎಲ್ಲರಿಗೆ ತಿಳಿಸುತ್ತಿದ್ದೆನೆ ಎಂದು ಮೂರ್ತಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.[ಭಯದಲ್ಲಿ ಬದುಕುತಿಹ ಅಲ್ಪಸಂಖ್ಯಾತರು : ನಾರಾಯಣ ಮೂರ್ತಿ ಉವಾಚ]

bengaluru

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನನಗೆ ಗೌರವವಿದೆ. ಅದನ್ನು ಕಳೆದ ಹಲವು ಸಂದರ್ಶನಗಳಲ್ಲಿ ಹೇಳಿದ್ದೇನೆ. ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಭಾಷಣ ನಕಲಿಯಾಗಿದ್ದು ಅದಕ್ಕೂ ನನಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ನಾರಾಯಣ ಮೂರ್ತಿ ಅಸಹಿಷ್ಣುತೆ ಬಗ್ಗೆ ಮಾತನಾಡಿದ್ದರು. ಭಾರತದಲ್ಲಿ ಅಲ್ಪಸಂಖ್ಯಾತರು ಭಯದಲ್ಲಿ ಬದುಕುತ್ತಿದ್ದಾರೆ ಎಂಬ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದರು.

bengaluru

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Infosys co-founder Narayana Murthy has taken to social-networking platform Facebook to clarify that he has not given any speech on Prime Minister Narendra Modi. In a post Murthy wrote, "I have been receiving several messages from friends and colleagues about a supposed speech with my name on it. I am told this has been circulating over WhatsApp. Since I am not able to reply to everybody individually I am posting my response here.
Please Wait while comments are loading...